Bengaluru : Gehlot ವಿರುದ್ಧ ಕಾಂಗ್ರೆಸ್ ಪ್ರತಿಭಟನೆ – ಸಿಎಂ ಸಿದ್ದರಾಮಯ್ಯ ಆಕ್ರೋಶ,ಸಂವಿಧಾನ ಬಾಹಿರ ನಡೆ – ಸುಪ್ರೀಂಕೋರ್ಟ್ ಚರ್ಚೆಗೆ ಸೂಚನೆ..!

Bengaluru : ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸರ್ಕಾರ ಸಿದ್ಧಪಡಿಸಿದ ಪೂರ್ಣ ಭಾಷಣವನ್ನು ಓದಲು ನಿರಾಕರಿಸಿ, ಕೇವಲ ಎರಡು ಸಾಲು ಓದಿ ಅಧಿವೇಶನದಿಂದ ಹೊರನಡೆದ ಘಟನೆ ನಡೆದಿದೆ.
ಈ ನಡೆ ಸದನದಲ್ಲಿ ಹೈಡ್ರಾಮಾಗೆ ಕಾರಣವಾಯಿತು ಮತ್ತು ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಸದನದಲ್ಲಿ ಹೈಡ್ರಾಮಾ – B.K. ಹರಿಪ್ರಸಾದ್ ರಾಜ್ಯಪಾಲನ್ನು ಅಡ್ಡಗಟ್ಟಿದರು
ರಾಜ್ಯಪಾಲರು ಕೇವಲ ಎರಡು ಸಾಲು ಭಾಷಣ ಮಾಡುತ್ತಿರೋದರಿಂದ ಅನೇಕ ಕಾಂಗ್ರೆಸ್ ನಾಯಕರು ಅವರನ್ನು ಬರಲು ಯತ್ನಿಸಿದರು. ಈ ವೇಳೆ ಪರಿಷತ್ ಸದಸ್ಯ B.K. ಹರಿಪ್ರಸಾದ್ ರಾಜ್ಯಪಾಲರನ್ನು ಅಡ್ಡಗಟ್ಟಿ, ಭಾಷಣ ಓದುವಂತೆ ಹಿಡಿದಿದ್ದರು.
ಸಂಸತ್ ಮರ್ಷಲ್ಗಳು ತಕ್ಷಣವೆ ಸ್ಥಳದಲ್ಲಿ ಮಧ್ಯಸ್ಥವಾಗಿ, ರಾಜ್ಯಪಾಲರಿಗೆ ಹೊರ ಹೋಗಲು ಅನುವು ಮಾಡಿಕೊಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರು ಸಂವಿಧಾನ ಬಾಹಿರವಾಗಿ ವರ್ತಿಸಿದ್ದಾರೆ ಎಂದು ಖಂಡಿಸಿದ್ದಾರೆ. ಅವರು ಸ್ಪಷ್ಟಪಡಿಸಿದ್ದಾರೆ: ರಾಜ್ಯಪಾಲರ ಕರ್ತವ್ಯ ಭಾಷಣ ಮಾಡುವುದು.
ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದುವಂತೆ ಮಾಡಬೇಕು. ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡುವುದು ಮುಖ್ಯ.
ಇದನ್ನು ಓದಿ : Ugram Manjuಗೆ ಮದುವೆ ಸಂಭ್ರಮ – ಅರಿಶಿಣ ಶಾಸ್ತ್ರದ ಫೋಟೋ ಇಲ್ಲಿದೆ!

Gehlot–ಸರ್ಕಾರ ವಿವಾದ ಮತ್ತು ಮುಂದಿನ ಚರ್ಚೆ
ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ಮಾತನ್ನು ನಿರಾಕರಿಸಿದ ಗವರ್ನರ್ ಕೆಂದ್ರ ಸರ್ಕಾರದ ಕೈಗೊಂಬೆ ರೀತಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
“ಸುಪ್ರೀಂಕೋರ್ಟ್ ಮೊರೆ ಹೋಗುವ ಬಗ್ಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ರಾಜ್ಯಪಾಲರು ತಮ್ಮ ತಯಾರಿಸಿದ ಭಾಷಣ ಮಾತ್ರ ಓದಿದ್ದಾರೆ. ಇದು ಸಂವಿಧಾನದ ವಿಧಿಗಳನ್ನು ವಿರೋಧಿಸುವುದು” ಎಂದು ಅವರು ಹೇಳಿದ್ದಾರೆ.

ಸಂವಿಧಾನಾತ್ಮಕ ಕರ್ತವ್ಯ ಮತ್ತು Gehlot ವಿರುದ್ಧ ಆಕ್ರೋಶ
ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು ರಾಜ್ಯಪಾಲರ ಕರ್ತವ್ಯ.
ಸರ್ಕಾರದ ಪೂರ್ಣ ಭಾಷಣವನ್ನು ಓದದೇ ಹೊರಗುಳಿಯುವುದು ಸಂವಿಧಾನ ಬಾಹಿರ. ಸಿಎಂ ಸಿದ್ದರಾಮಯ್ಯ, ಮನ್ ರೇಗಾ ಮರುಸ್ಥಾಪನೆ ಮತ್ತು VBI G. Ram Bill ರದ್ದುಗೊಳಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಇದನ್ನು ನೋಡಿ : ಜಂಟಿ ಅಧಿವೇಶನಲ್ಲಿ ಭಾಷಣ ಅರ್ಧಕ್ಕೆ ನಿಲ್ಲಿಸಿ ಹೊರಟ ರಾಜ್ಯಪಾಲ ಗೆಹ್ಲೋಟ್




