Tirupati ಯಲ್ಲಿ ವಿಶೇಷ ದರ್ಶನಕ್ಕೆ ಟಿಟಿಡಿ ಅವಕಾಶ

Tirupati ಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಸಾಮಾನ್ಯವಾಗಿ 12 ರಿಂದ 24 ಗಂಟೆಗಳವರೆಗೆ ಕಾಯಬೇಕಾಗುತ್ತದೆ. ಆದರೆ ಹಿರಿಯ ನಾಗರಿಕರು ಹಾಗೂ ಒಂದು ವರ್ಷದೊಳಗಿನ ಮಕ್ಕಳಿರುವ ಪೋಷಕರಿಗೆ ಟಿಟಿಡಿ ವಿಶೇಷ ದರ್ಶನದ ವ್ಯವಸ್ಥೆ ಕಲ್ಪಿಸಿದೆ.
30 ನಿಮಿಷದಲ್ಲೇ ಶ್ರೀವಾರಿ ದರ್ಶನಕ್ಕೆ ಟಿಟಿಡಿ ಅವಕಾಶ
65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿಶೇಷ ಮಾರ್ಗದ ಮೂಲಕ ಕೇವಲ 30 ನಿಮಿಷದಿಂದ ಒಂದು ಗಂಟೆಯೊಳಗೆ ಶ್ರೀವಾರಿ ದರ್ಶನ ಪಡೆಯಬಹುದು. ಇದಕ್ಕಾಗಿ ವಯಸ್ಸಿನ ಪುರಾವೆ ಮತ್ತು ಫೋಟೋ ಗುರುತಿನ ಚೀಟಿಯನ್ನು ಎಸ್-1 ಕೌಂಟರ್ನಲ್ಲಿ ತೋರಿಸಬೇಕು. ಮೆಟ್ಟಿಲುಗಳಿಲ್ಲದ ವಿಶೇಷ ಮಾರ್ಗ ಹಾಗೂ ಬ್ಯಾಟರಿ ಕಾರ್ ಸೌಲಭ್ಯವನ್ನೂ ಟಿಟಿಡಿ ಒದಗಿಸಿದೆ.

ದರ್ಶನದ ಬಳಿಕ ಉಚಿತ ಅನ್ನ, ಹಾಲು ವಿತರಣೆ
ದರ್ಶನದ ಬಳಿಕ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಂಬಾರ್ ಅನ್ನ, ಮೊಸರನ್ನ ಹಾಗೂ ಹಾಲಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ವಿಶೇಷ ಸೌಲಭ್ಯದಿಂದ ಸಾವಿರಾರು ವೃದ್ಧ ಭಕ್ತರು ಸುಲಭವಾಗಿ ಶ್ರೀವಾರಿ ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ತಿರುಪತಿಗೆ ಹೋಗುವ ರಾಜ್ಯದ ಭಕ್ತರಿಗೆ ಗುಡ್ನ್ಯೂಸ್

ಒಂದು ವರ್ಷದೊಳಗಿನ ಮಕ್ಕಳ ಪೋಷಕರಿಗೆ ಉಚಿತ Tirupati ದರ್ಶನ
ಇನ್ನು ಒಂದು ವರ್ಷದೊಳಗಿನ ಮಕ್ಕಳೊಂದಿಗೆ ಬರುವ ಪೋಷಕರಿಗೂ ಟಿಟಿಡಿ ವಿಶೇಷ ‘ಶಿಶು ದರ್ಶನ’ ವ್ಯವಸ್ಥೆ ಕಲ್ಪಿಸಿದೆ. ಪ್ರತಿದಿನ ಮಧ್ಯಾಹ್ನ 12ರಿಂದ ಸಂಜೆ 6 ಗಂಟೆಯವರೆಗೆ ಸುಪಥಂ ಮಾರ್ಗದ ಮೂಲಕ ಉಚಿತವಾಗಿ ದರ್ಶನಕ್ಕೆ ಅವಕಾಶವಿದೆ. ಮಗುವಿನ ಜನನ ಪ್ರಮಾಣಪತ್ರ ಅಥವಾ ವಯಸ್ಸಿನ ದಾಖಲೆ ಹಾಗೂ ಪೋಷಕರ ಆಧಾರ್ ಕಾರ್ಡ್ ತೋರಿಸಿದರೆ ಸಾಕು, ಯಾವುದೇ ಟಿಕೆಟ್ ಅಗತ್ಯವಿಲ್ಲ.
ಒಟ್ಟಾರೆ, ಹಿರಿಯ ನಾಗರಿಕರು ಹಾಗೂ ಪುಟ್ಟ ಮಕ್ಕಳಿರುವ ಕುಟುಂಬಗಳು ಜನಸಂದಣಿಯ ನಡುವೆ ಪರದಾಡದೆ ಸುಲಭವಾಗಿ ಶ್ರೀವಾರಿ ದರ್ಶನ ಪಡೆಯಲು ಟಿಟಿಡಿ ಈ ವಿಶೇಷ ವ್ಯವಸ್ಥೆ ಮಾಡಿದೆ.

MUST WATCH : TIRUPATIಗೆ ಹೋಗುವವರಿಗೆ GOOD NEWS – ಮೊದಲ ಆರತಿ ಬೆಳಗುವ ಹಕ್ಕು ರಾಜ್ಯಕ್ಕೆ!




