CM ಬಗ್ಗೆ ಪೋಸ್ಟ್ – ‘ಒಂದು ಯುಗ ಅಂತ್ಯಗೊಳ್ಳುತ್ತಿರುವಂತೆ ಕಾಣುತ್ತಿದೆ’.

ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತು ವದಂತಿಗಳು ತೀವ್ರ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಸಾಮಾಜಿಕ ಜಾಲತಾಣ X ನಲ್ಲಿ ‘ಅಖಂಡ ಲಿಂಗಾಯತ’ ಪೇಜ್ ಹಂಚಿಕೊಂಡಿರುವಪೋಸ್ಟ್ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
“ಒಂದು ಯುಗ ಅಂತ್ಯಗೊಳ್ಳುತ್ತಿರುವಂತೆ ಕಾಣುತ್ತಿದೆ”
“ಒಂದು ಯುಗ ಅಂತ್ಯಗೊಳ್ಳುತ್ತಿರುವಂತೆ ಕಾಣುತ್ತಿದೆ” ಎಂಬ ಶೀರ್ಷಿಕೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್ನಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಪಯಣ, ಅಹಿಂದ ವರ್ಗಗಳ ಪರ ಹೋರಾಟ ಹಾಗೂ ಜನಪರ ಆಡಳಿತವನ್ನು ಮುಕ್ತಕಂಠದಿಂದ ಶ್ಲಾಘಿಸಲಾಗಿದೆ.

ಪೋಸ್ಟ್ನಲ್ಲಿ ಏನಿದೆ..?
“ಕರ್ನಾಟಕ ರಾಜಕಾರಣದ ಧ್ರುವತಾರೆ, ಅಹಿಂದ ವರ್ಗಗಳ ಗಟ್ಟಿ ಧ್ವನಿ ಹಾಗೂ ರಾಜ್ಯ ಕಂಡ ಅತ್ಯಂತ ಪ್ರಭಾವಿ ಜನನಾಯಕರಲ್ಲಿ ಒಬ್ಬರಾದ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿವೆ. ಈ ಸುದ್ದಿ ಸುಳ್ಳಾಗಲಿ ಎಂದು ಕೋಟ್ಯಂತರ ಜನರು ಪ್ರಾರ್ಥಿಸುತ್ತಿದ್ದಾರೆ” ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
CM ಸಿದ್ದರಾಮಯ್ಯ ಅವರು ನೀಡಿದ ಕೊಡುಗೆ ಅನನ್ಯ
ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಹಾಗೂ ಶರಣರ ಸಿದ್ಧಾಂತಗಳ ಪ್ರಸಾರಕ್ಕೆ CM ಸಿದ್ದರಾಮಯ್ಯ ಅವರು ನೀಡಿದ ಕೊಡುಗೆ ಅನನ್ಯವಾದದ್ದು ಎಂದು ಬೆಂಬಲಿಗರು ಸ್ಮರಿಸುತ್ತಿದ್ದಾರೆ.ಲಿಂಗಾಯತ ಸಮುದಾಯದ ಹೆಸರಿನಲ್ಲಿ ರಾಜಕಾರಣ ಮಾಡುವ ಹಲವು ನಾಯಕರಿಗಿಂತಲೂ ಮಿಗಿಲಾಗಿ, ಸಿದ್ದರಾಮಯ್ಯ ಅವರು ಶರಣರ ಕಲ್ಯಾಣ ಕ್ರಾಂತಿಯ ಆಶಯಗಳನ್ನು ಮುನ್ನೆಡೆಸಿದರು. ಜಗದ್ಗುರು ಬಸವಣ್ಣನವರ ತತ್ವಗಳನ್ನು ಆಡಳಿತದಲ್ಲಿ ಅಳವಡಿಸಿಕೊಂಡು, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಕ್ಕೆ ಅವರು ನೀಡಿದ ಬೆಂಬಲವನ್ನು ಸಮುದಾಯವು ಎಂದಿಗೂ ಮರೆಯಲು ಸಾಧ್ಯವಿಲ್ಲ.
ಇದನ್ನು ಓದಿ :

ರಾಜೀನಾಮೆ ನಿರ್ಧಾರವು ತುಂಬಲಾರದ ದೊಡ್ಡ ಶೂನ್ಯ
ಸಾಮಾಜಿಕ ನ್ಯಾಯ, ಸಮಾಜವಾದಿ ಚಿಂತನೆ ಹಾಗೂ ಜನಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಸಿದ್ದರಾಮಯ್ಯ ಅವರ ಬದ್ಧತೆಯನ್ನು ಉಲ್ಲೇಖಿಸಿರುವ ಪೋಸ್ಟ್, ಅವರ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ತುಂಬಲಾರದ ಶೂನ್ಯವನ್ನು ಸೃಷ್ಟಿಸಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದೆ.
ಸದ್ಯ ರಾಜೀನಾಮೆ ಕುರಿತ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ ಈ ಕುರಿತ ಚರ್ಚೆಗಳು ರಾಜಕೀಯ ವಲಯದ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಇದನ್ನು ನೋಡಿ : ಸದ್ದಿಲ್ಲದೇ ರಂಗೇರ್ತಿದೆ HIRIYURU BY-ELECTION ಅಖಾಡ – ಕ್ಷೇತ್ರದ ಜನರ ಸೇವೆ ಮಾಡ್ತಿದ್ದಾರೆ ATTICA BABU..!




