ಬೆಂಗಳೂರಲ್ಲಿ ಮತ್ತೊಂದು Murder : ಕೇವಲ ಗುರಾಯಿಸಿದ್ದಕ್ಕೆ ಯುವಕನಿಗೆ ಚಾಕು ಇರಿದು ಭೀಕರ ಹತ್ಯೆ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕನಕಪುರ ರಸ್ತೆಯ ಜಾರಗನಹಳ್ಳಿ ಸಮೀಪ ಈ ಭೀಕರ ಘಟನೆ ನಡೆದಿದ್ದು, ಉದಯ್ ಕುಮಾರ್ ಎಂಬ ಯುವಕನನ್ನು ಚಾಕುವಿನಿಂದ ಇರಿದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಚೆಲುವ ಮತ್ತು ತೇಜ ಎನ್ನುವವರಿಂದ ಉದಯ್ ಎನ್ನುವ ಯುವಕನ Murder ಆಗಿದೆ.
ಇದನ್ನು ಓದಿ : ದಪ್ಪ ಇದ್ದಾಳೆಂದು ಪತ್ನಿಯನ್ನೇ ಕೊಲೆಗೈದ ಪಾಪಿ ಪತಿ.!

ಆಗಿದ್ದೇನು?
ಮೃತ ಉದಯ್ ಕುಮಾರ್ ಮತ್ತು ಆರೋಪಿಗಳಾದ ಚೆಲುವ ಹಾಗೂ ತೇಜ ಅವರಿಗೆ ಯಾವುದೇ ಪರಿಚಯ ಇರಲಿಲ್ಲ. ಬಾರ್ನಲ್ಲಿ ಉದಯ್ ಗುರಾಯಿಸಿದರು ಎಂಬ ಕಾರಣಕ್ಕೆ ಆರೋಪಿಗಳು ಗಲಾಟೆ ಆರಂಭಿಸಿದ್ದರು. ಗಲಾಟೆಯ ಬಳಿಕ ಉದಯ್ ಕುಮಾರ್ ಬಾರ್ನಿಂದ ಹೊರಬಂದಿದ್ದರು. ಬಳಿಕ ಬಾರ್ ಇಂದ ಹೊರ ನಡೆದಿದ್ದ ಉದಯ್ ಕುಮಾರ್ ಅದೇ ಕಡೆ ನಡೆದುಕೊಂಡು ಬರುತ್ತಿದ್ದ ಇಬ್ಬರು ಈ ವೇಳೆ ಮತ್ತೆ ಗಲಾಟೆ ಮಾಡಿ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದಾರೆ. ಆ ಬಳಿಕ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ.

Murder – FIR ದಾಖಲು
ಪ್ರಕರಣ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳಾದ ಚೆಲುವ ಮತ್ತು ತೇಜ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನು ನೋಡಿ : ಮೊಟ್ಟೆ ವಿಚಾರಕ್ಕೆ ಗಲಾಟೆಯಾಗಿ ವ್ಯಕ್ತಿಯ ಕೊ* – ಕಾರ್ಯಕರ್ತನ ಮನೆಗೆ ಬಿಜೆಪಿ ನಾಯಕರು ವಿಸಿಟ್





