SRH vs RR : ಇಂದು ಎಲಿಮಿನೇಟರ್ ಫೈಟ್! ಸೋತರೇ ಟೂರ್ನಿಯಿಂದ ಔಟ್!

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪ್ಲೇ-ಆಫ್ ಹಂತ ಆರಂಭವಾಗಿದ್ದು, ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ಮತ್ತು ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಲಿವೆ.
ಎರಡು ತಂಡಗಳಿಗೆ ‘ಮಾಡು ಇಲ್ಲವೇ ಮಡಿ’ ಪಂದ್ಯ
ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯ ಎರಡೂ ತಂಡಗಳಿಗೆ ‘ಮಾಡು ಇಲ್ಲವೇ ಮಡಿ’ ಸಮರವಾಗಿದ್ದು, ಗೆಲ್ಲುವ ತಂಡ ಕ್ವಾಲಿಫೈಯರ್-2 ಗೆ ಪ್ರವೇಶಿಸಲಿದೆ. ಅಲ್ಲಿ ಈಗಾಗಲೇ ಕಾಯುತ್ತಿರುವ ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಾಡಬೇಕಿದೆ. ಸೋತ ತಂಡವು ಐಪಿಎಲ್ 2026ರ ಫೈನಲ್ ರೇಸ್ನಿಂದ ಹೊರಬೀಳಲಿದೆ.
ಇದನ್ನು ಓದಿ : Gujarat ವಿರುದ್ಧ ಭರ್ಜರಿ ಜಯ – RCB ಫೈನಲ್ಗೆ ರಾಯಲ್ ಎಂಟ್ರಿ..!!

ಭರ್ಜರಿ ಕಮ್ಬ್ಯಾಕ್
ಟೂರ್ನಿಯ ಆರಂಭದಲ್ಲಿ ಸತತ ಸೋಲುಗಳಿಂದ ಹಿನ್ನಡೆ ಅನುಭವಿಸಿದ್ದ ಹೈದರಾಬಾದ್ ತಂಡ, ನಂತರ ಭರ್ಜರಿ ಕಮ್ಬ್ಯಾಕ್ ಮಾಡಿ ಅಮೋಘ ಪ್ರದರ್ಶನ ನೀಡಿತು. ನಿರಂತರ ಗೆಲುವಿನ ಮೂಲಕ 18 ಅಂಕಗಳನ್ನು ಕಲೆಹಾಕಿದ SRH ಆತ್ಮವಿಶ್ವಾಸದಿಂದ ಪ್ಲೇ-ಆಫ್ ಪ್ರವೇಶಿಸಿದೆ.
SRH vs RR – ಬ್ಯಾಕ್-ಟು-ಬ್ಯಾಕ್ ಗೆಲುವು ಸಾಧಿಸಿ ಮತ್ತೆ ಫಾರ್ಮ್ಗೆ ಮರಳಿದ RR
ಇನ್ನೊಂದೆಡೆ, ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಸತತ ಜಯಗಳಿಸಿ ಭರ್ಜರಿ ಆರಂಭ ಪಡೆದಿದ್ದ ರಾಜಸ್ಥಾನ್ ರಾಯಲ್ಸ್ ಮಧ್ಯಂತರದಲ್ಲಿ ಲಯ ಕಳೆದುಕೊಂಡಿತ್ತು. ಆದರೆ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ಬ್ಯಾಕ್-ಟು-ಬ್ಯಾಕ್ ಗೆಲುವು ಸಾಧಿಸಿ ಮತ್ತೆ ಫಾರ್ಮ್ಗೆ ಮರಳಿದ RR, ಇದೀಗ ಎಲಿಮಿನೇಟರ್ನಲ್ಲಿ ಗೆಲುವಿನ ವಿಶ್ವಾಸದಲ್ಲಿದೆ.

ಇದನ್ನು ನೋಡಿ : ರಾಜೀನಾಮೆ ಬಗ್ಗೆ ಕೇಳುತ್ತಿದ್ದಂತೆ ಹೊರಟ ಸಿದ್ದು ರಾಜೀನಾಮೆ ಗುಟ್ಟು ಬಿಟ್ಟು ಕೊಡದ ಸಿದ್ದರಾಮಯ್ಯ




