Job Alert : ಭಾರತೀಯ ವಾಯುಪಡೆ ಅಗ್ನಿವೀರವಾಯು ನೇಮಕಾತಿ ಅಧಿಸೂಚನೆ ಪ್ರಕಟ

Job Alert : ದೇಶಸೇವೆ ಮಾಡುವ ಕನಸು ಹೊಂದಿರುವ ಯುವಕ-ಯುವತಿಯರಿಗೆ ಭಾರತೀಯ ವಾಯುಪಡೆ ಸಿಹಿಸುದ್ದಿ ನೀಡಿದೆ. ಅಗ್ನಿವೀರವಾಯು ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆನ್ಲೈನ್ ಮೂಲಕ ಅರ್ಜಿ
ಆಸಕ್ತ ಅಭ್ಯರ್ಥಿಗಳು ಜುಲೈ 6ರ ಬೆಳಿಗ್ಗೆ 11 ಗಂಟೆಯಿಂದ ಜುಲೈ 26ರ ರಾತ್ರಿ 11 ಗಂಟೆಯವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಭಾರತೀಯ ವಾಯುಪಡೆಯ ಅಧಿಕೃತ ನೇಮಕಾತಿ ವೆಬ್ಸೈಟ್ ಮೂಲಕವೇ ಸಲ್ಲಿಸಬೇಕು.
ಅಧಿಸೂಚನೆಯ ಪ್ರಕಾರ, 2005ರ ಜುಲೈ 1ರಿಂದ 2010ರ ಜನವರಿ 1ರ ನಡುವೆ ಜನಿಸಿದ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಯಾವಾಗ ಆನ್ಲೈನ್ ಪರೀಕ್ಷೆ?
ನೇಮಕಾತಿಯ ಆನ್ಲೈನ್ ಪರೀಕ್ಷೆಯು 2026ರ ಸೆಪ್ಟೆಂಬರ್ 22 ಮತ್ತು 23ರಂದು ನಡೆಯಲಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ದೈಹಿಕ ಸಾಮರ್ಥ್ಯ, ವೈದ್ಯಕೀಯ ಮಾನದಂಡಗಳು ಹಾಗೂ ಇತರ ನಿಯಮಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಕಡ್ಡಾಯವಾಗಿ ಪರಿಶೀಲಿಸಬೇಕು.
ಇದನ್ನು ಓದಿ : ವಾಯುಪಡೆ ಸೇರಲು ಬಯಸುವವರು ತಕ್ಷಣ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿ

ಯುವಕ-ಯುವತಿಯರಿಗೆ ಸುವರ್ಣವಕಾಶ
ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ದೈಹಿಕ ಸಾಮರ್ಥ್ಯ, ವೈದ್ಯಕೀಯ ಮಾನದಂಡಗಳು ಹಾಗೂ ಇತರ ನಿಯಮಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸುವುದು ಕಡ್ಡಾಯ. ಅರ್ಜಿ ಶುಲ್ಕ 550 ರೂ ಮತ್ತು ಜಿಎಸ್ಟಿ ನಿಗದಿಪಡಿಸಲಾಗಿದೆ.
ಪ್ರಮುಖ ದಿನಾಂಕಗಳ
📌 ಅರ್ಜಿ ಆರಂಭ: 06 ಜುಲೈ 2026 – ಬೆಳಿಗ್ಗೆ 11:00
📌 ಅರ್ಜಿ ಸಲ್ಲಿಸಲು ಕೊನೆಯ ದಿನ: 26 ಜುಲೈ 2026 – ರಾತ್ರಿ 11:00
📌 ಆನ್ಲೈನ್ ಪರೀಕ್ಷೆ: 22 ಮತ್ತು 23 ಸೆಪ್ಟೆಂಬರ್ 2026

ಇದನ್ನು ನೋಡಿ : ಹೆಂಡ್ತಿ, ಅತ್ತಿಗೆಯನ್ನ ಕೊಂದ ಕಿರಾತಕ – ಕತ್ತು ಕೊಯ್ದು ಬರ್ಬರ ಹತ್ಯೆ ಮಾಡಿದ ಗಂಡ




