Actress Ramya : ನಟಿ ರಮ್ಯಾ, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅವರುಗಳ ಜೊತೆಗೆ ದುಬೈನಲ್ಲಿ ಸುತ್ತಾಡಿದ್ದಾರೆ.

Actress Ramya : ನಟಿ ರಮ್ಯಾ ಅವರಿಗೆ ಶಿವರಾಜ್ ಕುಮಾರ್ ಮತ್ತು ಕುಟುಂಬ ಬಹಳ ಆಪ್ತರು. ತಮ್ಮದೇ ಕುಟುಂಬದ ಸದಸ್ಯರಂತೆ ದೊಡ್ಮನೆಯವರು ಸಹ ಅವರನ್ನು ನೋಡಿಕೊಂಡಿದ್ದಾರೆ. ಇತ್ತೀಚೆಗೆ, ರಮ್ಯಾ, ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ದುಬೈನಲ್ಲಿ ಸುತ್ತಾಡಿದ್ದಾರೆ. ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.
ರಮ್ಯಾ ಅವರಿಗೆ ಸನ್ಮಾನ
ಗಲ್ಫ್ ಕನ್ನಡ ಮೂವೀಸ್ ಮತ್ತು ದುಬೈ ಕನ್ನಡಿಗರ ಕೂಟ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಮ್ಯಾ, ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ರಮ್ಯಾ ಹಾಗೂ ಕುಟುಂಬದ ಗಣ್ಯರು ಉದ್ಘಾಟಿಸಿದರು. ವಿಶೇಷವಾಗಿ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅವರಿಗೆ ಸನ್ಮಾನ ಮಾಡಲಾಯಿತು.
ಇದನ್ನು ಓದಿ : OTT ಯಲ್ಲಿ ಧೂಳೆಬ್ಬಿಸಿದ Kantara 1 ಸಿನಿಮಾ

ಶಿವಣ್ಣ-ಗೀತಕ್ಕ ದಂಪತಿ ಜೊತೆ ದುಬೈ ಸುತ್ತಾಡಿದ ರಮ್ಯಾ
ಕಾರ್ಯಕ್ರಮದ ಬಳಿಕ, ರಮ್ಯಾ ಅವರು ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರೊಟ್ಟಿಗೆ ದುಬೈನಲ್ಲಿ ಸುತ್ತಾಟ ನಡೆಸಿದ ಪೋಟೋಗಳನ್ನು Instagram Post ನಲ್ಲಿ ಹಂಚಿಕೊಂಡಿದ್ದಾರೆ.
ಶಿವಣ್ಣ ಮತ್ತು ಗೀತಕ್ಕ ಅವರೊಂದಿಗೆ ಕಳೆದ ಕ್ಷಣಗಳು ನನ್ನ ಅತ್ಯುತ್ತಮ ಕ್ಷಣಗಳು. ಅವರ ಪ್ರೀತಿ, ವಾತ್ಸಲ್ಯ, ಸರಳತೆ ಮತ್ತು ಹಾಸ್ಯಪ್ರಜ್ಞೆ ನನ್ನ ಪ್ರವಾಸವನ್ನು ನಿಜವಾಗಿಯೂ ಸ್ಮರಣೀಯವಾಗಿಸಿತು. ನನ್ನ ನೆಚ್ಚಿನ ದಂಪತಿಗಳು ಇವರು ಎಂದಿದ್ದಾರೆ ರಮ್ಯಾ

ಇದನ್ಪನು ನೋಡಿ : ಪತ್ನಿಯ ಶೀಲ ಶಂಕಿಸಿ ಗಂಡನಿಂದ ಕೊಲೆ ಪತಿಗೆ ಕೋರ್ಟ್ ಏನ್ಮಾಡ್ತು ಗೊತ್ತಾ




