Ugram Manju ಕೆಲ ತಿಂಗಳುಗಳ ಹಿಂದೆ ಸಾಯಿಸಂಧ್ಯಾ ಜೊತೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಉಗ್ರಂ ಮಂಜು, ಇದೀಗ ಸರಳ ಹಾಗೂ ಸಾಂಪ್ರದಾಯಿಕ ಮದುವೆಗೆ ಸಿದ್ಧರಾಗಿದ್ದಾರೆ.

ಬಿಗ್ಬಾಸ್ ಮಾಜಿ ಸ್ಪರ್ಧಿ ಹಾಗೂ ನಟ ಉಗ್ರಂ ಮಂಜು (Ugram Manju) ಅವರ ಮದುವೆ ದಿನಾಂಕ ಫಿಕ್ಸ್ ಆಗಿದೆ. ಕೆಲ ತಿಂಗಳುಗಳ ಹಿಂದೆ ಸಾಯಿಸಂಧ್ಯಾ ಜೊತೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಉಗ್ರಂ ಮಂಜು, ಇದೀಗ ಸರಳ ಹಾಗೂ ಸಾಂಪ್ರದಾಯಿಕ ಮದುವೆಗೆ ಸಿದ್ಧರಾಗಿದ್ದಾರೆ.
ಜನವರಿ 23ರಂದು ದೇವಸ್ಥಾನದಲ್ಲಿ ವಿವಾಹ
ಉಗ್ರಂ ಮಂಜು ಮತ್ತು ಸಾಯಿಸಂಧ್ಯಾ ಅವರು ಬರುವ ಜನವರಿ 23ರಂದು ಹೊಸೂರಿನ ತಿಮ್ಮರಾಯಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಲಿದ್ದಾರೆ. ಈ ದೇವಸ್ಥಾನ ಉಗ್ರಂ ಮಂಜು ಅವರ ಮನೆ ದೇವರ ದೇವಸ್ಥಾನವಾಗಿದ್ದು, ಇಲ್ಲಿ ಮದುವೆ ಮಾಡುವಂತೆ ಗುರೂಜಿಯವರು ಸೂಚಿಸಿದ್ದರಂತೆ.
ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ
ಮದುವೆ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವೇ ಆಪ್ತರು ಮಾತ್ರ ಭಾಗವಹಿಸಲಿದ್ದಾರೆ. ಯಾವುದೇ ಆಡಂಬರ, ಭರ್ಜರಿ ಕಾರ್ಯಕ್ರಮಗಳಿಲ್ಲದೆ ದೇವರ ಆಶೀರ್ವಾದದೊಂದಿಗೆ ವಿವಾಹ ನೆರವೇರಿಸುವುದು ದಂಪತಿಯ ನಿರ್ಧಾರವಾಗಿದೆ.
ಇದನ್ನು ಓದಿ : ಪಾರ್ಸೆಲ್ ಒತ್ತು ಸಾಗುತ್ತಿದ್ದ ಬೃಹತ್ ಕಂಟೇನರ್ ಪಲ್ಟಿ
ಸರಳ ಮದುವೆಗೆ ಕಾರಣ ಏನು?
ಸರಳ ಮದುವೆಯ ಬಗ್ಗೆ ಮಾತನಾಡಿದ ಉಗ್ರಂ ಮಂಜು,
“ನಮ್ಮ ಆಸೆಯಂತೆ ದೇವರ ಆಶೀರ್ವಾದ ಪಡೆದು, ಕುಟುಂಬಸ್ಥರು ಮತ್ತು ಆಪ್ತರ ನಡುವೆ ಮದುವೆಯಾಗುತ್ತಿದ್ದೇವೆ. ನನಗೂ ನನ್ನ ಭಾವಿ ಪತ್ನಿಗೂ ಆಡಂಬರ ಇಷ್ಟವಿಲ್ಲ. ಮದುವೆ ಹೆಸರಿನಲ್ಲಿ ಅತಿಯಾದ ಖರ್ಚು, ಸಾಲ, ಟೆನ್ಷನ್ಗಳೆಲ್ಲ ಬೇಡ ಅನ್ನೋದು ನಮ್ಮ ಯೋಚನೆ,” ಎಂದು ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ
ಸೆಲೆಬ್ರಿಟಿಯಾಗಿದ್ದರೂ ಸರಳತೆಗೆ ಒತ್ತು ನೀಡಿರುವ ಉಗ್ರಂ ಮಂಜು ಅವರ ನಡೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. “ಮಾದರಿ ಕೆಲಸ”, “ಸಿಂಪಲ್ ಅಂಡ್ ಕ್ಲಾಸಿ” ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನು ನೋಡಿ : ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ – ಎಸ್ ಪಿ ಕೆ.ವಿ.ಅಶೋಕ್ ಏನಂದ್ರು ಗೊತ್ತಾ..?




