ರಾಜ್ಯದಲ್ಲಿ ಬಸ್ ಮುಷ್ಕರ ನಡೆಸುವಂತಿಲ್ಲ – High Court ಖಡಕ್ ಆದೇಶ

ಶೇಕಡಾ 25ರಷ್ಟು ವೇತನ ಪರಿಷ್ಕರಣೆ ಹಾಗೂ 38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮಾಡುವಂತೆ ಆಗ್ರಹಿಸಿ BMTC ಮತ್ತು KSRTC ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ನಾಳೆ ಮುಷ್ಕರ ನಡೆಸಲು ಕರೆ ನೀಡಲಾಗಿತ್ತು. ಆದ್ರೆ ಮುಷ್ಕರಕ್ಕೆ ಒಂದು ದಿನ ಬಾಕಿ ಇರುವಾಗಲೇ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ನೀಡಿದೆ. ಸಾರಿಗೆ ಸಂಘಟನೆಗಳಿಗೆ ಮಹತ್ವದ ಆದೇಶ ನೀಡುವ ಜೊತೆಗೆ ರಾಜ್ಯ ಸರ್ಕಾರಕ್ಕೂ High Court ನೋಟಿಸ್ ನೀಡಿದೆ.

ಮುಷ್ಕರ ನಡೆಸದಂತೆ ಸರ್ಕಾರ ಹಾಗೂ ಸಂಘಟನೆಗಳಿಗೆ ನೋಟಿಸ್
ಸಾರಿಗೆ ನೌಕರರು ನಾಳೆ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಮುಷ್ಕರ ಪ್ರಶ್ನಿಸಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಲಾಗಿದ್ದು, ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್, ಕೆ. ಮನ್ಮಥರಾವ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಮುಷ್ಕರ ನಡೆಸದಂತೆ ಸರ್ಕಾರ ಹಾಗೂ ಸಂಘಟನೆಗಳಿಗೆ ನೋಟಿಸ್ ನೀಡಿದೆ. ಅಲ್ದೇ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.
READ THIS : ನಾಳೆ ದೇಶಾದ್ಯಂತ ಮೆಡಿಕಲ್ ಶಾಪ್ಗಳು ಬಂದ್! ಯಾಕೆ?

ಸಾರಿಗೆ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರು
ಇನ್ನು ಹೈಕೋರ್ಟ್ನ ಮಹತ್ವದ ತೀರ್ಪಿನಿಂದಾಗಿ ನಾಳೆ ಸಾರಿಗೆ ನೌಕರರ ಮುಷ್ಕರ ಇಲ್ಲದೇ ಇರೋದ್ರಿಂದ ಸಾರಿಗೆ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಹೀಗಾಗಿ ರಾಜ್ಯದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

MUST WATCH : ಸಾಧನಾ ಸಮಾವೇಶಕ್ಕೆ ಇದ್ದ ವಿಘ್ನ ದೂರ – ಸಾರಿಗೆ ನೌಕರರ ಪ್ರತಿಭಟನೆ ವಾಪಸ್




