ನಾಲ್ಕೇ ದಿನಕ್ಕೆ 300 ಕೋಟಿ ರೂ. ಗಡಿ ತಲುಪಿದ Peddi – ಸೋಮವಾರದ ಅಗ್ನಿಪರೀಕ್ಷೆಯಲ್ಲಿ ಪಾಸಾಗಲಿದೆಯಾ ರಾಮ್ ಚರಣ್ ಸಿನಿಮಾ?

ಟಾಲಿವುಡ್ ನಟ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಪೆದ್ದಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದ್ದು, ಮೊದಲ ವಾರಾಂತ್ಯದಲ್ಲೇ ದಾಖಲೆಯ ಕಲೆಕ್ಷನ್ ಮಾಡಿ ಹೊಸ ಮೈಲಿಗಲ್ಲು ನಿರ್ಮಿಸಿದೆ.
ಮೊದಲ ದಿನದ ಕಲೆಕ್ಷನ್ ಎಷಟು?
ನಿರ್ದೇಶಕ ಬುಚ್ಚಿಬಾಬು ಸಾನ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರ ಮೊದಲ ದಿನವೇ ₹135.36 ಕೋಟಿ ಗಳಿಕೆ ಮಾಡುವ ಮೂಲಕ ಅದ್ದೂರಿ ಓಪನಿಂಗ್ ಪಡೆದಿತ್ತು. ಇದೀಗ ಚಿತ್ರತಂಡ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ, Peddi ಸಿನಿಮಾ ಮೊದಲ ವೀಕೆಂಡ್ ಅಂತ್ಯಕ್ಕೆ ವಿಶ್ವಾದ್ಯಂತ ₹292.50 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಬ್ಲಾಕ್ಬಸ್ಟರ್ ಹಾದಿಯಲ್ಲಿ ಮುನ್ನುಗ್ಗುತ್ತಿದೆ.

ವಿದೇಶಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ
ಚಿತ್ರದ ನಿರ್ಮಾಣ ಸಂಸ್ಥೆ ವೃದ್ಧಿ ಸಿನಿಮಾಸ್ ಸಾಮಾಜಿಕ ಜಾಲತಾಣದಲ್ಲಿ ಈ ಕಲೆಕ್ಷನ್ ವಿವರವನ್ನು ಹಂಚಿಕೊಂಡಿದ್ದು, ದೇಶೀಯ ಮಾರುಕಟ್ಟೆಯ ಜೊತೆಗೆ ವಿದೇಶಗಳಲ್ಲಿಯೂ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ ಎಂದು ತಿಳಿಸಿದೆ.
ನಾಲ್ಕೇ ದಿನಕ್ಕೆ 300 ಕೋಟಿ ರೂ. ಗಡಿ ತಲುಪಿದ ಪೆದ್ದಿ
ಮೊದಲ ದಿನ ₹135.36 ಕೋಟಿ ಗಳಿಸಿದ್ದ ‘ಪೆದ್ದಿ’, ಎರಡನೇ ದಿನ ₹46.44 ಕೋಟಿ ಹಾಗೂ ಮೂರನೇ ದಿನ ₹54.90 ಕೋಟಿ ಕಲೆಕ್ಷನ್ ಮಾಡಿತ್ತು. ಕೇವಲ ಮೂರು ದಿನಗಳಲ್ಲಿ ₹236.70 ಕೋಟಿ ಗಳಿಸಿದ್ದ ಸಿನಿಮಾ, ಮೊದಲ ವಾರಾಂತ್ಯದ ವೇಳೆಗೆ ₹292.50 ಕೋಟಿ ದಾಟುವ ಮೂಲಕ ಬಾಕ್ಸ್ ಆಫೀಸ್ನಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ.
ಇದನ್ನು ಓದಿ : ಡಿವೋರ್ಸ್ ವಿವಾದ ನಡುವೆ ಮ್ಯಾಚಿಂಗ್ ಡ್ರೆಸ್ನಲ್ಲಿ ಮಿಂಚಿದ Vijay – Trisha

ವೆಂಕಟ ಸತೀಶ್ ಕಿಲಾರು ನಿರ್ಮಾಣದ Peddi
ಇನ್ನು ಈ ಚಿತ್ರವನ್ನು ವೆಂಕಟ ಸತೀಶ್ ಕಿಲಾರು ನಿರ್ಮಿಸಿದ್ದು, ಸಂಗೀತವನ್ನು ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ನೀಡಿದ್ದಾರೆ. ಛಾಯಾಗ್ರಹಣವನ್ನು ರತ್ನವೇಲು ನಿರ್ವಹಿಸಿದ್ದು, ಚಿತ್ರದ ತಾಂತ್ರಿಕ ಗುಣಮಟ್ಟಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನು ನೋಡಿ : ಗಂಡನ ಕಾಟಕ್ಕೆ ಬೇಸತ್ತು ಹೆಂಡ್ತಿ ಸೂ*ಸೈ* – ತಾಯಿ ಇಲ್ಲದೇ ತಬ್ಬಲಿ ಆದ ಮಕ್ಕಳು




