Karnataka Weather : ರಾಜ್ಯದ ಹಲವೆಡೆ ಗುಡುಗು–ಸಿಡಿಲು ಸಹಿತ ಭಾರೀ ಮಳೆಯಾಗುತ್ತಿದ್ದು, ರಾಯಚೂರು, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಅವಾಂತರಗಳು ವರದಿಯಾಗಿವೆ.

Karnataka Weather : ರಾಯಚೂರು ಜಿಲ್ಲೆಯಲ್ಲಿ ಬೆಳಗಿನ ಜಾವದಿಂದಲೇ ಗುಡುಗು ಮತ್ತು ಸಿಡಿಲು ಸಹಿತ ಭಾರೀ ಮಳೆ ಸುರಿಯುತ್ತಿದೆ. ಮಳೆ ನಿರಂತರವಾಗಿ ಮುಂದುವರಿದಿರುವುದರಿಂದ ಜನಜೀವನ ಸ್ವಲ್ಪ ಮಟ್ಟಿಗೆ ಅಸ್ತವ್ಯಸ್ತವಾಗಿದೆ.
ಇದರ ನಡುವೆ ಬೀದಿ ವ್ಯಾಪಾರಿಗಳು ಮಳೆಯಲ್ಲೇ ತರಕಾರಿ ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡುಬಂದಿವೆ.
ಕಡಗಂದೊಡ್ಡಿ ಗ್ರಾಮದಲ್ಲಿ ರೈತ ವಿರೇಶ್ ಅವರಿಗೆ ಸಿಡಿಲು ಬಡಿದಿದ್ದು, ಅವರು ಗಾಯಗೊಂಡಿದ್ದಾರೆ.
ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.
MUST READ : Gujarat ವಿರುದ್ಧ ಭರ್ಜರಿ ಜಯ – RCB ಫೈನಲ್ಗೆ ರಾಯಲ್ ಎಂಟ್ರಿ..!!

ಕಲಬುರಗಿ: ಬಿಸಿಲಿನ ನಂತರ ತಂಪು ತಂದ ಮಳೆ
ಕಲಬುರಗಿ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಗುಡುಗು–ಸಿಡಿಲು ಸಹಿತ ಮಳೆಯಾಗುತ್ತಿದೆ.ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜನರಿಗೆ ಈ ಮಳೆ ತಂಪು ನೀಡಿದರೂ, ಕೆಲವೆಡೆ ಅಲ್ಪ ಅಡಚಣೆಗಳು ಉಂಟಾಗಿವೆ. ಹವಾಮಾನ ಇಲಾಖೆಯ ಪ್ರಕಾರ ಇಂದು ಮಧ್ಯಾಹ್ನದವರೆಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.

ಬೀದರ್: ಭಾರೀ ಮಳೆ, ಸಿಡಿಲು ಮತ್ತು ಬಿರುಗಾಳಿ ಅವಾಂತರ
ಬೀದರ್ ಜಿಲ್ಲೆಯಲ್ಲಿ ತಡರಾತ್ರಿ ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಹಲವು ಹಾನಿಗಳು ಸಂಭವಿಸಿವೆ. ಜಿಲ್ಲಾ ರಂಗಮಂದಿರ ಪ್ರದೇಶ ಬಹುತೇಕ ಜಲಾವೃತ ಸುಮಾರು 2 ಅಡಿ ನೀರು ನಿಂತಿದೆ ಅಕ್ಕಮಹಾದೇವಿ ಕಾಲೇಜಿನ ಕಾಂಪೌಂಡ್ ಕುಸಿತ ಇದಲ್ಲದೆ, ಹುಲಸೂರು ಪಟ್ಟಣದಲ್ಲಿ ಮನೆ ಮೇಲಿಂದ ಕಲ್ಲು ಬಿದ್ದು ಬಾಲಕಿ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ.

ಜಿಲ್ಲೆಯಲ್ಲಿ ಇನ್ನೂ ಮಳೆ ಮುಂದುವರಿಯುತ್ತಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ರಾಜ್ಯದ ಹಲವೆಡೆ ಮಳೆಯು ತಂಪು ತಂದಿದ್ದರೂ, ಗುಡುಗು–ಸಿಡಿಲು ಹಾಗೂ ಬಿರುಗಾಳಿಯಿಂದ ಸ್ಥಳೀಯವಾಗಿ ಹಾನಿ ಮತ್ತು ಆತಂಕ ಉಂಟಾಗಿದೆ. ಅಧಿಕಾರಿಗಳು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ.
MUST READ : ರಾಜೀನಾಮೆ ಬಗ್ಗೆ ಕೇಳುತ್ತಿದ್ದಂತೆ ಹೊರಟ ಸಿದ್ದು ರಾಜೀನಾಮೆ ಗುಟ್ಟು ಬಿಟ್ಟು ಕೊಡದ ಸಿದ್ದರಾಮಯ್ಯ



