Traffic ಫೈನ್ ರಿಯಾಯಿತಿಗೆ ಗುಡ್ ರೆಸ್ಪಾನ್ಸ್: ಕೇವಲ 14 ದಿನದಲ್ಲಿ 18 ಕೋಟಿಗೂ ಅಧಿಕ ದಂಡ ಸಂಗ್ರಹ

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡದ ಮೇಲೆ ಶೇ.50ರಷ್ಟು ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಜೂನ್ 21ರಿಂದ ಜುಲೈ 4ರವರೆಗೆ ಕೇವಲ 14 ದಿನಗಳ ಅವಧಿಯಲ್ಲಿ ₹18,15,42,200 ದಂಡದ ಹಣ ಸಂಗ್ರಹವಾಗಿದ್ದು, 6,06,032 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಶೇ 50 ರಿಯಾಯಿತಿ ಸಖತ್ ರೆಸ್ಪಾನ್ಸ್
ಬೆಂಗಳೂರು ಸಂಚಾರ ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರವು ಸಂಚಾರಿ ಇ-ಚಲನ್ನಲ್ಲಿ ದಾಖಲಾಗಿದ್ದ ಹಾಗೂ ದೀರ್ಘಕಾಲದಿಂದ ಬಾಕಿ ಉಳಿದಿದ್ದ ದಂಡವನ್ನು ಪಾವತಿಸಲು ಶೇ.50ರಷ್ಟು ರಿಯಾಯಿತಿ ನೀಡುವ ಆದೇಶ ಹೊರಡಿಸಿತ್ತು. ಈ ಯೋಜನೆ ಜೂನ್ 21ರಿಂದ ಜಾರಿಗೆ ಬಂದಿದೆ.
ಇದನ್ನು ಓದಿ : ವಾಹನ ಸವಾರರಿಗೆ ಗುಡ್ ನ್ಯೂಸ್ – ಟ್ರಾಫಿಕ್ ದಂಡ ಕಟ್ಟಲು ಡಿಸ್ಕೌಂಟ್
6,06,032 ಪ್ರಕರಣಗಳು ಇತ್ಯರ್ಥ
ಈ ಅವಧಿಯಲ್ಲಿ ಆನ್ಲೈನ್ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವಾಹನ ಸವಾರರು ಬಾಕಿ ದಂಡ ಪಾವತಿಸಿದ್ದು, ಒಟ್ಟು 6,06,032 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಇತ್ಯರ್ಥಗೊಂಡಿವೆ.
ಇದರಿಂದ ಸರ್ಕಾರದ ಖಜಾನೆಗೆ ₹18.15 ಕೋಟಿಗೂ ಅಧಿಕ ಆದಾಯ ಬಂದಿದೆ.
ಬಾಕಿ ಇರುವ ಸಂಚಾರ ದಂಡವನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ಪಾವತಿಸಲು ಜುಲೈ 10 ಕೊನೆಯ ದಿನಾಂಕವಾಗಿದೆ. ನಂತರ ಈ ರಿಯಾಯಿತಿ ಅನ್ವಯವಾಗುವುದಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ಸಿಬ್ಬಂದಿ ನಿಯೋಜನೆ
ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ದಂಡ ಪಾವತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಗರದ ಪ್ರಮುಖ ಜಂಕ್ಷನ್ಗಳಲ್ಲಿ ಪಿಎಸ್ಐಗಳ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದರೊಂದಿಗೆ, ವಾಹನ ಸವಾರರಲ್ಲಿ ಸಂಚಾರ ನಿಯಮಗಳ ಪಾಲನೆ ಕುರಿತು ಜಾಗೃತಿ ಮೂಡಿಸುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ.
ವಾಹನ ಸವಾರರು ಈ ರಿಯಾಯಿತಿ ದರದಲ್ಲಿ ಬಾಕಿ ದಂಡ ಪಾವತಿಸಲು ಜುಲೈ 10ರವರೆಗೆ ಮಾತ್ರ ಅವಕಾಶವಿದೆ.
ಇದನ್ನು ನೋಡಿ : ಕಂದಾಯ ನೌಕರರ ಪ್ರತಿಭಟನಾ ಸ್ಥಳಕ್ಕೆ DC VISIT – ಸಂಧಾನ ಸಫಲ ಆಗುತ್ತಾ? ಇಲ್ವಾ?





