ಕಾಂಗ್ರೆಸ್ನಲ್ಲಿ ಡಿಕೆಶಿ ಬಿಗ್ ಸರ್ಜರಿ: ನಿಕೇತ್ ರಾಜ್, ಭಾವನಾ ರಾಮಣ್ಣ ಸೇರಿ ಹಲವು KPCC ಪದಾಧಿಕಾರಿಗಳು ಹುದ್ದೆಯಿಂದ ವಜಾ!

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಸಭೆಗೆ ಗೈರು ಹಾಜರಿ ಹಾಕಿದ ಕೆಪಿಸಿಸಿ ಪದಾಧಿಕಾರಿಗಳಿಗೆ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಗ್ ಶಾಕ್ ನೀಡಿದ್ದಾರೆ.
ಹಲವು KPCC ಪದಾಧಿಕಾರಿಗಳು ಹುದ್ದೆಯಿಂದ ವಜಾ!
ಕೆಪಿಸಿಸಿ ವಕ್ತಾರರಾದ ನಿಕೇತ್ ರಾಜ್ ಮೌರ್ಯ, ಭಾವನಾ ರಾಮಣ್ಣ, ಶಿವಮೂರ್ತಿ ನಾಯಕ್, ಎಂ.ಸಿ. ವೇಣುಗೋಪಾಲ್, ಷಣ್ಮುಖ ಶಿವಳ್ಳಿ ಹಾಗೂ ಸಿಆರ್ ಮನೋಹರ್ ಸೇರಿದಂತೆ ಮೂವರು ಉಪಾಧ್ಯಕ್ಷರು ಮತ್ತು 29 ಪ್ರಧಾನ ಕಾರ್ಯದರ್ಶಿಗಳನ್ನು ಪಕ್ಷದ ಹುದ್ದೆಗಳಿಂದ ತಕ್ಷಣದಿಂದಲೇ ಬಿಡುಗಡೆ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಓದಿ : ಇಂದು SRH vs RR ಎಲಿಮಿನೇಟರ್ ಪಂದ್ಯ – ಗೆದ್ರೆ ಫಿನಾಲೆಗೆ, ಸೋತ್ರೆ ಮನೆಗೆ
ಸಭೆಗೆ ಗೈರಾಗಿರುವ ನಾಯಕರಿಗೆ ಗೇಟ್ಪಾಸ್
ಪಕ್ಷದ ಸಭೆಗೆ ಗೈರಾಗಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಈ ಸೂಚನೆಯ ಬೆನ್ನಲ್ಲೇ ಡಿಕೆ ಶಿವಕುಮಾರ್ ಗೈರಾಗಿದ್ದ ನಾಯಕರಿಗೆ ಗೇಟ್ಪಾಸ್ ನೀಡಿದ್ದಾರೆ.
ಪಕ್ಷ ಸಂಘಟನೆ ಕುರಿತ ಪೂರ್ವಭಾವಿ ಸಭೆ
ಮೇ 24ರಂದು ಬೆಂಗಳೂರಿನ ಹೊರವಲಯದಲ್ಲಿ ನಡೆದ ಸಭೆಯಲ್ಲಿ SIR ಪ್ರಕ್ರಿಯೆ, ಜಿಬಿಎ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಪಕ್ಷ ಸಂಘಟನೆ ಕುರಿತ ಪೂರ್ವಭಾವಿ ಚರ್ಚೆ ನಡೆದಿತ್ತು. ಸಭೆಗೆ ಗೈರು ಹಾಜರಾಗಿದ್ದ ವಿಚಾರವೇ ಇದೀಗ ಹಲವು ನಾಯಕರಿಗೆ ಹುದ್ದೆ ಕಳೆದುಕೊಳ್ಳುವಂತೆ ಮಾಡಿದೆ.

ಇದನ್ನು ನೋಡಿ : ನಾಳೆ ರಾಜೀನಾಮೆ ಕೊಡ್ತಾರಾ CM SIDDU?- ತೀವ್ರ ಕುತೂಹಲ ಕೆರಳಿಸ್ತಾ ಇದೆ SIDDU ನಡೆ




