ಗಂಡ ಚೆನ್ನಾಗಿದ್ರೆ, ಮನೇಲಿ ಖುಷಿಯಿದ್ರೆ ದೇವರು ಸುಮ್ಮನಿರಲ್ಲ, ನಾಶ ಮಾಡ್ತಾನೆ – Dileep Raj ಪತ್ನಿ ಶ್ರೀವಿದ್ಯಾ

ವರ್ಕೌಟ್ ಮಾಡುತ್ತ, ಮನೆ ಊಟವನ್ನೇ ತಿನ್ನುತ್ತಿದ್ದ ನಟ ದಿಲೀಪ್ ರಾಜ್ ಅವರು 48ನೇ ವಯಸ್ಸಿಗೆ ನಿಧನರಾಗಿರೋದು ಇಡೀ ಚಿತ್ರರಂಗ ಶಾಕ್ನಲ್ಲಿದೆ. ಈಗ ಪತ್ನಿ ಶ್ರೀವಿದ್ಯಾ ರಾಜ್ ಅವರು ಸೋಶಿಯಲ್ ಮೀಡಿಯಾ ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.

ದೇವರನ್ನೇ ಪ್ರಶ್ನಿಸಿ ಪೋಸ್ಟ್
ಹೌದು.. ಅಗಲಿದ ಪತಿಯ ಜೊತೆಗೆ ಕಳೆದ ಕ್ಷಣಗಳ ನೆನಪನ್ನು ಸರಣಿ ಪೋಸ್ಟ್ಗಳ ಮೂಲಕ ಹಂಚಿಕೊಳ್ಳುತ್ತಿರುವ ಶ್ರೀ ವಿದ್ಯಾ, ಈ ಬಾರಿ ದೇವರನ್ನೇ ಪ್ರಶ್ನಿಸುವ ರೀತಿಯಲ್ಲಿ ತಮ್ಮ ನೋವನ್ನು ಹೊರಹಾಕಿದ್ದಾರೆ.

ದಿಲೀಪ್ ರಾಜ್ ಹೆಂಡತಿಯ ನೋವಿನ ಪೋಸ್ಟ್
“ನನಗೆ ಈಗ ಸದ್ಯದ ಪರಿಸ್ಥಿತಿಯಲ್ಲಿ ಏನನ್ನಿಸುತ್ತಿದೆಯೆಂದರೆ, ಒಂದು ಸಂಸಾರ ಹೇಗಿರಬೇಕು ಅಂದ್ರೆ, ಒಬ್ಬ ಗಂಡ ಹೆಂಡತಿಯನ್ನು ಯಾವಾಗಲೂ ಹೊಡೀತಾ ಇರಬೇಕು, ಕುಡಿದು ಬಂದು ಗಲಾಟೆ ಮಾಡ್ತಾ ಇರಬೇಕು. ಒಬ್ಬ ಹೆಂಡತಿ ಯಾವಾಗಲೂ ಗಂಡನನ್ನೇ ದೊಷಿಸುತ್ತಾ ಇರಬೇಕು.
ಮಕ್ಕಳು ತಂದೆ-ತಾಯಿಯನ್ನು ಗೌರವಿಸಬಾರದು. ತಂದೆ-ತಾಯಿಯೂ ಅಷ್ಟೇ, ಮಕ್ಕಳನ್ನು ಯಾವಾಗಲೂ ದೂಷಿಸುತ್ತಾ ಇರಬೇಕು. ಒಂದು ಮನೆಯಲ್ಲಿ ಶಾಂತಿ, ಅನ್ನೋದೇ ಇರಬಾರದು. ಒಬ್ಬರಿಗೊಬ್ಬರು ಕಿತ್ತಾಡ್ಕೊಂಡೇ ಇರಬೇಕು..””
READ THIS : ಜೈಲಿನ ಒಳಭೇಟಿಗೆ ಅವಕಾಶ ಕೋರಿ ಕಾರಾಗೃಹ SP ಗೆ ಪತ್ರ ಬರೆದ ದಾಸ

ದೇವರಿದ್ದಾನೆ, ಹುಷಾರಾಗಿರಿ
ಯಾಕೆಂದರೆ, ದೇವರಿದ್ದಾನೆ, ಹುಷಾರಾಗಿರಿ! ಯಾರ ಮನೆ ಚೆನ್ನಾಗಿದೆ, ಯಾರ ಮನೆಯಲ್ಲಿ ಯಾವಾಗಲೂ ನಗು ಇರುತ್ತದೆ, ಯಾರು ತುಂಬಾ ಖುಷಿಯಿಂದ ಬದುಕುತ್ತಿರುತ್ತಾರೋ, ಅಂಥವರ ಮನೆಯ ಮೇಲೆ ಅವನಿಗೆ ಯಾವಾಗಲೂ ಕಣ್ಣು ಇರುತ್ತದೆ. ದೇವರಿದ್ದಾನೆ, ಹುಷಾರಾಗಿರಿ! ಅವನು ನಿಮ್ಮ ಸಂಸಾರವನ್ನು ಖಂಡಿತವಾಗಿಯೂ ಬಿಡುವುದಿಲ್ಲ. ಖಂಡಿತ ನಾಶ ಮಾಡದೆ ಬಿಡುವುದಿಲ್ಲ. ದೇವರಿದ್ದಾನೆ, ಹುಷಾರಾಗಿರಿ“ ಎಂದು ಶ್ರೀವಿದ್ಯಾ ಅವರು ಬರೆದುಕೊಂಡಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಜೋಡಿ
Dileep Raj ಹಾಗೂ ಶ್ರೀವಿದ್ಯಾ ಅವರದ್ದು ಲವ್ ಮ್ಯಾರೇಜ್. ಇದೇ ನವೆಂಬರ್ಗೆ ದಂಪತಿ ತಮ್ಮ 25ನೇ ಮ್ಯಾರೇಜ್ ಆನಿವರ್ಸರಿ ಆಚರಿಸಿಕೊಳ್ಳುವವರಿದ್ದರು. ಆದರೆ, ಅಷ್ಟರಲ್ಲೇ ವಿಧಿ ಅಟ್ಟಹಾಸ ಮೆರೆದಿದೆ.

MUST WATCH : ಸಾಧನಾ ಸಮಾವೇಶಕ್ಕೆ ಸಾವಿರಾರು ಮಂದಿ ಆಗಮನ – ದೂರದ ಊರುಗಳಿಂದ ಬಂದ ಜನರು ಏನಂದ್ರು..?




