Aadhar Card ಕಳೆದುಹೋಗಿದೆಯೇ? ಜಸ್ಟ್ ಈ ರೀತಿ ಸುಲಭವಾಗಿ ಮರಳಿ ಪಡೆಯಬಹುದು.!

ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯನ ಪ್ರಮುಖ ಗುರುತಿನ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳ ಲಾಭ ಪಡೆಯುವವರೆಗೂ Aadhar Card ಕಡ್ಡಾಯವಾಗಿದೆ. ಆದರೆ ಆಧಾರ್ ಕಾರ್ಡ್ ಕಳೆದುಹೋದರೆ ಅಥವಾ ಅದರ ಸಂಖ್ಯೆಯೇ ನೆನಪಿಲ್ಲದಿದ್ದರೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಇದೀಗ ಸುಲಭ ಪರಿಹಾರ ಸಿಕ್ಕಿದೆ.
ಸುಲಭವಾಗಿ ಆಧಾರ್ ಮರಳಿ ಪಡೆಯಬಹುದು.!
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ ಯುಐಡಿಎಐ, ಕಳೆದುಹೋದ ಆಧಾರ್ ಸಂಖ್ಯೆಯನ್ನು ಮರಳಿ ಪಡೆಯಲು ಸರಳ ಆನ್ಲೈನ್ ಹಾಗೂ ಆಫ್ಲೈನ್ ವ್ಯವಸ್ಥೆಯನ್ನು ಒದಗಿಸಿದೆ.
ಕೇವಲ ಹೆಸರು ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯ ಸಹಾಯದಿಂದ ಮನೆಯಲ್ಲೇ ಕುಳಿತು ಆಧಾರ್ ಸಂಖ್ಯೆಯನ್ನು ಮರಳಿ ಪಡೆಯಬಹುದು.

ಜಸ್ಟ್ ಈ ರೀತಿ ಮಾಡಿ
ಇದಕ್ಕಾಗಿ ಮೊದಲು ಯುಐಡಿಎಐ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ‘My Aadhaar’ ವಿಭಾಗದಲ್ಲಿ ಇರುವ ‘Retrieve Lost or Forgotten EID/UID’ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಬಳಿಕ ಹೆಸರು, ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ ಒಟಿಪಿ ಪಡೆಯಬೇಕು.
ಮೊಬೈಲ್ಗೆ ಬಂದ ಒಟಿಪಿಯನ್ನು ನಮೂದಿಸಿ ಪರಿಶೀಲನೆ ಪೂರ್ಣಗೊಳಿಸಿದ ಬಳಿಕ, ನಿಮ್ಮ ಆಧಾರ್ ಸಂಖ್ಯೆಯನ್ನು SMS ಮೂಲಕ ಸುರಕ್ಷಿತವಾಗಿ ಕಳುಹಿಸಲಾಗುತ್ತದೆ. ಹೀಗಾಗಿ ಆಧಾರ್ ಸಂಖ್ಯೆ ಕಳೆದುಹೋದರೂ ಕೆಲವೇ ನಿಮಿಷಗಳಲ್ಲಿ ಅದನ್ನು ಮರಳಿ ಪಡೆಯಬಹುದು.
ಇದನ್ನು ಓದಿ : ಆಧಾರ್ ಕಾರ್ಡ್ನಲ್ಲಿ ನಿಮ್ಮ ಹಳೆಯ ಫೋಟೋ ಬದಲಾಯಿಸುವುದು ಹೇಗೆ?

947 ಸಹಾಯವಾಣಿಗೆ ಕರೆ ಮಾಡಿ – Aadhar Card ಮರಳಿಪಡೆಯಿರಿ
ಇನ್ನು ಇಂಟರ್ನೆಟ್ ಸೌಲಭ್ಯ ಇಲ್ಲದಿದ್ದರೆ 1947 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಬಹುದು. ಗ್ರಾಹಕ ಸೇವಾ ಪ್ರತಿನಿಧಿಗೆ ನಿಮ್ಮ ಹೆಸರು, ಜನ್ಮ ದಿನಾಂಕ ಮತ್ತು ವಿಳಾಸದ ಮಾಹಿತಿ ನೀಡಿದರೆ ಪರಿಶೀಲನೆ ಬಳಿಕ ಆಧಾರ್ ಸಂಖ್ಯೆ ತಿಳಿಸಲಾಗುತ್ತದೆ. ಹೊಸದಾಗಿ ಆಧಾರ್ ನೋಂದಣಿ ಮಾಡಿಸಿಕೊಂಡವರು ತಮ್ಮ ಎನ್ರೋಲ್ಮೆಂಟ್ ಐಡಿ ಕಳೆದುಕೊಂಡಿದ್ದರೂ ಇದೇ 1947 ಸಹಾಯವಾಣಿಗೆ ಕರೆ ಮಾಡಿ ಅಗತ್ಯ ವಿವರಗಳನ್ನು ನೀಡಿ ಸಂಖ್ಯೆಯನ್ನು ಮರಳಿ ಪಡೆಯಬಹುದು.
ಸಲಹೆ: ಭವಿಷ್ಯದಲ್ಲಿ ಇಂತಹ ತೊಂದರೆಗಳನ್ನು ತಪ್ಪಿಸಲು ನಿಮ್ಮ ಮೊಬೈಲ್ನಲ್ಲಿ ‘mAadhaar’ ಆ್ಯಪ್ ಡೌನ್ಲೋಡ್ ಮಾಡಿಟ್ಟುಕೊಳ್ಳಿ.
ಇದರಲ್ಲಿ ನಿಮ್ಮ ಡಿಜಿಟಲ್ ಆಧಾರ್ ಕಾರ್ಡ್ ಯಾವಾಗಲೂ ಸುರಕ್ಷಿತವಾಗಿರುತ್ತದೆ ಮತ್ತು ಇದನ್ನು ಎಲ್ಲಾ ಕಡೆ ಅಧಿಕೃತ ದಾಖಲೆಯಾಗಿ ಬಳಸಬಹುದು.

ಇದನ್ನು ನೋಡಿ : ನಾನು ಸತ್ತರೂ HEMAVATHI ನೀರು ಬಿಡಲ್ಲ – ಮಾಜಿ ಸಚಿವ SOGADU SHIVANNA ಎಚ್ಚರಿಕೆ..!



