ಚಾಕುವಿನಿಂದ ಚುಚ್ಚಿ ಪ್ರೇಯಸಿಯ Murder ಮಾಡಿದ ಪ್ರಿಯಕರ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಚಾಕುವಿನಿಂದ ಇರಿದು ಹತ್ಯೆ ( Murder ) ಮಾಡಿರುವ ಭೀಕರ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಬ್ಬರೂ ಮೂಲತಃ ಸಿಕ್ಕಿಂ ರಾಜ್ಯದ ನಿವಾಸಿಗಳು
ಮೃತ ಯುವತಿಯನ್ನು 22 ವರ್ಷದ ಐಪಿ ಹಂಗ್ಮಾ ಎಂದು ಗುರುತಿಸಲಾಗಿದೆ. ಪ್ರಿಯಕರ ಫುರ್ಬಾ ಲೇಪ್ಸಾ ಕೊಲೆಗೈದ ಆರೋಪಿಯಾಗಿದ್ದಾರೆ. ಇಬ್ಬರೂ ಮೂಲತಃ ಸಿಕ್ಕಿಂ ರಾಜ್ಯದ ನಿವಾಸಿಗಳಾಗಿದ್ದು, ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಇದನ್ನು ಓದಿ : ಶಿವಮೊಗ್ಗದಲ್ಲಿ ಮನೆಯಲ್ಲಿದ್ದ ರೌಡಿಶೀಟರ್ನನ್ನು ಕೊಚ್ಚಿ ಕೊಲೆ

ಚಾಕುವಿನಿಂದ ಇರಿದು ಪ್ರೇಯಸಿಯ Murder
ಪ್ರೀತಿ ವಿಚಾರವಾಗಿ ಇಬ್ಬರ ನಡುವೆ ಕಳೆದ ಕೆಲ ದಿನಗಳಿಂದ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಪ್ರೇಯಸಿ ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಪ್ರಿಯಕರ ಫುರ್ಬಾ ಲೇಪ್ಸಾ ಯುವತಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಐಪಿ ಹಂಗ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪ್ರಕರಣ ದಾಖಲು
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬೆಳ್ಳಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ನೋಡಿ : ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಘಮಲು – ಫ್ಲೈ ಓವರ್ಗಳೇ ಇವರ ಅಡ್ಡೆಯಾಗ್ತಿದೆ




