ಬರೋಬ್ಬರಿ 226 ರನ್… ಮತ್ತೆ ಅಬ್ಬರಿಸಿದ Vaibhav Suryavanshi.

ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರ ಮುಂದುವರೆದಿದೆ. ಯುಎಇ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ್ದ ವೈಭವ್, ಇದೀಗ ಮಲೇಷ್ಯಾ ವಿರುದ್ಧ ಸ್ಫೋಟಕ ಅರ್ಧಶತಕ ಬಾರಿಸುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.
ಉತ್ತಮ ಆರಂಭ
ದುಬೈನ ಸೆವೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮಲೇಷ್ಯಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ Vaibhav Suryavanshi ಆಕ್ರಮಣಕಾರಿ ಆರಂಭ ನೀಡಿದರು.

25 ಎಸೆತಗಳಲ್ಲಿ ಅರ್ಧಶತಕ
ಮೊದಲ ಓವರ್ನಿಲ್ಲೇ ವೈಭವ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರ ಈ ಇನ್ನಿಂಗ್ಸ್ನಲ್ಲಿ 3 ಭರ್ಜರಿ ಸಿಕ್ಸ್ಗಳು ಹಾಗೂ 5 ಫೋರ್ಗಳು ಸೇರಿದ್ದವು. ಆದರೆ ಅರ್ಧಶತಕದ ಬೆನ್ನಲ್ಲೇ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿ ಔಟಾದರು.
ಇದನ್ನು ಓದಿ : ಉಡುಪಿಯಲ್ಲಿ ನಡೆಯಿತು ಆನ್ಲೈನ್ ಮೂಲಕ ಎಂಗೇಜ್ಮೆಂಟ್..!

ಅಬ್ಬರದ ಬ್ಯಾಟಿಂಗ್
ಇದಕ್ಕೂ ಮುನ್ನ ಯುಎಇ ವಿರುದ್ಧದ ಪಂದ್ಯದಲ್ಲಿ ವೈಭವ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. 95 ಎಸೆತಗಳನ್ನು ಎದುರಿಸಿದ್ದ ಅವರು 14 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 171 ರನ್ ಬಾರಿಸಿ, ಅಂಡರ್-19 ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು.

ವೈಭವ್ ಮತ್ತೆ ಫಾರ್ಮ್ಗೆ ಮರಳಿದ ವೈಭವ್
ಆದರೆ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕೇವಲ 5 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಇದೀಗ ಮಲೇಷ್ಯಾ ವಿರುದ್ಧ ಸ್ಫೋಟಕ ಹಾಫ್ ಸೆಂಚುರಿ ಸಿಡಿಸುವ ಮೂಲಕ ವೈಭವ್ ಮತ್ತೆ ಫಾರ್ಮ್ಗೆ ಮರಳಿದ್ದಾರೆ. ಈ ಮೂಲಕ ಮೂರು ಇನಿಂಗ್ಸ್ಗಳಿಂದ ಒಟ್ಟು 226 ರನ್ಗಳನ್ನು ಕಲೆಹಾಕಿದ್ದಾರೆ.
ಇದನ್ನು ನೋಡಿ : AIRPORT ನಲ್ಲಿ YELLOW BOARD ಗಾಡಿಗಳ ನಿರ್ಬಂಧ ಪ್ರತಿಭಟನೆಯ ವೇಳೆ ಲಾಠಿ ಚಾರ್ಜ್




