Bengaluru : ಮೆಡಿಕಲ್ ಗಳಲ್ಲಿ ಅಗತ್ಯ ಔಷಧಿಗಳು ಏನಾದ್ರೂ ಖರೀದಿ ಮಾಡೋದಿದ್ರೆ ಇಂದು ಖರೀದಿಸಿ.

Bengaluru : ರಾಜ್ಯದ ಜನ್ರೇ ಒಮ್ಮೆ ಇಲ್ಲಿ ಗಮನಿಸಿ. ಮೆಡಿಕಲ್ಗಳಲ್ಲಿ ಅಗತ್ಯ ಔಷಧಿಗಳು ಏನಾದ್ರೂ ಖರೀದಿ ಮಾಡೋದಿದ್ರೆ ಇಂದು ಖರೀದಿಸಿ. ನಾಳೆ ರಾಜ್ಯದಾದ್ಯಂತ ಮೆಡಿಕಲ್ ಶಾಪ್ಗಳು ಬಂದ್ ಆಗಲಿವೆ. ಹೌದು.. ವಿವಿಧ ಬೇಡಿಕೆಗಳ ಈಡೇರಿಕೆಗೆ ದೇಶಾದ್ಯಂತ ಖಾಸಗಿ ಮೆಡಿಕಲ್ ಶಾಪ್ ಬಂದ್ಗೆ ಕರೆ ನೀಡಲಾಗಿದ್ದು, ಕರ್ನಾಟಕದಲ್ಲೂ ಈ ಬಂದ್ಗೆ ಭಾರೀ ಬೆಂಬಲ ವ್ಯಕ್ತವಾಗಿದೆ.

ಇ-ಫಾರ್ಮಸಿ ವಿರೋಧಿಸಿ ಮಾಲೀಕರಿಂದ ಪ್ರತಿಭಟನೆ
ಇ ಫಾರ್ಮಸಿ ಹಾಗೂ ಆನ್ ಲೈನ್ ಮೂಲಕ ನಡೆಯುತ್ತಿರುವ ನಿಯಮಬಾಹಿರ ಔಷಧ ಮಾರಾಟ ವಿರೋಧಿಸಿ ಖಾಸಗಿ ಔಷಧ ಮಳಿಗೆ ಮಾಲೀಕರು ಮತ್ತು ವಿತರಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜ್ಯದಲ್ಲೂ ಸಹ ಕೆಸಿಡಿಎ ಸಂಘಟನೆ ಬಂದ್ಗೆ ನೇರ ಬೆಂಬಲ ಘೋಷಿಸಿದ್ದು, ಕರ್ನಾಟಕ ಫಾರ್ಮಾ ರಿಟೇಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ ಸೇರಿದಂತೆ ಹಲವು ಸಂಘಟನೆಗಳು ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿದೆ.

ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ
ಇನ್ನು ಯಾವುದೇ ಸೂಕ್ತ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೇ ಆನ್ ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಔಷಧಿಗಳನ್ನ ಮಾರಾಟ ಮಾಡಲಾಗ್ತಿದ್ದು, ಇದ್ರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಜೊತೆಗೆ ಸಣ್ಣ ವ್ಯಾಪಾರಿಗಳ ಬದುಕೇ ಸಂಕಷ್ಟಕ್ಕೆ ಸಿಲುಕಿದೆ ಎಂದು ಮೆಡಿಕಲ್ ಶಾಪ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ದೇ ದೊಡ್ಡ ಕಾರ್ಪೋರೇಟ್ ಕಂಪನಿಗಳು ಭಾರೀ ರಿಯಾಯ್ತಿ ನೀಡಿ ಗ್ರಾಹಕರನ್ನ ಸೆಳೆಯುತ್ತಿರೋದ್ರಿಂದ ಮೆಡಿಕಲ್ ಶಾಪ್ಗಳು ನಷ್ಟ ಅನುಭವಿಸ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
READ THIS : Dileep Raj ನೆನೆದು ದೇವರನ್ನೇ ಪ್ರಶ್ನಿಸಿ ಶ್ರೀವಿದ್ಯಾ ಭಾವುಕ ಪೋಸ್ಟ್!

Bengaluru – ಖಾಸಗಿ ಮೆಡಿಕಲ್ ಶಾಪ್ಗಳನ್ನು ಬಂದ್ ಮಾಡಿ ಪ್ರೊಟೆಸ್ಟ್
ಸದ್ಯ ನಾಳೆ ದಿನಪೂರ್ತಿ ಖಾಸಗಿ ಮೆಡಿಕಲ್ ಶಾಪ್ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ಆಸ್ಪತ್ರೆ ಆವರಣದೊಳಗಿನ ಫಾರ್ಮಸಿಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಲಿವೆ.

MUST WATCH : REAL ESTATE ಉದ್ಯಮಿಗೆ ಜೀವ ಬೆದರಿಕೆ – ಕಚೇರಿಗೆ ನುಗ್ಗಿ ಮಹಿಳೆಯಿಂದ ಧಮ್ಕಿ ಆರೋಪ..!




