Bengaluru | ಸ್ನೇಹಿತನ ಮನೆಯಲ್ಲೇ ದರೋಡೆ – ದಂಪತಿ ಬಂಧನ

ಸ್ನೇಹಿತನ ಮನೆಯಲ್ಲೇ ಚಿನ್ನಾಭರಣ ದೋಚಿದ್ದ ಕಿಲಾಡಿ ದಂಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ Bengaluru ಆರ್.ಆರ್. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತರಿಂದ 230 ಗ್ರಾಂ ಚಿನ್ನ ವಶ
ಬಂಧಿತರನ್ನು ಶರ್ಮಿಳಾ ಮತ್ತು ಗಣೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಆರ್.ಆರ್. ನಗರ ಪೊಲೀಸರು ಬಂಧಿಸಿ, ಅವರಿಂದ ಸುಮಾರು 230 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನು ಓದಿ : ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ – ಖತರ್ನಾಕ್ ಕಳ್ಳರು ಅರೆಸ್ಟ್.!
ಒಂದು ವರ್ಷದ ಹಿಂದೆಯೇ ಕಳ್ಳತನ
ಮಾಹಿತಿಯ ಪ್ರಕಾರ, ಈ ಕಳ್ಳತನ ಒಂದು ವರ್ಷದ ಹಿಂದೆಯೇ ನಡೆದಿದ್ದು, ದೂರುದಾರ ಪದ್ಮಜಾ ರಾವ್ ಅವರಿಗೆ ಕಣ್ಣು ಕಾಣಿಸದಿರುವುದರಿಂದ ಚಿನ್ನ ಕಳವು ನಡೆದಿರುವ ವಿಷಯವೇ ಅವರಿಗೆ ತಿಳಿದಿರಲಿಲ್ಲ. ಈ ವರ್ಷದ ಮೇ ತಿಂಗಳಲ್ಲಿ ಅವರು ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು.
Bengaluru – ಕದ್ದಿದ್ದ ಚಿನ್ನಾಭರಣವನ್ನು ಸೀಜ್
ಇನ್ನು ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ಕದ್ದಿದ್ದ ಚಿನ್ನಾಭರಣವನ್ನು ಸೀಜ್ ಮಾಡಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ರಾಜ್ಯದ ಸದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ




