
ಚಲಿಸುತ್ತಿದ್ದ ಸ್ಲೀಪರ್ ಬಸ್ನಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಚಾಲಕ, ಕಂಡಕ್ಟರ್ ಬಂಧನ
ಉತ್ತರ ಪ್ರದೇಶದಿಂದ ಸಂಬಂಧಿಕರ ಮನೆಗೆ ತೆರಳುತ್ತಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಸ್ಲೀಪರ್ ಬಸ್ನಲ್ಲಿ ಅತ್ಯಾಚಾರ ಎಸಗಿದ ಆರೋಪದ ಘಟನೆ ದೆಹಲಿ-ಎನ್ಸಿಆರ್ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಹಾಗೂ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.

ಆಗಿದ್ದೇನು..?
ವರದಿಗಳ ಪ್ರಕಾರ, ಉತ್ತರ ಪ್ರದೇಶದ ಮೈನ್ಪುರಿ ಮೂಲದ ವಿದ್ಯಾರ್ಥಿನಿ ಆಗಸ್ಟ್ 4ರಂದು ಕುಟುಂಬದವರೊಂದಿಗೆ ಮನಸ್ತಾಪಗೊಂಡ ಬಳಿಕ ನೋಯ್ಡಾದಲ್ಲಿರುವ ಸೋದರಸಂಬಂಧಿಯ ಮನೆಗೆ ತೆರಳುತ್ತಿದ್ದಳು. ಆದರೆ, ರಾತ್ರಿ ವೇಳೆ ಭಾರಿ ಮಳೆಯಾಗಿದ್ದರಿಂದ ಆಕೆ ತಪ್ಪಾಗಿ ನೋಯ್ಡಾದ ಪರಿ ಚೌಕ್ನಲ್ಲಿ ಇಳಿದಿದ್ದಳು ಎನ್ನಲಾಗಿದೆ.
ಅಪರಿಚಿತ ಪ್ರದೇಶದಲ್ಲಿ ಸಿಲುಕಿದ್ದ ಬಾಲಕಿ ಸಹಾಯಕ್ಕಾಗಿ ಆ ಮಾರ್ಗವಾಗಿ ಸಾಗುತ್ತಿದ್ದ ಸ್ಲೀಪರ್ ಬಸನ್ನು ನಿಲ್ಲಿಸಿದ್ದಾಳೆ. ಈ ವೇಳೆ ಬಸ್ನಲ್ಲಿದ್ದವರು ಸಹಾಯ ಮಾಡುವುದಾಗಿ ಹೇಳಿ ಆಕೆಯನ್ನು ಬಸ್ಗೆ ಹತ್ತಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
READ THIS : 70 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ Murder!

ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತನೆ
ಬಸ್ ಚಲಿಸಲು ಆರಂಭಿಸಿದ ಬಳಿಕ ನಿರ್ವಾಹಕ ಸಂದೀಪ್ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ನಂತರ ಚಾಲಕ ಕುಲದೀಪ್ ಹಾಗೂ ಸಂದೀಪ್ ಸೇರಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಘಟನೆಗೆ ವಿರೋಧ ವ್ಯಕ್ತಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಆರೋಪಿಗಳ ಬಂಧನ!
ಕೃತ್ಯ ಎಸಗಿದ ಬಳಿಕ ಬಾಲಕಿಯನ್ನು ದೆಹಲಿಯ ಕಾಶ್ಮೀರಿ ಗೇಟ್ ರಸ್ತೆ ಬಳಿ ಇಳಿಸಿ ಪರಾರಿಯಾಗಿದ್ದರು. ಘಟನೆಯ ನಂತರ ಭಯಭೀತಳಾದ ಬಾಲಕಿ ತಕ್ಷಣವೇ ಕಾಶ್ಮೀರಿ ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

MUST WATCH : ಮಾವಿನ ಮರದ ಶೆಡ್ನಲ್ಲಿದ್ದ ಸರಳ ಜೀವ ವೀರಣ್ಣ ನೆನೆದು ಭಾವುಕರಾದ ಪರಂ



