Indian Air Force Recruitment : ವಾಯುಪಡೆಯಲ್ಲಿ ಉನ್ನತ ಮಟ್ಟದ ಉದ್ಯೋಗಗಳನ್ನು ಭರ್ತಿ ಮಾಡಲು ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕೋರಿ ಅಧಿಸೂಚನೆ ಹೊರಡಿಸಲಾಗಿದೆ.

ವಾಯುಪಡೆಯಲ್ಲಿ ಉನ್ನತ ಹುದ್ದೆಗಳಿಗೆ AF CAT 2026 (Air Force Common Admission Test) ಅಧಿಸೂಚನೆ ಪ್ರಕಟವಾಗಿದೆ. ಪ್ರತಿ ವರ್ಷ ಎರಡು ಬಾರಿ ನಡೆಯುವ ಈ ಪರೀಕ್ಷೆಯ ಮೊದಲ ಹಂತದ ಅಧಿಸೂಚನೆ ಬಿಡುಗಡೆಯಾಗಿದೆ.
ಅರ್ಜಿ ಸಲ್ಲಿಸುವ ದಿನಾಂಕ
➡️ ಪ್ರಾರಂಭ – ನವೆಂಬರ್ 10, 2025
➡️ ಕೊನೆ ದಿನಾಂಕ – ಡಿಸೆಂಬರ್ 9, 2025
ಒಟ್ಟು ಹುದ್ದೆಗಳು: 340
ಹುದ್ದೆಗಳ ವಿಭಾಗಗಳು:
- ಫ್ಲೈಯಿಂಗ್ ಬ್ರಾಂಚ್
- ಗ್ರೌಂಡ್ ಡ್ಯೂಟಿ (ತಾಂತ್ರಿಕ)
- ಗ್ರೌಂಡ್ ಡ್ಯೂಟಿ (ತಾಂತ್ರಿಕೇತರ)
- NCC ವಿಶೇಷ ಪ್ರವೇಶ (ಫ್ಲೈಯಿಂಗ್ ಫೋರ್ಸ್ಗಾಗಿ)
ಇದನ್ನು ಓದಿ : ಶಿವಣ್ಣ-ಗೀತಕ್ಕ ದಂಪತಿ ಜೊತೆ ದುಬೈ ಸುತ್ತಾಡಿದ ನಟಿ Ramya
ಅರ್ಹತೆ
- ಭೌತಶಾಸ್ತ್ರ ಮತ್ತು ಗಣಿತ ವಿಷಯಗಳೊಂದಿಗೆ ಇಂಟರ್ಮೀಡಿಯೇಟ್ ಪಾಸಾಗಿರಬೇಕು.
- ಸಂಬಂಧಿತ ವಿಭಾಗದಲ್ಲಿ B.E. ಅಥವಾ B.Tech ಪದವಿ ಹೊಂದಿರಬೇಕು.
- ಅಧಿಸೂಚನೆಯಲ್ಲಿ ಉಲ್ಲೇಖಿಸಿದ ದೈಹಿಕ ಮಾನದಂಡಗಳನ್ನು ಪೂರೈಸಿರಬೇಕು.
ವಯೋಮಿತಿ
- ಫ್ಲೈಯಿಂಗ್ ಬ್ರಾಂಚ್: 20 ರಿಂದ 24 ವರ್ಷ
- ಗ್ರೌಂಡ್ ಡ್ಯೂಟಿ (ತಾಂತ್ರಿಕ/ತಾಂತ್ರಿಕೇತರ): 20 ರಿಂದ 26 ವರ್ಷ
ಅರ್ಜಿ ಶುಲ್ಕ: ₹550 + ಜಿಎಸ್ಟಿ
ಆಯ್ಕೆ ಪ್ರಕ್ರಿಯೆ
- ಲಿಖಿತ ಪರೀಕ್ಷೆ
- ದೈಹಿಕ ಪರೀಕ್ಷೆ ಮತ್ತು ಇತರ ಹಂತಗಳು
ಲಿಖಿತ ಪರೀಕ್ಷೆ ದಿನಾಂಕ: ಜನವರಿ 31, 2026
ಇನ್ನು ಹೆಚ್ಚಿನ ಮಾಹಿತಿಗಾಗಿ ವಾಯುಪಡೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿತ ಅಧಿಸೂಚನೆಯನ್ನು ಪರಿಶೀಲಿಸಬಹುದು.
ಇದನ್ನು ನೋಡಿ : ಮೈಲಕಬ್ಬೆಗೆ 3 ದಿನದಿಂದ ಬಸ್ ಇಲ್ಲ ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ




