ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ Ugram Manju.

ಕನ್ನಡ ಚಿತ್ರರಂಗದ ಖ್ಯಾತ ನಟ ಉಗ್ರಂ ಮಂಜು ಇದೇ ಜನವರಿ 23ರಂದು ಧರ್ಮಸ್ಥಳದ ಮಹೋತ್ಸವ ಭವನದಲ್ಲಿ ಉಗ್ರಂ ಮಂಜು ಹಾಗೂ ಸಾಯಿ ಸಂಧ್ಯಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಸ್ಟಾರ್..!
ಮದುವೆಗೆ ಇನ್ನೂ ಎರಡು ದಿನಗಳು ಬಾಕಿ ಇರುವಂತೆಯೇ, ಉಗ್ರಂ ಮಂಜು ಅವರ ನಿವಾಸದಲ್ಲಿ ಹಳದಿ ಶಾಸ್ತ್ರದ ಸಂಭ್ರಮ ಅದ್ದೂರಿಯಾಗಿ ನಡೆಯಿತು. ಕುಟುಂಬಸ್ಥರು, ಆಪ್ತರು ಹಾಗೂ ಬಂಧುಮಿತ್ರರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ಅರಿಶಿಣ ಶಾಸ್ತ್ರ ನೆರವೇರಿತು.
ಇದನ್ನು ಓದಿ : Bengaluru Airport ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

ಮಂಜುಗೆ ಮದುವೆ ಸಂಭ್ರಮ
ಈ ಸಂದರ್ಭದಲ್ಲಿ ಉಗ್ರಂ ಮಂಜು ಸಂತಸದಿಂದ ಕಂಗೊಳಿಸುತ್ತಿದ್ದು, ಮದುವೆಯ ಸಂಭ್ರಮ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸಿತು. ಹಳದಿ ಶಾಸ್ತ್ರದ ವೇಳೆ ಕುಟುಂಬದ ಸದಸ್ಯರ ಜೊತೆಗಿನ ಭಾವನಾತ್ಮಕ ಕ್ಷಣಗಳು ಎಲ್ಲರ ಮನಸೂರೆಗೊಂಡವು. ಸಂಪ್ರದಾಯಬದ್ಧ ವಸ್ತ್ರಧಾರಣೆ, ಸಂಭ್ರಮದ ವಾತಾವರಣ ಮತ್ತು ಆತ್ಮೀಯರು ಕಾರ್ಯಕ್ರಮಕ್ಕೆ ಮೆರುಗು ತಂದರು.

ಚಿತ್ರರಂಗದ ಗಣ್ಯರು ಹಾಗೂ ಆಪ್ತರು ಭಾಗವಹಿಸಲಿದ್ದಾರೆ
ಇನ್ನು ಸಾಯಿ ಸಂಧ್ಯಾ ಅವರೊಂದಿಗೆ ಸಪ್ತಪದಿ ತುಳಿಯಲಿರುವ ಉಗ್ರಂ ಮಂಜು ಮದುವೆ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಧರ್ಮಸ್ಥಳದ ಪವಿತ್ರ ನೆಲದಲ್ಲಿ ನಡೆಯಲಿರುವ ಈ ವಿವಾಹಕ್ಕೆ ಚಿತ್ರರಂಗದ ಗಣ್ಯರು ಹಾಗೂ ಆಪ್ತರು ಭಾಗವಹಿಸಲಿದ್ದಾರೆ.

ಅರಿಶಿಣ ಶಾಸ್ತ್ರದ ಪೊಟೋಗಳು ವೈರಲ್
ಇನ್ನು Ugram Manju ಅವರ ಅರಿಶಿಣ ಶಾಸ್ತ್ರದ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಂಜು–ಸಾಯಿ ಸಂಧ್ಯಾ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
ಇದನ್ನು ನೋಡಿ : ಭದ್ರಾವತಿ: ಹಣಕ್ಕಾಗಿ ದೊಡ್ಡಪ್ಪ-ದೊಡ್ಡಮ್ಮನ ಹತ್ಯೆಗೈದ ವೈದ್ಯ ಅರೆಸ್ಟ್: ಖಾಕಿಗೆ ಸುಳಿವು ಕೊಟ್ಟದ್ದೇ ಈ ಸಾಕ್ಷ್ಯಗಳು




