ಇಂದಿನಿಂದ KMF ಮತ್ತು ಬಮುಲ್ ನಂದಿನಿ ಬೆಣ್ಣೆ ಮತ್ತು ತುಪ್ಪದ ಬೆಲೆಗಳನ್ನು ಹೆಚ್ಚಿಸಿವೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ (KMF) ತನ್ನ ನಂದಿನಿ ಬ್ರಾಂಡ್ನ ತುಪ್ಪ ಮತ್ತು ಬೆಣ್ಣೆ ಬೆಲೆಯನ್ನು ದಿಢೀರ್ ಏರಿಕೆ ಮಾಡಿದೆ. ಪರಿಷ್ಕೃತ ದರವು ಇಂದಿನಿಂದ (ಜುಲೈ 24) ರಾಜ್ಯಾದ್ಯಂತ ಜಾರಿಗೆ ಬಂದಿದೆ.
ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ
ಕೆಎಂಎಫ್ ವ್ಯಾಪ್ತಿಯ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಹೊರಡಿಸಿರುವ ಆದೇಶದ ಪ್ರಕಾರ, ಒಂದು ಲೀಟರ್ ನಂದಿನಿ ತುಪ್ಪದ ದರ ₹700ರಿಂದ ₹715ಕ್ಕೆ ಹೆಚ್ಚಳವಾಗಿದೆ. ಹಾಗೆಯೇ ಒಂದು ಕೆಜಿ ನಂದಿನಿ ಬೆಣ್ಣೆಯ ಬೆಲೆ ₹610ರಿಂದ ₹660ಕ್ಕೆ ಏರಿಕೆಯಾಗಿದೆ. ಅಂದರೆ, ತುಪ್ಪದ ದರದಲ್ಲಿ ₹15 ಹಾಗೂ ಬೆಣ್ಣೆಯ ದರದಲ್ಲಿ ₹50 ಹೆಚ್ಚಳವಾಗಿದೆ.
ಈ ಪರಿಷ್ಕೃತ ದರವು ರಾಜ್ಯದ ಎಲ್ಲಾ ಕೆಎಂಎಫ್ ಮಾರಾಟ ಮಳಿಗೆಗಳಲ್ಲಿ ತಕ್ಷಣದಿಂದಲೇ ಅನ್ವಯವಾಗಲಿದೆ ಎಂದು ಬಮೂಲ್ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಹಕರಿಗೆ ಹೆಚ್ಚುವರಿ ಹೊರೆ
ನಂದಿನಿ ತುಪ್ಪ ಮತ್ತು ಬೆಣ್ಣೆ ಮನೆ ಬಳಕೆಯಲ್ಲಿ ವ್ಯಾಪಕವಾಗಿ ಬಳಸುವ ಉತ್ಪನ್ನಗಳಾಗಿರುವುದರಿಂದ, ಈ ಬೆಲೆ ಏರಿಕೆ ಸಾಮಾನ್ಯ ಗ್ರಾಹಕರಿಗೆ ಹೆಚ್ಚುವರಿ ಹೊರೆಯಾಗಲಿದೆ.
ಇದರ ಜೊತೆಗೆ ಹೋಟೆಲ್, ಬೇಕರಿ, ಸಿಹಿ ತಿಂಡಿ ತಯಾರಕರು ಸೇರಿದಂತೆ ಆಹಾರ ಉದ್ಯಮಕ್ಕೂ ಉತ್ಪಾದನಾ ವೆಚ್ಚ ಹೆಚ್ಚುವ ಸಾಧ್ಯತೆ ಇದೆ.
ಇದನ್ನು ಓದಿ : KMF ನಂದಿನಿ ಉತ್ಪನ್ನ ತಿಂದರೆ ಕ್ಯಾನ್ಸರ್ ಬರುತ್ತಾ..? ಎಂಡಿ ಸ್ಪಷ್ಟನೆ

ಕಳೆದ ವರ್ಷವೂ ಬೆಲೆ ಏರಿಕೆ
ಕಳೆದ ವರ್ಷ ನವೆಂಬರ್ 2025ರಲ್ಲಿ ಕೂಡ ಕೆಎಂಎಫ್ ತುಪ್ಪದ ದರವನ್ನು ಪ್ರತಿ ಕೆಜಿಗೆ ₹90 ಹೆಚ್ಚಿಸಿತ್ತು. ಆಗ ಒಂದು ಕೆಜಿ ತುಪ್ಪದ ಬೆಲೆ ₹610ರಿಂದ ₹700ಕ್ಕೆ ಏರಿಕೆಯಾಗಿತ್ತು.
ಬೆಲೆ ಏರಿಕೆಗೆ ಕಾರಣವೇನು?
ಕೆಎಂಎಫ್ ಪ್ರಕಾರ, ರೈತರಿಗೆ ಹೆಚ್ಚುವರಿ ಹಾಲಿನ ಖರೀದಿ ದರ ಪಾವತಿಸುವುದು, ದೇಶದಲ್ಲಿ ತುಪ್ಪ ಮತ್ತು ಬೆಣ್ಣೆಗೆ ಹೆಚ್ಚುತ್ತಿರುವ ಬೇಡಿಕೆ, ಉತ್ಪಾದನಾ ವೆಚ್ಚದ ಏರಿಕೆ ಹಾಗೂ ನಷ್ಟ ತಪ್ಪಿಸುವ ಉದ್ದೇಶದಿಂದ ಈ ದರ ಪರಿಷ್ಕರಣೆ ಮಾಡಲಾಗಿದೆ.
ಕೆಎಂಎಫ್ ಉತ್ಪನ್ನಗಳ ಗುಣಮಟ್ಟ ಹಾಗೂ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ನೋಡಿ : ಟಿಪ್ಪರ್ಗೆ ಡಿಕ್ಕಿ ಹೊಡೆದ ಖಾಸಗಿ ಬಸ್ – ಸ್ಥಳದಲ್ಲೇ ಓರ್ವ ಸಾ*, ಹಲವರು ಗಂಭೀರ




