Peddi : ವಿವಾದದ ನಂತರ ಸದ್ದು ಮಾಡಿದ ಜಾನ್ವಿ ಕಪೂರ್ ಸಂಭಾವನೆ ಮ್ಯಾಟರ್!

ಮೆಗಾ ಪವರ್ಸ್ಟಾರ್ ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದ್ದು, ಇದೀಗ ಚಿತ್ರದ ನಾಯಕಿ ಜಾನ್ವಿ ಕಪೂರ್ ಪಡೆದಿದ್ದಾರೆ ಎನ್ನಲಾದ ಸಂಭಾವನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ.
ಹಳ್ಳಿಗಾಡಿನ ಯುವಕನ ಪಾತ್ರದಲ್ಲಿ ರಾಮ್ ಚರಣ್
ನಿರ್ದೇಶಕ ಬುಚ್ಚಿಬಾಬು ಸಾನಾ ಸಾರಥ್ಯದಲ್ಲಿ ಮೂಡಿಬಂದಿರುವ Peddi ಚಿತ್ರದಲ್ಲಿ ರಾಮ್ ಚರಣ್ ಹಳ್ಳಿಗಾಡಿನ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ಕಮರ್ಷಿಯಲ್ ಹಿಟ್ ಆಗಿ ಮುನ್ನುಗ್ಗುತ್ತಿದೆ.

ಪೆದ್ದಿ ಚಿತ್ರಕ್ಕಾಗಿ ನಟಿ ಜಾನ್ವಿ ಕಪೂರ್ ಪಡೆದ ಸಂಭಾವನೆ ಎಷ್ಟು?
ಈ ಬಿಗ್ ಬಜೆಟ್ ಚಿತ್ರದಲ್ಲಿ ‘ಅಚ್ಚೀಯಮ್ಮ’ ಎಂಬ ಪಾತ್ರವನ್ನು ಪೋಷಿಸಿದ್ದಕ್ಕಾಗಿ ಜಾನ್ವಿ ಕಪೂರ್ ಬರೋಬ್ಬರಿ 8 ಕೋಟಿ ರೂಪಾಯಿಗಳ ಭಾರಿ ಸಂಭಾವನೆಯನ್ನು ಪಡೆದಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಇದೀಗ ಜಾನ್ವಿ ಕಪೂರ್ ಅವರು ಪಡೆದಿರುವ ಸಂಭಾವನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ.
ಇದನ್ನು ಓದಿ : ಕೇವಲ 4 ದಿನಕ್ಕೆ 300 ಕೋಟಿ ಗಡಿ ತಲುಪಿದ ʻಪೆದ್ದಿʼ ಸಿನಿಮಾ

‘ದೇವರ’ ಸಿನಿಮಾಗಾಗಿ ಪಡೆದ ಹಣವೆಷ್ಟು?
ಈ ಹಿಂದೆ ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾಗಾಗಿ ಜಾನ್ವಿ ಕಪೂರ್ ಸುಮಾರು 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎಂಬ ವರದಿಗಳು ಹರಿದಾಡಿದ್ದವು. ಇದೀಗ ‘ಪೆದ್ದಿ’ಗಾಗಿ ಅದಕ್ಕಿಂತ ಹೆಚ್ಚಿನ ಮೊತ್ತ ಪಡೆದಿದ್ದಾರೆ ಎನ್ನಲಾಗುತ್ತಿದೆ.
Peddi ಸಿನಿಮಾ – ವಿವಾದದ ನಂತರ ಸದ್ದು ಮಾಡಿದ ಸಂಭಾವನೆ ಮ್ಯಾಟರ್!
ಇನ್ನೊಂದೆಡೆ, ಸಿನಿಮಾ ಯಶಸ್ಸಿನ ನಡುವೆಯೇ ಜಾನ್ವಿ ಕಪೂರ್ ಅವರ ಪಾತ್ರಕ್ಕೆ ಬೇಕಾದಷ್ಟು ಪ್ರಾಮುಖ್ಯತೆ ನೀಡಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. ಕಥೆಯ ಕೇಂದ್ರಬಿಂದು ಸಂಪೂರ್ಣವಾಗಿ ನಾಯಕನ ಸುತ್ತಲೇ ಸಾಗಿರುವುದರಿಂದ ನಾಯಕಿಯ ಪಾತ್ರ ಸೀಮಿತವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಇದನ್ನು ನೋಡಿ : ಕಾಡುಗೋಡಿ ಕೇಸ್ಗೆ BIG TWIST – ಪಾಪಿ ತಾಯಿ PRIYANKA ARREST.!




