Kantara 1 : ‘ಕಾಂತಾರ ಚಾಪ್ಟರ್ 1’ ಸಿನಿಮಾ ಥಿಯೇಟರ್ನಲ್ಲಿ ಅಬ್ಬರಿಸಿದ ಬಳಿಕ ಈಗ OTT ಗೆ ಕಾಲಿಟ್ಟಿದೆ. ಇಂದಿನಿಂದ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ಪ್ರಸಾರ ಕಾಣುತ್ತಿದೆ.

Kantara 1 : ರಿಷಬ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಕಾಂತಾರ ಚಾಪ್ಟರ್ 1’ ಈಗ OTT ಯಲ್ಲಿ ಪ್ರಸಾರ ಆರಂಭವಾಗಿದೆ. ಅಕ್ಟೋಬರ್ 2ರಂದು ಥಿಯೇಟರ್ನಲ್ಲಿ ಬಿಡುಗಡೆಯಾದ ಈ ಚಿತ್ರ ಕೇವಲ 30 ದಿನಗಳಲ್ಲಿ ಒಟಿಟಿಗೆ ಬಂದಿರುವುದು ವಿಶೇಷವಾಗಿದೆ.
ಅಕ್ಟೋಬರ್ 31ರಿಂದ ಅಮೇಜಾನ್ ಪ್ರೈಮ್ನಲ್ಲಿ ಸ್ಟ್ರೀಮಿಂಗ್ ಆರಂಭ
ಇನ್ನು ಕಾಂತಾರ 1 ಚಿತ್ರವನ್ನು ಇಂದಿನಿಂದ (ಅಕ್ಟೋಬರ್ 31) ಅಮೇಜಾನ್ ಪ್ರೈಮ್ ವಿಡಿಯೋಯಲ್ಲಿ ವೀಕ್ಷಿಸಬಹುದು. ಪ್ರಸ್ತುತ ಸಿನಿಮಾ ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಗಳಲ್ಲಿ ಲಭ್ಯವಿದೆ.
ಇದನ್ನು ಓದಿ : ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಮತ್ತೆ 3 ಪ್ರಕರಣ

714 ಕೋಟಿ ರೂ. ಭಾರೀ ಕಲೆಕ್ಷನ್!
‘ಕಾಂತಾರ ಚಾಪ್ಟರ್ 1’ ಭಾರತದಾದ್ಯಂತ ಭಾರೀ ಯಶಸ್ಸು ದಾಖಲಿಸಿದೆ.
ಚಿತ್ರದ ಒಟ್ಟಾರೆ ಕಲೆಕ್ಷನ್ ವಿವರಗಳು
- ಒಟ್ಟು ಕಲೆಕ್ಷನ್: ₹714 ಕೋಟಿ
- ಕನ್ನಡ ವರ್ಶನ್: ₹239 ಕೋಟಿ
- ಉತ್ತರ ಭಾರತ (ಹಿಂದಿ): ₹243 ಕೋಟಿ
- ತಮಿಳುನಾಡು: ₹70 ಕೋಟಿ
- ಕೇರಳ: ₹55 ಕೋಟಿ
- ಆಂಧ್ರ ಮತ್ತು ತೆಲಂಗಾಣ: ₹105 ಕೋಟಿ
ಇನ್ನು ಹಿಂದಿ ಭಾಷೆಯಲ್ಲಿ ಈ ಸಿನಿಮಾ ಕನ್ನಡಕ್ಕಿಂತಲೂ ಹೆಚ್ಚು ಕಲೆಕ್ಷನ್ ಮಾಡಿರುವುದು ಗಮನಾರ್ಹವಾಗಿದೆ.

ಹಿಂದಿ ವರ್ಶನ್ OTT ರಿಲೀಸ್ ವಿಳಂಬ
ಪ್ರಸ್ತುತ ಅಮೇಜಾನ್ ಪ್ರೈಮ್ನಲ್ಲಿ ಹಿಂದಿ ವರ್ಶನ್ ಲಭ್ಯವಿಲ್ಲ. ಚಿತ್ರ ನಿರ್ಮಾಣ ಸಂಸ್ಥೆಯ ಮಾಹಿತಿ ಪ್ರಕಾರ, ಹಿಂದಿ ಆವೃತ್ತಿ ಇನ್ನೂ ಒಂದು ತಿಂಗಳ ನಂತರ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಭಾರತದಲ್ಲಿ ಬ್ಲಾಕ್ಬಸ್ಟರ್ ಹಿಟ್
ಕನ್ನಡದ ಜೊತೆಗೆ ತೆಲುಗು ಮತ್ತು ಮಲಯಾಳಂ ಆವೃತ್ತಿಗಳೂ ಬಾಕ್ಸಾಫೀಸ್ನಲ್ಲಿ ಭಾರೀ ಹಿಟ್ ಆಗಿವೆ. ತಮಿಳು ರಾಜ್ಯದಲ್ಲಿಯೂ ಕಾಂತಾರ 1 ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಪಡೆದಿದೆ.

ಇದನ್ನು ನೋಡಿ : ‘ಒಟಿಟಿ’ಗೆ ಬಂದ ‘ಕಾಂತಾರ: ಚಾಪ್ಟರ್ 1’; ಸಿನಿಮಾದ ಭಾಷಾವಾರು ಕಲೆಕ್ಷನ್ ವಿವರ ಇಲ್ಲಿದೆ




