ಮಲೆನಾಡ ಹೆಬ್ಬಾಗಿಲಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸ – ಭೀಕರ ಹತ್ಯೆಗೆ ಬೆಚ್ಚಿ ಬಿದ್ದ Shivamogga ಜನ.

ಶಿವಮೊಗ್ಗ ಜಿಲ್ಲೆಯಲ್ಲಿ ಆಗಾಗ ಗಲಭೆಗಳು, ಕೊಲೆಗಳಂತಹ ಪ್ರಕತರಣಗಳು ಸರ್ವೇ ಸಾಮಾನ್ಯ ಎಂಬಂತಾಗಿತ್ತು. ಆದ್ರೆ ಕೆಲ ತಿಂಗಳುಗಳಿಂದ ಶಾಂತವಾಗಿದ್ದ Shivamogga ನಗರದಲ್ಲಿ ಇದೀಗ ಭೀಕರ ಹತ್ಯೆಯೊಂದು ನಡೆದು ಹೋಗಿದ್ದು, ಜನರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ.
ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ಆತ ಒಬ್ಬ ಹೇಳಿಕೇಳಿ ರೌಡಿಶೀಟರ್, ಚಿಕ್ಕ ಪುಟ್ಟ ರೌಡಿಸಂ ಮಾಡಿಕೊಂಡು ಏರಿಯಾದಲ್ಲಿ ಹವಾ ಮೈಂಟೇನ್ ಮಾಡ್ಕೊಂಡಿದ್ದ. ಒಮ್ಮೆ ರೌಡಿಶೀಟರ್ ಅಂತಾ ಹಣೆಪಟ್ಟಿ ಕಟ್ಟಿಕೊಂಡ ಮೇಲೇ ಇಂದಲ್ಲಾ, ನಾಳೆ ಬೀದಿ ಹೆಣ ಆಗೋದು ಕನ್ಪರ್ಮ್ ಎಂಬಂತೆ ಇದೀಗ ಆತನನ್ನು ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಶಿವಮೊಗ್ಗ ನಗರದಲ್ಲಿ ಬೆಳಕಿಗೆ ಬಂದಿದೆ.

ಭೀಕರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ರೌಡಿಶೀಟರ್ ಗಳ ಕೊಲೆ ಆಗ್ತಾ ಇದ್ದು, ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆ ಬಳಿಕ ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ರೌಡಿಶೀಟರ್ ನ ಹತ್ಯೆ ನಡೆದಿದೆ.
ಶಿವಮೊಗ್ಗ ನಗರದ ಗಾಂಧಿ ಬಜಾರ್ 1ನೇ ಕ್ರಾಸ್ನ ಕರಿದೇವರ ಕೇರಿಯಲ್ಲಿ 39 ವರ್ಷದ ರೌಡಿಶೀಟರ್ ಅಂತಾ ಗುರುತಿಸಿಕೊಂಡಿದ್ದ ನರಸಿಂಹ ಎಂಬಾತನನ್ನುಕೊಚ್ಚಿ ಹತ್ಯೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಇದನ್ನು ಓದಿ : ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ – ವಿಷ ಕುಡಿಸಿ ಯುವತಿಯ Murder
ಮುಖ ಕೂಡ ಕಾಣದಂತೆ ಬರ್ಬರ ಕೊಲೆ
ಶಿವಮೊಗ್ಗ ನಗರದ ಗೋವಿಂದಾಪುರ ಆಶ್ರಯ ಬಡಾವಣೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಏಕಾಏಕಿ ಮನೆಯ ಓಣಿ ಒಳಗೆ ರೌಡಿಶೀಟರ್ ಮೇಲೆ ಮಾರಕಾಸ್ತ್ರಗಳನ್ನು ಬೀಸಿದ್ದಾರೆ.
ಕಿಡಿಗೇಡಿಗಳಿಂದ ರೌಡಿಶೀಟರ್ ನರಸಿಂಹ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಳ್ಳಲು ಪರದಾಡಿದ್ದಾನೆ, ಅದ್ರೆ ದುರಾದೃಷ್ಟವಶಾತ್ ನರಸಿಂಹ ಪಾರಾಗಲು ಸಾಧ್ಯವಾಗಲಿಲ್ಲ.
ಮಚ್ಚು, ಲಾಂಗು, ದೊಣ್ಣೆಗಳಿಂದ ರೌಡಿಶೀಟರ್ ಮೇಲೆ ಅಟ್ಯಾಕ್ ಮಾಡಿದ್ದು, ಮುಖ ಕೂಡ ಕಾಣದಂತೆ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.

Shivamogga – ಹಳೆ ದ್ವೇಷದಿಂದಲೇ ರೌಡಿಶೀಟರ್ನ ಕೊಲೆ ಮಾಡಲಾಗಿದ್ಯಾ?
ಸ್ಥಳಕ್ಕೆ ಶಿವಮೊಗ್ಗ ಎಸ್ ಪಿ ಎ.ಜಿ. ಕಾರಿಯಪ್ಪ ಹಾಗೂ ಕೋಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಹಳೆ ದ್ವೇಷದಿಂದಲೇ ರೌಡಿಶೀಟರ್ ನ ಕೊಲೆ ಮಾಡಲಾಗಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.
ಸದ್ಯ ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಆದ್ರೆ ಮನೆಗೆ ನುಗ್ಗಿ ದಾಳಿ ನಡೆಸಿ ಕೊಂದಿರೋ ಘಟನೆಗೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
ಇದನ್ನು ನೋಡಿ : ಜಮೀರ್ಗೆ ತಪ್ಪಿದ ಸಚಿವ ಸ್ಥಾನ ತಿಪಟೂರಿನಲ್ಲಿ ಬೃಹತ್ ಪ್ರತಿಭಟನೆ





