ಸಕಲೇಶಪುರದ ರಾಷ್ಟ್ರೀಯ ಹೆದ್ದಾರಿ 75 (NH75) ರ ಮಠಸಾಗರ ಸಮೀಪದಲ್ಲಿ ಕಂಟೇನರ್ Accident ಸಂಭವಿಸಿದೆ.

ಹಾಸನ ಜಿಲ್ಲೆ ಸಕಲೇಶಪುರದ ರಾಷ್ಟ್ರೀಯ ಹೆದ್ದಾರಿ 75 (NH75) ರ ಮಠಸಾಗರ ಸಮೀಪದಲ್ಲಿ ಮಂಗಳೂರಿಗೆ ಪಾರ್ಸೆಲ್ ಹೊತ್ತು ಸಾಗುತ್ತಿದ್ದ ಬೃಹತ್ ಕಂಟೇನರ್ ವಾಹನವೊಂದು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ. ಅದೃಷ್ಟವಶಾತ್, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನು ಓದಿ : ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ವೈಭವ್ ಸೂರ್ಯವಂಶಿ
ಚಾಲಕನ ನಿಯಂತ್ರಣ ತಪ್ಪಿ Accident
ಮಂಗಳವಾರ ತಡರಾತ್ರಿ ಸುಮಾರು 3:00 ಗಂಟೆಯ ಸುಮಾರಿಗೆ ಈ Accident ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕಂಟೇನರ್ (NH75 ರಸ್ತೆ) ಮಠಸಾಗರ ಹತ್ತಿರ ತೀಕ್ಷ್ಣವಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ.
ಈ ವೇಳೆ ಕಂಟೈನರ್ ಹೆದ್ದಾರಿಯ ಬದಿಗೆ ಉರುಳಿ ಬಿದ್ದಿದೆ, ಅಪಘಾತದಲ್ಲಿ ಕಂಟೇನರ್ನ ಮುಂಭಾಗವು ಸಂಪೂರ್ಣವಾಗಿ ಜಖಂಗೊಂಡಿದೆ. ವಾಹನದಲ್ಲಿನ ಪಾರ್ಸೆಲ್ ಸರಕುಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಚಾಲಕನಿಗೆ ಸಣ್ಣಪುಟ್ಟ ಗಾಯ
ಅಪಘಾತದ ತೀವ್ರತೆ ಹೆಚ್ಚಿದ್ದರೂ, ಕಂಟೇನರ್ನ ಚಾಲಕ ತಕ್ಷಣವೇ ವಾಹನದಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾನೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಚಾರಕ್ಕೆ ಅಡಚಣೆ
ಘಟನೆಯಿಂದಾಗಿ ಹೆದ್ದಾರಿಯಲ್ಲಿ ಸ್ವಲ್ಪ ಸಮಯದವರೆಗೆ ಸಂಚಾರಕ್ಕೆ ಅಡಚಣೆಯಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪಲ್ಟಿಯಾದ ವಾಹನವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಡೆಸಿದರು. ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ, ಬ್ರೇಕ್ ಫೇಲ್ ಕಾರಣ ಎಂದು ಚಾಲಕ ಹೇಳಿದ್ದಾನೆ.

ಇದನ್ನು ನೋಡಿ : ಡಿಸಿ ಕಚೇರಿಗೆ ಬಾಂಬ್ ಈ ಮೇಲ್ – ಕಚೇರಿಯ ಸುತ್ತ ಸರ್ಪಗಾವಲು




