RCB vs GT ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಆರ್ಸಿಬಿ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ (RCB vs GT) ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಇಂದು ಮುಖಾಮುಖಿಯಾಗಲಿವೆ. ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯವು ಫೈನಲ್ಗೆ ನೇರ ಪ್ರವೇಶ ಪಡೆಯುವ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
ಸತತ ಎರಡನೇ ಬಾರಿ ಫೈನಲ್ಗೆ ಪ್ರವೇಶಿಸುವ ಗುರಿ
ರಜತ್ ಪಾಟೀದಾರ್ ನಾಯಕತ್ವದ ಆರ್ಸಿಬಿ ತಂಡ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ 14 ಪಂದ್ಯಗಳಲ್ಲಿ 18 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ಹಾಲಿ ಚಾಂಪಿಯನ್ಸ್ ಆಗಿರುವ ಆರ್ಸಿಬಿ ಸತತ ಎರಡನೇ ಬಾರಿ ಫೈನಲ್ಗೆ ಪ್ರವೇಶಿಸುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ.
READ THIS : ಭಾರತ ಮಹಿಳಾ ನಾಯಕಿ ಹರ್ಮನ್ಪ್ರೀತ್ಗೆ ಪದ್ಮಶ್ರೀ ಪ್ರಶಸ್ತಿ..!

ಎರಡನೇ ಹಂತದಲ್ಲಿ ಭರ್ಜರಿ ಕಮ್ಬ್ಯಾಕ್
ಇನ್ನೊಂದೆಡೆ, ಶುಭ್ಮನ್ ಗಿಲ್ ಸಾರಥ್ಯದ ಜಿಟಿ ತಂಡ ಆರಂಭದಲ್ಲಿ ನಿಧಾನಗತಿಯ ಪ್ರದರ್ಶನ ನೀಡಿದ್ದರೂ, ಟೂರ್ನಿಯ ಎರಡನೇ ಹಂತದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿ 18 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿತು. ಕಳೆದ ಪಂದ್ಯದಲ್ಲಿ ಆರ್ಸಿಬಿಯನ್ನು ಮಣಿಸಿದ್ದ ಆತ್ಮವಿಶ್ವಾಸದೊಂದಿಗೆ ಜಿಟಿ ಇದೀಗ ಮತ್ತೊಮ್ಮೆ ಗೆಲುವಿನ ಲಯ ಮುಂದುವರಿಸಲು ಸಜ್ಜಾಗಿದೆ.
ಉಭಯ ತಂಡಗಳು ಫೈನಲ್ ಟಿಕೆಟ್ಗಾಗಿ ಪೈಪೋಟಿ
ಲೀಗ್ ಹಂತದಲ್ಲಿ ಈ ಎರಡು ತಂಡಗಳು ತಲಾ ಒಂದೊಂದು ಪಂದ್ಯಗಳಲ್ಲಿ ಜಯಗಳಿಸಿದ್ದರಿಂದ ಕ್ವಾಲಿಫೈಯರ್ ಕಾದಾಟ ಮತ್ತಷ್ಟು ರೋಚಕತೆ ಮೂಡಿಸಿದೆ. ಬಲಿಷ್ಠ ಬ್ಯಾಟಿಂಗ್ ಮತ್ತು ಸಮತೋಲನದ ಬೌಲಿಂಗ್ ದಾಳಿಯೊಂದಿಗೆ ಉಭಯ ತಂಡಗಳು ಫೈನಲ್ ಟಿಕೆಟ್ಗಾಗಿ ಪೈಪೋಟಿ ನಡೆಸಲಿವೆ.

ಪಂದ್ಯದ ವಿವರ
- ಪಂದ್ಯ: ಆರ್ಸಿಬಿ vs ಜಿಟಿ
- ಟೂರ್ನಿ: Indian Premier League ಮೊದಲ ಕ್ವಾಲಿಫೈಯರ್
- ದಿನಾಂಕ: ಮೇ 26, 2026
- ಸಮಯ: ಸಂಜೆ 7:30
- ಸ್ಥಳ: ಧರ್ಮಶಾಲಾ
- ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
- ಲೈವ್ ಸ್ಟ್ರೀಮಿಂಗ್: JioHotstar
MUST WATCH : ಮುಂದುವರಿದ ಭೂ ಮಾಪಕರ ಮುಷ್ಕರ – ಸರ್ಕಾರದ ವಿರುದ್ಧ ಸಿಡಿದೆದ್ದ ಅನ್ನದಾತರು.?

ಫಿಲ್ ಸಾಲ್ಟ್ ಆಡ್ತಾರಾ?
ಇಂದಿನ ಪಂದ್ಯದಲ್ಲಿ ಫಿಲ್ ಸಾಲ್ಟ್ ಆಡ್ತಾರಾ ಎಂಬ ಬಗ್ಗೆ ನಾಯಕ ರಜತ್ ಪಾಟೀದಾರ್ ಅಪ್ಡೇಟ್ ಕೊಟ್ಟಿದ್ದಾರೆ. ಕ್ವಾಲಿಫೈಯರ್-1 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜತ್ ಪಾಟೀದಾರ್ , ಆರ್ಸಿಬಿ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಗಾಯದಿಂದ ಚೇತರಿಸಿಕೊಂಡಿದ್ದು, ನೆಟ್ಸ್ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ ಎಂದಿದ್ದಾರೆ.




