ರಣವೀರ್ ಸಿಂಗ್ ಅಭಿನಯದ ‘ Dhurandhar ’ ಸಿನಿಮಾದಲ್ಲಿ ಲಿಯಾರಿ ಪಟ್ಟಣದ ಚಿತ್ರಣಕ್ಕೆ ಪಾಕಿಸ್ತಾನ ಅಸಮಾಧಾನ ವ್ಯಕ್ತಪಡಿಸಿದ್ದು, ಅದರ ವಿರುದ್ಧವಾಗಿ ‘ಮೇರಾ ಲಿಯಾರಿ’ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದೆ.

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾದಲ್ಲಿ ಲಿಯಾರಿ ಪಟ್ಟಣವನ್ನು ತೋರಿಸಿದ ರೀತಿ ಬಗ್ಗೆ ಪಾಕಿಸ್ತಾನ ಅಸಮಾಧಾನ ವ್ಯಕ್ತಪಡಿಸಿದೆ.
ಈ ಹಿನ್ನೆಲೆ, ‘ಮೇರಾ ಲಿಯಾರಿ’ ಎಂಬ ಹೊಸ ಸಿನಿಮಾ ಮಾಡಿ ತಿರುಗೇಟು ನೀಡಲು ಪಾಕಿಸ್ತಾನ ಸಜ್ಜಾಗಿದೆ. ಈ ಸಿನಿಮಾ ಮೇ 8ರಂದು ಬಿಡುಗಡೆ ಆಗಲಿದ್ದು, ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ.

‘ಧುರಂಧರ್’ ಫ್ರಾಂಚೈಸಿಯ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ 3000 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿ ದಾಖಲೆ ಬರೆದಿವೆ.
ನಿರ್ದೇಶಕ ಆದಿತ್ಯ ಧರ್ ಅವರ ಈ ಸ್ಪೈ ಥ್ರಿಲ್ಲರ್ನಲ್ಲಿ ರಣವೀರ್ ಸಿಂಗ್ ಭಾರತೀಯ ಗೂಢಚಾರನಾಗಿ ಕಾಣಿಸಿಕೊಂಡಿದ್ದಾರೆ. 2005ರಿಂದ 2022ರ ಅವಧಿಯಲ್ಲಿ ಲಿಯಾರಿಯಲ್ಲಿ ನಡೆದ ಗ್ಯಾಂಗ್ ವಾರ್, ಭೂಗತ ಲೋಕದ ಚಟುವಟಿಕೆಗಳು ಮತ್ತು ಉಗ್ರರ ಜಾಲವನ್ನು ಧ್ವಂಸ ಮಾಡುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.
MUST READ : ‘ Toxic ’ ಟೀಸರ್ ವಿವಾದಕ್ಕೆ ಯಶ್ ಪ್ರತಿಕ್ರಿಯೆ..!!

ಈ ಚಿತ್ರದಲ್ಲಿ ರೆಹಮಾನ್ ಬಲೋಚ್, ಉಜೈರ್ ಬಲೋಚ್ ಮತ್ತು ದಾವೂದ್ ಇಬ್ರಾಹಿಂ ಮುಂತಾದ ನೈಜ ಪಾತ್ರಗಳನ್ನು ಆಧರಿಸಿದ ಕಥೆ ಬಳಸಲಾಗಿದೆ.
ಭಾರತದಲ್ಲಿ ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದರೂ, ಲಿಯಾರಿ ಪಟ್ಟಣವನ್ನು ಕೇವಲ ಅಪರಾಧದ ತಾಣವಾಗಿ ಮತ್ತು ಅರಾಜಕತೆಯಿಂದ ಕೂಡಿದ ಪ್ರದೇಶವಾಗಿ ತೋರಿಸಲಾಗಿದೆ ಎಂದು ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ.

ಸಿಂಧ್ ಪ್ರಾಂತ್ಯದ ಮಾಹಿತಿ ಸಚಿವ ಶರ್ಜೀಲ್ ಮೆಮನ್, ‘ಧುರಂಧರ್ ಸಿನಿಮಾವು ಪಾಕಿಸ್ತಾನದ ವಿರುದ್ಧ ಭಾರತ ಮಾಡುತ್ತಿರುವ ಅಪಪ್ರಚಾರ.
ಇದಕ್ಕೆ ನಾವು ಸಿನಿಮಾ ಮೂಲಕವೇ ಉತ್ತರ ನೀಡುತ್ತೇವೆ’ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನಂತರ ಎರಡೂ ದೇಶಗಳ ನಡುವೆ ಸಿನಿಮಾ ಸಮರದ ಚರ್ಚೆ ಹೆಚ್ಚಾಗಿದೆ.

ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನ ಈಗ ‘ಮೇರಾ ಲಿಯಾರಿ’ ಸಿನಿಮಾವನ್ನು ಸಿದ್ಧಪಡಿಸಿದೆ. ನಿರ್ದೇಶಕ ಅಬು ಅಲೀಹಾ ನಿರ್ದೇಶನದ ಈ ಚಿತ್ರವು ಕ್ರೀಡಾ ಆಧಾರಿತ ಕಥೆಯನ್ನು ಹೊಂದಿದ್ದು,
ಲಿಯಾರಿಯ ಹೆಣ್ಣುಮಕ್ಕಳಲ್ಲಿ ಫುಟ್ಬಾಲ್ ಬಗ್ಗೆ ಇರುವ ಆಸಕ್ತಿ ಮತ್ತು ಅವರ ಸಾಧನೆಗಳನ್ನು ತೋರಿಸಲಿದೆ. ಆಯೆಷಾ ಒಮರ್ ಮತ್ತು ದನಾನೀರ್ ಮೊಬೀನ್ ಮುಂತಾದ ನಟಿಯರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರವು ಮೊದಲು ಯುಕೆ ಏಷ್ಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನಗೊಳ್ಳಲಿದ್ದು, ಬಳಿಕ ಮೇ 8ರಂದು ಪಾಕಿಸ್ತಾನದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಒಟ್ಟಿನಲ್ಲಿ, ಸಿನಿಮಾದ ಮೂಲಕ ಆರಂಭವಾದ ಈ ಲಿಯಾರಿ ವಿವಾದ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಗಳಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
MUST WATCH : TUMAKURU ಶಿಕ್ಷಣ ಕ್ರಾಂತಿ ಮಾಡ್ತಿರೋ VIDYANIDHI – SECRETARY N.B PRADEEP KUMAR ಅವರ PODCAST




