ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, Sleeper Bus ಗಳ ವಿನ್ಯಾಸ, ಸುರಕ್ಷತಾ ವ್ಯವಸ್ಥೆ ಕುರಿತು ಸುದೀರ್ಘ ಚರ್ಚೆ ನಡೆದಿದೆ ಎನ್ನಲಾಗಿದೆ.

ಚಿತ್ರದುರ್ಗದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದ ಬೆನ್ನಲ್ಲೇ, ಪ್ರಯಾಣಿಕರ ಸುರಕ್ಷತೆ ಕುರಿತಾಗಿ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಅಗ್ನಿ ದುರಂತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಮಧ್ಯಪ್ರವೇಶ ಮಾಡಿದ್ದು, ಅದರ ಸೂಚನೆಗಳ ಮೇರೆಗೆ ರಾಜ್ಯ ಸಾರಿಗೆ ಇಲಾಖೆ ಖಾಸಗಿ ಬಸ್ ಮಾಲೀಕರೊಂದಿಗೆ ಮಹತ್ವದ ಸಭೆ ನಡೆಸಿದೆ.
ಸುದೀರ್ಘ ಚರ್ಚೆ
ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ವಿಶೇಷವಾಗಿ ಖಾಸಗಿ Sleeper Bus ವಿನ್ಯಾಸ, ಸುರಕ್ಷತಾ ವ್ಯವಸ್ಥೆಗಳು ಹಾಗೂ ಅಗ್ನಿ ತಡೆ ಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆದಿದೆ.
ಇದನ್ನು ಓದಿ : ಪೌರಾಯುಕ್ತೆಗೆ ನಿಂದನೆ ಕೇಸ್ – Rajeev Gowdaಗೆ ಮತ್ತೊಂದು ಬಿಗ್ ಶಾಕ್..!
8 ಕಡ್ಡಾಯ ನಿಯಮ ಪಾಲನೆಗೆ ಸೂಚನೆ!
ಚಿತ್ರದುರ್ಗ ಅಗ್ನಿ ದುರಂತದ ಬಳಿಕ, ಖಾಸಗಿ ಬಸ್ಗಳ ಸುರಕ್ಷತಾ ಮಾನದಂಡಗಳನ್ನು ಮರುಪರಿಶೀಲಿಸಬೇಕೆಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು.
ಇದರ ಬೆನ್ನಲ್ಲೇ ಸಾರಿಗೆ ಇಲಾಖೆ ಚುರುಕುಗೊಂಡು, ಫೆಬ್ರವರಿ ಅಂತ್ಯದೊಳಗೆ ಕನಿಷ್ಠ 8 ಪ್ರಮುಖ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಸೂಚಿಸಿದೆ. ಸಭೆಯಲ್ಲಿ ಹೊಸ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸ್ಲೀಪರ್ ಬಸ್ಗಳಿಗೆ ಕಡ್ಡಾಯವಾದ 8 ಸುರಕ್ಷತಾ ನಿಯಮಗಳು
- ಸ್ಲೀಪರ್ ಬಸ್ಗಳಲ್ಲಿ ಚಾಲಕರ ಹಿಂಬದಿ ಡೋರ್ ತೆರೆಯುವ ವ್ಯವಸ್ಥೆ ಕಡ್ಡಾಯ
- ಸ್ಲೀಪರ್ ಬರ್ತ್ಗಳಲ್ಲಿ ಸ್ಲೈಡರ್ ಅಳವಡಿಕೆ
- ಒಂದು ತಿಂಗಳೊಳಗೆ ಫೈರ್ ಡಿಟೆಕ್ಷನ್ ಸಿಸ್ಟಂ ಅಳವಡಿಕೆ
- 10 ಕೆಜಿ ತೂಕದ ಅಗ್ನಿ ಶಾಮಕ ಸಾಧನ ಕಡ್ಡಾಯ
- ಚಾಸಿಸ್ ಅನಧಿಕೃತ ವಿಸ್ತರಣೆಗೆ ಸಂಪೂರ್ಣ ಬ್ರೇಕ್
- ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರಮಾಣಪತ್ರ ಕಡ್ಡಾಯ
- ಪ್ರಯಾಣಿಕರ ಸುರಕ್ಷತಾ ಮಾನದಂಡ ಪೂರೈಸಿದರೆ ಮಾತ್ರ ಫಿಟ್ನೆಸ್ ಪ್ರಮಾಣಪತ್ರ (FC)
- ಬಸ್ ಕವಚ ನಿರ್ಮಾಣ ಸಂಸ್ಥೆಯ ಸಿಂಧುತ್ವ ಪರಿಶೀಲನೆಯ ನಂತರವೇ ಬಸ್ ನೋಂದಣಿ
ಕಠಿಣ ಕ್ರಮ
ಸಾರಿಗೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಈ ನಿಯಮಗಳನ್ನು ಪಾಲಿಸದ ಬಸ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಫಿಟ್ನೆಸ್ ರದ್ದುಪಡಿಸುವುದು, ಬಸ್ ಸಂಚಾರಕ್ಕೆ ನಿರ್ಬಂಧ ವಿಧಿಸುವುದು ಹಾಗೂ ದಂಡ ವಿಧಿಸುವ ಕ್ರಮಗಳೂ ಜಾರಿಯಾಗುವ ಸಾಧ್ಯತೆ ಇದೆ.
ಇದನ್ನು ನೋಡಿ : ರಾಜ್ಯಪಾಲರನ್ನೇ ತಡೆದು ಗೂಂಡಾಗಿರಿ, ಇದು ಕರಾಳ ದಿನ: ಅಶೋಕ್ ವಾಗ್ದಾಳಿ




