Kantara 1 : ಓಟಿಟಿಯಲ್ಲಿ ಸಿನಿಮಾ ನೋಡೋರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಹಾಗಾಗಿ, ಹೆಚ್ಚು ಕಂಟೆಂಟ್ ಕೊಡೋಕೆ ಡಿಜಿಟಲ್ ಪ್ಲಾಟ್ಫಾರ್ಮ್ಗಳು ಪೈಪೋಟಿ ನಡೆಸ್ತಿವೆ.

Kantara 1 : ರಿಷಬ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಕಾಂತಾರ ಚಾಪ್ಟರ್ 1’ (Kanata Chapter 1) ಈಗ OTT ಯಲ್ಲಿ ಪ್ರಸಾರ ಆರಂಭವಾಗಿದೆ. ಅಕ್ಟೋಬರ್ 2ರಂದು ಥಿಯೇಟರ್ನಲ್ಲಿ ಬಿಡುಗಡೆಯಾದ ಈ ಚಿತ್ರ ಕೇವಲ 30 ದಿನಗಳಲ್ಲಿ ಒಟಿಟಿಗೆ ಬಂದಿರುವುದು ವಿಶೇಷವಾಗಿದೆ.
ಪ್ಯಾನ್-ಇಂಡಿಯಾ ಮಟ್ಟದ ವೀಕ್ಷಣೆ
ಸಿನಿಮಾ ಪ್ರೇಮಿಗಳಿಗಾಗಿ OTT Streaming ದೊಡ್ಡ ಸಹಾಯ ಮಾಡ್ತಿದೆ. ಥಿಯೇಟರ್ಗಳಲ್ಲಿ ಬಿಡುಗಡೆಯಾದ ನಂತರ ಓಟಿಟಿಗಳಲ್ಲಿ ಸಹ ಪ್ಯಾನ್-ಇಂಡಿಯಾ ಮಟ್ಟದ ವೀಕ್ಷಣೆ ಪಡೆಯುತ್ತಿದೆ.
ಇದನ್ನು ಓದಿ : Gold Price Today : ಚಿನ್ನದ ದರದಲ್ಲಿ ಕೊಂಚ ಇಳಿಕೆ
OTT ಯಲ್ಲಿ 41 ಲಕ್ಷ ವೀಕ್ಷಣೆ ಪಡೆದ ಕಾಂತಾರ 1
ಬಾಕ್ಸ್ ಆಫೀಸ್ನಲ್ಲಿ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಸಾಧಿಸಿದ ‘ಕಾಂತಾರ ಚಾಪ್ಟರ್ 1’ ಈಗ ಓಟಿಟಿಯಲ್ಲೂ ಅತಿ ಹೆಚ್ಚು ವೀಕ್ಷಣೆ ಪಡೆದ ಚಿತ್ರವಾಗಿದೆ. ಅಮೆಜಾನ್ ಪ್ರೈಮ್ನಲ್ಲಿ ಸ್ಟ್ರೀಮ್ ಆಗುತ್ತಿರುವ ಈ ಚಿತ್ರ 41 ಲಕ್ಷ ವೀಕ್ಷಣೆಗಳನ್ನು ದಾಟಿದೆ.
ಹಿಂದಿ ವರ್ಷನ್ ರಿಲೀಸ್ ಆಗಿಲ್ಲ
ಇದರ ಹಿಂದಿ ಆವೃತ್ತಿ ಇನ್ನೂ ರಿಲೀಸ್ ಆಗಿಲ್ಲ, ಆದರೆ ತೆಲುಗು, ಕನ್ನಡ ಹಾಗೂ ಮಲಯಾಳಂ ರೀಲೀಸ್ಗಳೊಂದಿಗೆ ಸಿನಿಮಾ ದೇಶದಾದ್ಯಂತ ಗಮನಸೆಳೆದಿದೆ. ಇನ್ನು ಓಟಿಟಿ ಸ್ಟ್ರೀಮಿಂಗ್ ಮೂಲಕ ಸಿನಿಮಾ ಪ್ರೇಮಿಗಳು ತಮ್ಮ ನೆಚ್ಚಿನ ಸಿನಿಮಾಗಳನ್ನು ಮನೆಯಲ್ಲಿಯೇ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಅನುಭವಿಸಬಹುದು.
ಇದನ್ನು ನೋಡಿ : ಡಿಕೆಶಿ ಸಿಎಂ ಯಾವಾಗ ಆಗ್ತಾರೆ..? KORAGAJJA NUDI ಕೇಳಿ ಜನರಿಗೆ ಭಾರೀ ಶಾಕ್




