ಧಾರಾಕಾರ ಮಳೆಗೆ ತತ್ತರಿಸಿದ Banglore – ಕೆ.ಆರ್. ಮಾರ್ಕೆಟ್ ಹಾಗೂ ಹೊಟೇಲ್ಗೆ ನುಗ್ಗಿದ ಮಳೆ ನೀರು.!

ಸಿಲಿಕಾನ್ ಸಿಟಿ Banglore ನಲ್ಲಿ ಸಂಜೆ ಸುರಿದ ಧಾರಾಕಾರ ಮಳೆಗೆ, ಜನರು ತತ್ತರಿಸಿ ಹೋಗಿದ್ದಾರೆ. ಬ್ಯಾಡ್ರಳ್ಳಿ, ಸುಂಕದ ಕಟ್ಟೆ, ಕಾಮಾಕ್ಷಿಪಾಳ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಗಿದ್ದು, ರಸ್ತೆಗಳು ಕೆರೆಯಂತಾಗಿವೆ. ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದ್ದು, ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.

ರಸ್ತೆಗಳಲ್ಲಿ ಜಲಾವೃತ – ಸವಾರರ ಪರದಾಟ
ಇನ್ನು ಧಾರಾಕಾರ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ದ್ವಿಚಕ್ರ ವಾಹನ ಸವಾರರು ಸಂಕಷ್ಟ ಅನುಭವಿಸಿದ್ದಾರೆ. ಇನ್ನು ಕೆ.ಆರ್ ಮಾರ್ಕೆಟ್ನ ಫ್ಲವರ್ ಮಾರ್ಕೆಟ್ಗೆ ಮಳೆ ನೀರು ನುಗ್ಗಿದ್ದು, ಅರ್ಧ ಅಡಿ ಮಟ್ಟಿಗೆ ನೀರು ನಿಂತ ಪರಿಣಾಮ ವ್ಯಾಪಾರಿಗಳು ಪರದಾಡುವಂತಾಯಿತು. ಅಲ್ದೇ ಅಂಗಡಿಗಳ ಒಳಗೆ ನುಗ್ಗಿದ ನೀರನ್ನು ಹೊರ ಹಾಕಲು ವ್ಯಾಪಾರಿಗಳು ಹರಸಾಹಸ ಪಟ್ಟರು.

ಶೇಷಾದ್ರಿಪುರಂ ಹೋಟೆಲ್ಗೂ ನೀರು ನುಗ್ಗಿ ಅವಾಂತರ
ಇತ್ತ ಶೇಷಾದ್ರಿಪುರಂನಲ್ಲಿರುವ ಬೆಂಗಳೂರು ಕೆಫೆ ಹೋಟೆಲ್ಗೆ ಕೂಡ ಮಳೆ ನೀರು ನುಗ್ಗಿದ್ದು, ಸಿಬ್ಬಂದಿ ನೀರನ್ನು ಹೊರ ಹಾಕುವ ಕೆಲಸದಲ್ಲಿ ತೊಡಗಿರುವ ದೃಶ್ಯಗಳು ಕಂಡುಬಂದ್ವು. ಹಠಾತ್ ಸುರಿದ ಮಳೆಯಿಂದ ಜನರು ತೀವ್ರ ತೊಂದರೆ ಅನುಭವಿಸಿದರು.
ಇದನ್ನು ಓದಿ : ಧಾರಾಕಾರ ಮಳೆಗೆ ಗೋಡೆ ಕುಸಿತ | ಮಳೆಗೆ ದುರಂತ ಅಂತ್ಯಕಂಡ ಬಾಲಕಿ

Banglore – ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತ
ಇನ್ನೊಂದೆಡೆ ಭಾರೀ ಗಾಳಿ ಸಹಿತ ಮಳೆಯಿಂದ ನಗರದ ಹಲವು ಕಡೆ ಮರಗಳು ಉರುಳಿ ಬಿದ್ದಿವೆ. ಪೀಣ್ಯದ ಬಿ.ಎಫ್.ಡಬ್ಲ್ಯೂ ರಸ್ತೆಯಲ್ಲಿ ಮರ ಉರುಳಿ ಬಿದ್ದ ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಇದನ್ನು ನೋಡಿ : ADDRESS ಕೇಳೊ ನೆಪದಲ್ಲಿ ಬಂದ ಕಳ್ಳರು ಮನೆಗೆ ನುಗ್ಗಿ ಅಜ್ಜಿಯ ಚಿನ್ನದ ಸರ ರಾಬರಿ




