Chikkaballapura : ವುಮೆನ್ಸ್ ಡೇ ದಿನವೇ ಮಹಿಳೆ ಅನುಮಾನಾಸ್ಪದ ಸಾವು.

ಮದುವೆ ಅನ್ನೋದು ಹೆಣ್ಣು ಮಕ್ಕಳ ಬಾಳಿಗೆ ತುಂಬಾ ಅಮೂಲ್ಯವಾದದ್ದು, ಆದ್ರೆ ಇತ್ತೀಚೆಗೆ ಕೆಲ ಹೆಣ್ಣು ಮಕ್ಕಳು ಪ್ರೀತಿ ಪ್ರೇಮ ಅನ್ನೋ ಬಲೆಗೆ ಸಿಲುಕಿ ಹೆತ್ತ ತಂದೆ ತಾಯಿಯನ್ನೇ ಬಿಟ್ಟು ಪ್ರೀತಿಸಿದವನ ಜೊತೆ ಹೋಗ್ತಾರೆ.
ಗಂಡನಿಂದಲೇ ಹೆಂಡತಿ ಹತ್ಯೆ?
ಇತ್ತ ಪ್ರೀತಿಸಿ ಮನೆಯವರನ್ನ ಬಿಟ್ಟು ಹೋಗಿ ಪ್ರೀತಿಸಿದವನ ಜೊತೆ ಅಂತರ್ಜಾತಿ ವಿವಾಹವಾಗಿದ್ದ ಮಹಿಳೆಯೊಬ್ಬಳು ಮಹಿಳಾ ದಿನಾಚರಣೆಯಂದೇ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ Chikkaballapura ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಆರ್. ಚೊಕ್ಕನಹಳ್ಳಿ ಗ್ರಾಮದಲ್ಲಿ ವರಲಕ್ಷ್ಮಿ ಎಂಬಾಕೆ ಮೃತಪಟ್ಟಿದ್ದು, ಮೃತಳ ಕುಟುಂಬಸ್ಥರು ಪತಿ ಹಾಗೂ ಪತಿ ಕುಟುಂಬಸ್ಥರ ಮೇಲೆ ಕೊಲೆ ಆರೋಪ ಮಾಡುತ್ತಿದ್ದಾರೆ.
ಪ್ರೀತಿಸಿ ಅಂತರ್ಜಾತಿ ವಿವಾಹ
ಚಿಕ್ಕಾಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದ ವರಲಕ್ಷ್ಮಿ ಮೂರು ವರ್ಷಗಳ ಹಿಂದೆಯಷ್ಟೇ ಚೊಕ್ಕನಹಳ್ಳಿ ಗ್ರಾಮದ ಗಂಗರಾಜುನನ್ನು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದಳು. ದಂಪತಿಗೆ ಒಂದೂವರೆ ವರ್ಷದ ಮುದ್ದಾದ ಮಗು ಸಹ ಇದೆ. ಆದ್ರೆ ಮದುವೆಯಾದ ಮೇಲೆ ಪದೇ ಪದೇ ವರದಕ್ಷಿಣೆ ತರುವಂತೆ ಪತಿ ಗಂಗರಾಜು ಹಾಗೂ ಅವರ ಕುಟುಂಬಸ್ಥರು ದಿನನಿತ್ಯ ಕಿರುಕುಳ ನೀಡುತ್ತಿದ್ರು.

READ THIS : Mandya|ಒಂದೇ ಮನೆಯಲ್ಲಿ ದಂಪತಿ Suicide – ಆಗಿದ್ದೇನು?
ಮೃತಳ ಪೋಷಕ ಆರೋಪವೇನು?
ಆದ್ರೆ ನಿನ್ನೆ ರಾತ್ರಿ ಗಂಡನ ಮನೆಯಲ್ಲಿ ವರಲಕ್ಷ್ಮಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮೃತದೇಹದ ಮೇಲೆ ಗಾಯದ ಗುರುತುಗಳು ಇವೆ. ಗಂಡನ ಮನೆಯವರೇ ನಮ್ಮ ಮಗಳನ್ನ ಕೊಂದು ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದಾಳೆ ಅಂತಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ಪೊಲೀಸರು ಹಣ ಪಡೆದು ಪ್ರಕರಣವನ್ನ ತಿರುಚಲು ಯತ್ಮ
ಇನ್ನು ಮೃತದೇಹವನ್ನ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದ್ದು, ಮೃತಳ ಸಂಬಂಧಿಕರು ಪೊಲೀಸರ ವಿರುದ್ದವೂ ಆಕ್ರೋಶ ಹೊರಹಾಕಿದ್ದಾರೆ. ಬೆಳಿಗ್ಗೆಯಿಂದನೂ ಪೊಲೀಸ್ ಠಾಣೆಯಲ್ಲಿ ನಮ್ಮನ್ನ ಸತಾಯಿಸಿದ್ದು, ಶವವನ್ನ ಕೂಡ ತೋರಿಸಲಿಲ್ಲ ಎಂದು ಆರೋಪಿಸಿದ್ದಾರೆ. ಅಲ್ದೇ ಪೊಲೀಸರು ಹಣ ಪಡೆದು ಪ್ರಕರಣವನ್ನ ತಿರುಚಲು ಯತ್ನಿಸಿದ್ರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪತಿ ಹಾಗೂ ಪತಿ ಕುಟುಂಬಸ್ಥರನ್ನ ತಕ್ಷಣ ಬಂಧಿಸಬೇಕು
ಇನ್ನು ನ್ಯಾಯ ಸಿಗುವವರೆಗೆ ಶವವನ್ನ ತೆಗೆದುಕೊಂಡು ಹೋಗುವುದಿಲ್ಲ ಎಂದು ಮೃತಳ ಕುಟುಂಬಸ್ಥರು ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದು, ಪತಿ ಹಾಗೂ ಪತಿ ಕುಟುಂಬಸ್ಥರನ್ನ ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದ್ರು. ಸದ್ಯ ಈ ಸಂಬಂಧ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
MUST WATCH : ತುಮಕೂರಿನಲ್ಲಿ ಮಹಿಳಾ ಅಧಿಕಾರಿಗಳದ್ದೇ ಖದರ್- ಇದು WOMENS DAY SPECIAL




