Chikkaballapura : ಕಾಂಗ್ರೆಸ್ ಮುಖಂಡನ ಧಮ್ಕಿ ಕೇಸ್ – ಪಕ್ಷದಿಂದ ಅಮಾನತಿಗೆ ಶಿಫಾರಸ್ಸು .

ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಧಮ್ಕಿ ಹಾಕಿದ ಪ್ರಕರಣ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ರಾಜೀವ್ ಗೌಡ ವಿರುದ್ಧ ಪ್ರಕರಣ ದಾಖಲಾಗಿ ಒಂದು ವಾರದ ಮೇಲಾಗಿದ್ರು ಕೂಡ ರಾಜೀವ್ ಗೌಡನ ಬಂಧನ ಆಗದಿರುವ ಹಿನ್ನೆಲೆ ಈ ಪ್ರಕರಣವನ್ನು ಮೈತ್ರಿ ನಾಯಕರು ಅಸ್ತ್ರವಾಗಿ ಸಿಕೊಂಡಿದ್ದಾರೆ.
ಪೊಲೀಸರೇ ರಕ್ಷಣೆ ಮಾಡ್ತಾ ಇದ್ದಾರೆ ಅನ್ನೋ ಆರೋಪ
ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿರೋ ರಾಜೀವ್ ಗೌಡನನ್ನು ಪೊಲೀಸರೇ ರಕ್ಷಣೆ ಮಾಡ್ತಾ ಇದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದು, ರಾಜೀವ್ ಗೌಡ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷವೇ ರಾಜೀವ್ ಗೌಡಗೆ ಶಾಕ್ವೊಂದನ್ನು ನೀಡಿದೆ.
ಇದನ್ನು ಓದಿ : Ugram Manjuಗೆ ಮದುವೆ ಸಂಭ್ರಮ – ಅರಿಶಿಣ ಶಾಸ್ತ್ರದ ಫೋಟೋ ಇಲ್ಲಿದೆ!

ರಾಜೀವ್ ಗೌಡ ಬೆದರಿಕೆ
ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬೆದರಿಕೆ ಹಾಕಿದ್ದು, ಕ್ಷೇತ್ರದಲ್ಲಿ ಆಕ್ರೋಶ ಭುಗಿಲೇಳುತ್ತಿದ್ದಂತೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ತಲೆಮರೆಸಿಕೊಂಡಿದ್ದ.
ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಜೀವ್ ಗೌಡ ಕಾಣೆಯಾಗಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಪಕ್ಷದಿಂದ ಅಮಾನತಿಗೆ ಶಿಫಾರಸ್ಸು
Rajeev Gowda ನಡವಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದ್ದು, ಆರೋಪಿ ರಾಜೀವ್ ಗೌಡಗೆ ಕೆಪಿಸಿಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.
ಇದ್ರ ಬೆನ್ನಲ್ಲೇ ರಾಜೀವ್ ಗೌಡನನ್ನು ಪಕ್ಷದಿಂದ ಅಮಾನತು ಮಾಡುವಂತೆ ಕಾರ್ಯಾಧ್ಯಕ್ಷ ಚಂದ್ರಶೇಖರ್ ಅವರು ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷರಿಗೆ ಶಿಫಾರಸ್ಸು ಮಾಡಿದ್ದಾರೆ.

ರಾಜೀವ್ ಗೌಡ ಪಕ್ಷದಿಂದ ಸಸ್ಪೆಂಡ್ ಆಗುವುದು ಖಚಿತ
ಪಕ್ಷದ ಘನತೆಗೆ ಧಕ್ಕೆ ತಂದಿರುವ ರಾಜೀವ್ ಗೌಡ ಅವರನ್ನು ತಕ್ಷಣವೇ ಪಕ್ಷದಿಂದ ಅಮಾನತು ಮಾಡುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಧ್ಯಕ್ಷ ಚಂದ್ರಶೇಖರ್ ಅವರು ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರಿಗೆ ಪತ್ರ ಬರೆದಿದ್ದಾರೆ.
ಇದ್ರಿಂದ ರಾಜೀವ್ ಗೌಡ ಪಕ್ಷದಿಂದ Suspend ಆಗುವುದು ಬಹುತೇಕ ಖಚಿತವಾಗಿದ್ದು, ಆದಷ್ಟು ಬೇಗ ಪಕ್ಷದಿಂದ ಅಮಾನತು ಆಗುವ ಸಾದ್ಯತೆ ಇದೆ.

ಇದನ್ನು ನೋಡಿ : ಜಂಟಿ ಅಧಿವೇಶನಲ್ಲಿ ಭಾಷಣ ಅರ್ಧಕ್ಕೆ ನಿಲ್ಲಿಸಿ ಹೊರಟ ರಾಜ್ಯಪಾಲ ಗೆಹ್ಲೋಟ್




