RCB ಚೊಚ್ಚಲ ಕಪ್ ಗೆಲುವಿನ ಬಗ್ಗೆ ಧೋನಿ ಹೇಳಿಕೆ – ವಿಡಿಯೊ ವೈರಲ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ ವರ್ಷ ಐಪಿಎಲ್ ಟ್ರೋಫಿ ಗೆದ್ದು ಮೊದಲ ಬಾರಿಗೆ ಪ್ರಶಸ್ತಿ ಸಾಧನೆ ಮಾಡಿತ್ತು. RCB ಯು ಈ ಐತಿಹಾಸಿಕ ಸಾಧನೆಗೆ ಕ್ರಿಕೆಟ್ ಲೋಕದ ಹಲವರು ಅಭಿನಂದನೆ ಸಲ್ಲಿಸಿದ್ದು, ಮಹೇಂದ್ರ ಸಿಂಗ್ ಧೋನಿ ನೀಡಿದ ಹೇಳಿಕೆ ವೈರಲ್ ಆಗಿದೆ.
RCB ಚೊಚ್ಚಲ ಕಪ್ ಗೆಲುವಿನ ಬಗ್ಗೆ ಧೋನಿ ಹೇಳಿಕೆ
ಇತ್ತೀಚೆಗೆ ಇಂಡಿಗೋ ಅಭಿಮಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಧೋನಿ, 18 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ 2025ರಲ್ಲಿ ಆರ್ಸಿಬಿ ಐಪಿಎಲ್ ಟ್ರೋಫಿ ಗೆದ್ದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಭಾರತದ ಮಾಜಿ ನಾಯಕ ಧೋನಿ, ಬೆಂಗಳೂರು ಫ್ರಾಂಚೈಸಿಯ ಸಾಧನೆಯನ್ನು ಒಪ್ಪಿಕೊಂಡು, ತಂಡ ಆಡಿದ ಕ್ರಿಕೆಟ್ನ ಗುಣಮಟ್ಟವನ್ನು ಶ್ಲಾಘಿಸಿದರು. ಅಲ್ಲದೇ, ಕಷ್ಟದ ಸಮಯದಲ್ಲೂ ತಂಡದ ಬೆನ್ನಿಗೆ ನಿಂತಿದ್ದ ಆರ್ಸಿಬಿ ಅಭಿಮಾನಿಗಳ ನಿಷ್ಠೆಯನ್ನು ಅವರು ವಿಶೇಷವಾಗಿ ಮೆಚ್ಚಿಕೊಂಡರು.
ಇದನ್ನು ಓದಿ : Private Bus ದುರಂತದ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ – ನಿಯಮ ಪಾಲನೆಗೆ ಸೂಚನೆ!

ಅವರಿಗೆ ದೊಡ್ಡ ಅಭಿನಂದನೆಗಳು
“ನಾನು ಸಿಎಸ್ಕೆ ತಂಡದ ಭಾಗವಾಗಿದ್ದು ಬೇರೆ ಯಾವುದೇ ತಂಡ ಐಪಿಎಲ್ ಗೆಲ್ಲುವುದನ್ನು ನಾನು ಊಹಿಸಲು ಸಾಧ್ಯವಿಲ್ಲ. ಆದರೆ ಅದು ಬಹುನಿರೀಕ್ಷಿತವಾಗಿತ್ತು ಮತ್ತು ಅವರು ತುಂಬಾ ಚೆನ್ನಾಗಿ ಆಡಿದರು. ಅವರಿಗೆ ದೊಡ್ಡ ಅಭಿನಂದನೆಗಳು ಮತ್ತು ನಾನು ಆಗಲೂ ಅದನ್ನು ಹೇಳಿದೆ” ಎಂದು ಧೋನಿ ಹೇಳಿದರು.
ಧೋನಿಯ ಈ ಹೇಳಿಕೆಯ ವಿಡಿಯೊ ವೈರಲ್
ಧೋನಿಯ ಈ ಹೇಳಿಕೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರ್ಸಿಬಿ ಮತ್ತು ಸಿಎಸ್ಕೆ ಅಭಿಮಾನಿಗಳ ನಡುವೆ ಚರ್ಚೆಗೆ ಕಾರಣವಾಗಿದೆ.

ಇದನ್ನು ನೋಡಿ : ಛತ್ತೀಸ್ಗಢದ ಉಕ್ಕಿನ ಸ್ಥಾವರದಲ್ಲಿ ಭಾರಿ ಸ್ಫೋಟ




