ವಾಹನ ಸವಾರರಿಗೆ ಗುಡ್ ನ್ಯೂಸ್ – Traffic ದಂಡ ಕಟ್ಟಲು ಶೇ.50 ರಷ್ಟು ಡಿಸ್ಕೌಂಟ್, ಇಲ್ಲಿದೆ ಮಾಹಿತಿ

ಬೆಂಗಳೂರಿನ ವಾಹನ ಸವಾರರಿಗೆ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಹಳೆಯ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡವನ್ನು ಪಾವತಿಸಲು ಮತ್ತೊಮ್ಮೆ ಶೇಕಡಾ 50 ರಷ್ಟು ರಿಯಾಯಿತಿ ಘೋಷಿಸಲಾಗಿದೆ.
ಬಾಕಿ ದಂಡದ ಮೊತ್ತದಲ್ಲಿ 50% ರಿಯಾಯಿತಿ
ಜೂನ್ 21ರಿಂದ ಜುಲೈ 10, 2026ರವರೆಗೆ ಈ ವಿಶೇಷ ರಿಯಾಯಿತಿ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ವಾಹನ ಸವಾರರು ತಮ್ಮ ಬಾಕಿ ಇರುವ Traffic ದಂಡವನ್ನು ಅರ್ಧ ಮೊತ್ತಪಾವತಿಸಿ ನಿರಾಳರಾಗಬಹುದು.
ದಂಡ ಸಂಗ್ರಹ ಹೆಚ್ಚಿಸಲು ಸರ್ಕಾರದ ಕ್ರಮ
ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹಾಗೂ ಬಾಕಿ ಉಳಿದಿರುವ ದಂಡದ ಮೊತ್ತವನ್ನು ವಸೂಲಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾರಿಗೆ ಅನ್ವಯ?
- ಬಾಕಿ ಟ್ರಾಫಿಕ್ ಫೈನ್ ಇರುವ ಎಲ್ಲಾ ವಾಹನ ಸವಾರರಿಗೆ
- ಹೊಸ ಪ್ರಕರಣಗಳಿಗೆ ಅನ್ವಯವಿಲ್ಲ
- ನ್ಯಾಯಾಲಯದ ದಂಡಗಳಿಗೆ ಅನ್ವಯವಿಲ್ಲ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ಎಲ್ಲಾ ವಾಹನ ಸವಾರರು ಈ ಸೌಲಭ್ಯ ಪಡೆಯಬಹುದು.
ಆದರೆ ಹೊಸದಾಗಿ ವಿಧಿಸಲಾದ ದಂಡಗಳು ಹಾಗೂ ನ್ಯಾಯಾಲಯದ ಆದೇಶದಡಿ ಪಾವತಿಸಬೇಕಾದ ದಂಡಗಳಿಗೆ ಈ ರಿಯಾಯಿತಿ ಅನ್ವಯವಾಗುವುದಿಲ್ಲ.
ಇದನ್ನು ಓದಿ : ವಾಹನ ಸವಾರರಿಗೆ ಗುಡ್ ನ್ಯೂಸ್ – FASTag ನಿಯಮ ಸಡಿಲಿಕೆ
ದಂಡ ಪಾವತಿಸಲು ಅವಕಾಶವಿರುವ ಸ್ಥಳಗಳು
ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ವಿವಿಧ ಭಾಗಗಳಲ್ಲಿ 12 ವಿಶೇಷ ಕೌಂಟರ್ಗಳನ್ನು ತೆರೆಯಲಾಗಿದೆ.
ಹೆಣ್ಣೂರು, ದೇವಸಂದ್ರ, ಕುಂದಲಹಳ್ಳಿ, ಮೈಸೂರು ಬ್ಯಾಂಕ್, ಹೆಬ್ಬಾಳ, ಗೊಟ್ಟಿಗೆರೆ ಸೇರಿದಂತೆ ಪ್ರಮುಖ ಜಂಕ್ಷನ್ಗಳಲ್ಲಿ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಆನ್ಲೈನ್ ಮೂಲಕವೂ ಪಾವತಿ
ಕೌಂಟರ್ಗಳಿಗೆ ತೆರಳಲು ಸಾಧ್ಯವಾಗದ ವಾಹನ ಸವಾರರು KSP ಆ್ಯಪ್, BTP ASTRAM ಆ್ಯಪ್, ಬೆಂಗಳೂರು ಒನ್ ಕೇಂದ್ರಗಳು ಅಥವಾ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳ ಮೂಲಕವೂ ಸುಲಭವಾಗಿ ದಂಡ ಪಾವತಿಸಬಹುದಾಗಿದೆ.
ಅಗತ್ಯ ದಾಖಲೆಗಳು
ದಂಡ ಪಾವತಿಸುವ ವೇಳೆ ವಾಹನದ ನೋಂದಣಿ ಸಂಖ್ಯೆ, ಚಾಲನಾ ಪರವಾನಗಿ ಹಾಗೂ ಗುರುತಿನ ಚೀಟಿ ಹೊಂದಿರಬೇಕು. ಆನ್ಲೈನ್ನಲ್ಲಿ ವಾಹನ ಸಂಖ್ಯೆಯನ್ನು ನಮೂದಿಸಿದರೆ ಬಾಕಿ ದಂಡದ ವಿವರಗಳು ಲಭ್ಯವಾಗುತ್ತವೆ.
ಮುನ್ನೆಚ್ಚರಿಕೆ
ನಕಲಿ ವೆಬ್ಸೈಟ್ಗಳು ಹಾಗೂ ವಂಚಕರಿಂದ ಎಚ್ಚರಿಕೆಯಿಂದ ಇರಬೇಕು. ಅಧಿಕೃತ KSP ಮತ್ತು BTP ASTRAM ಆ್ಯಪ್ಗಳ ಮೂಲಕವೇ ಪಾವತಿ ಮಾಡಬೇಕು ಎಂದು ಬೆಂಗಳೂರು ಸಂಚಾರ ಪೊಲೀಸರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ಇದನ್ನು ನೋಡಿ : ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಸಿದ್ದರಾಮಯ್ಯ ಹೀಗ್ಯಾಕಂದ್ರು ಗೊತ್ತಾ




