Shivamogga : ಮನೆ ಮೇಲೆ ಗುಡ್ಡ ಕುಸಿದು ಮೂವರ ದುರ್ಮರಣ

ಭಾರೀ ಮಳೆಯಿಂದಾಗಿ ಮನೆ ಮೇಲೆ ಗುಡ್ಡ ಕುಸಿದು ನಾಲ್ಕು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ದುರ್ಘಟನೆ Shivamogga ಜಿಲ್ಲೆ ತೀರ್ಥಹಳ್ಳಿ ಪಟ್ಟಣದ ತಮ್ಮಡಿಕೊಪ್ಪ ಕೆರೆ ಬಳಿ ನಡೆದಿದೆ.
ಇದನ್ನು ಓದಿ : ವಯನಾಡಿನಲ್ಲಿ ಮತ್ತೆ ಭೂಕುಸಿತ – ಮಣ್ಣಿನಡಿ ಹಲವರು ಸಿಲುಕಿರೋ ಶಂಕೆ
ಒಂದೇ ಕ್ಷಣದಲ್ಲಿ ಮನೆಯ ಮೂರು ಜೀವಗಳು ಕಣ್ಮರೆ
ಮಲ್ಲಿಕಾರ್ಜುನ, ನಾಗವೇಣಿ ಹಾಗೂ ದಂಪತಿಯ ಮಗ ಸಂತೋಷ್ ಮೃತಪಟ್ಟಿರುವವರು ಎನ್ನಲಾಗಿದೆ. ಗುಡ್ಡದ ಕೆಳಭಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದ ಗಂಗಾವತಿ ಮೂಲದ ಕಾರ್ಮಿಕರ ಕುಟುಂಬದ ಮೇಲೆ ಮಣ್ಣು ಹಾಗೂ ಬಂಡೆಗಳು ಕುಸಿದಿವೆ ಎಂದು ಹೇಳಲಾಗಿದೆ.

ದುರಂತ ಅಂತ್ಯ
ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಈ ಕುಟುಂಬದ ದುರಂತ ಅಂತ್ಯ ಗ್ರಾಮಸ್ಥರ ಮನಸ್ಸನ್ನು ಮಿಡಿಯುವಂತೆ ಮಾಡಿದೆ. ಒಂದೇ ಕ್ಷಣದಲ್ಲಿ ಮನೆಯ ಮೂರು ಜೀವಗಳು ಕಣ್ಮರೆಯಾಗಿರುವುದು ಇಡೀ ಗ್ರಾಮವನ್ನು ದುಃಖದಲ್ಲಿ ಮುಳುಗಿಸಿದೆ.
ಇದನ್ನು ನೋಡಿ : CM ಆದ ಬಳಿಕ ಮೊದಲ ಬಾರಿಗೆ ಮೈಸೂರಿಗೆ – ಚಾಮುಂಡೇಶ್ವರಿ ದೇವಿ ದರ್ಶನದ ಬಳಿಕ ಏನಂದ್ರು?





