Bengaluru : ತಪಾಸಣೆ ನೆಪದಲ್ಲಿ ವಿದೇಶಿ ಮಹಿಳೆಯ ಖಾಸಗಿ ಅಂಗ ಸ್ಪರ್ಶಿಸಿ ತಬ್ಬಿಕೊಂಡ ವಿಮಾನ ನಿಲ್ದಾಣ ಸಿಬ್ಬಂದಿಯ ಬಂಧನ.

Bengaluru : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಓರ್ವ ವಿಮಾನ ನಿಲ್ದಾಣ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಅಫಾನ್ ಅಹ್ಮದ್ ಎಂದು ಗುರುತಿಸಲಾಗಿದೆ.
ವಿದೇಶಿ ಮಹಿಳೆಗೆ ಕಿರುಕುಳ
ಅಫಾನ್ ಅಹ್ಮದ್ ವಿಮಾನ ನಿಲ್ದಾಣದ ಸಿಬ್ಬಂದಿಯಾಗಿದ್ದು, ಭದ್ರತಾ ಪರಿಶೀಲನೆ ಹೆಸರಿನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. KIAB ಯಿಂದ ಕೊರಿಯಾ ದೇಶಕ್ಕೆ ಪ್ರಯಾಣಿಸಲು ವಿದೇಶಿ ಮಹಿಳೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.
ಇದನ್ನು ಓದಿ : ಇಂದು ಸಿಎಂ ಸಿದ್ದರಾಮಯ್ಯಗೆ ಬಿಗ್ ಡೇ

ಮಹಿಳೆಯ ಖಾಸಗಿ ಅಂಗಗಳನ್ನ ಸ್ಪರ್ಶಿಸಿದ ಕಾಮುಕ
ಮಹಿಳೆಯ ಟಿಕೆಟ್ ಚೆಕ್ ಮಾಡಿದಾಗ ಬ್ಯಾಗ್ನಿಂದ ಬೀಪ್ ಸೌಂಡ್ ಬರ್ತಿದೆ. ಪ್ರತ್ಯೇಕವಾಗಿ ಚೆಕ್ ಮಾಡಬೇಕು ಎಂದಿದ್ದಾನೆ. ಚೆಕಿಂಗ್ ಕೌಂಟರ್ಗೆ ಹೋದರೆ ವಿಮಾನ ಲೇಟ್ ಆಗುತ್ತದೆ ಎಂದು ಪುರುಷರ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದಾನೆ.
ಈ ವೇಳೆ ಕೆಲ ಕಾಲ ಚೆಕಿಂಗ್ ನೆಪದಲ್ಲಿ ಮಹಿಳೆಯ ಖಾಸಗಿ ಅಂಗಗಳನ್ನ ಸ್ವರ್ಶಿಸಿ ಹಿಂದಿನಿಂದ ಮಹಿಳೆಯನ್ನ ತಬ್ಬಿಕೊಂಡಿ ದ್ದಾನೆ. ಕೆಲ ಕಾಲ ಮಹಿಳೆಯ ಅಂಗಾಂಗಗಳನ್ನ ಸ್ವರ್ಶಿಸಿ ತಬ್ಬಿಕೊಳ್ಳುತ್ತಿದ್ದಂತೆ ಮಹಿಳೆ ಆರೋಪಿಸಿದ್ದಾಳೆ. ಈ ವೇಳೆ ಒಕೆ ಥ್ಯಾಂ ಕ್ಯೂ ಎಂದು ಹೇಳಿ ಶೌಚಾಲಯದಿಂದ ಹೊರಗಡೆ ಹೋಗಿದ್ದ.

ಭದ್ರತಾ ಪಡೆಗೆ ದೂರು ನೀಡಿದ ಮಹಿಳೆ
ಸಿಬ್ಬಂದಿಯ ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯಿಂದ ಬೆಚ್ಚಿಬಿದ್ದ ಮಹಿಳೆ, ತಕ್ಷಣವೇ ಏರ್ಪೋರ್ಟ್ ಭದ್ರತಾ ಪಡೆಗೆ ದೂರು ನೀಡಿದ್ದಾಳೆ. ಮಹಿಳೆಯ ದೂರಿನ ಆಧಾರದಲ್ಲಿ ಏರ್ಪೋರ್ಟ್ ಭದ್ರತಾ ಸಿಬ್ಬಂದಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಕರಣ ದಾಖಲು
ವಿದೇಶಿ ಮಹಿಳೆಯ ದೂರು ಆಧರಿಸಿ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನು ನೋಡಿ : ರಾಜ್ಯದ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ `ದೂರವಾಣಿ ಕರೆ’ ಸ್ವೀಕರಿಸುವುದು ಕಡ್ಡಾಯ : ಸರ್ಕಾರ ಆದೇಶ




