ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ – ATM ನಿಂದ ಹಣ ಡ್ರಾ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ.!

ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕ ಜನರು ತುರ್ತು ಸಂದರ್ಭಗಳಲ್ಲಿ ನೆರವಾಗಲಿ ಎಂಬ ಉದ್ದೇಶದಿಂದ ಕ್ರೆಡಿಟ್ ಕಾರ್ಡ್ಗಳನ್ನು ಬಳಸುತ್ತಿದ್ದಾರೆ. ಕೆಲವರ ಬಳಿಯಂತೂ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ಗಳಿರುತ್ತವೆ. ಕೈಯಲ್ಲಿ ಹಣವಿಲ್ಲದಿದ್ದರೂ ಅಗತ್ಯ ವಸ್ತುಗಳನ್ನು ಖರೀದಿಸಲು, ಇನ್ಸ್ಟಂಟ್ ಡಿಸ್ಕೌಂಟ್ ಹಾಗೂ ಕ್ಯಾಶ್ಬ್ಯಾಕ್ ಆಫರ್ಗಳನ್ನು ಪಡೆಯಲು ಕ್ರೆಡಿಟ್ ಕಾರ್ಡ್ ಉತ್ತಮ ಆಯ್ಕೆಯಾಗಿದೆ. ಆದರೆ, ಅರಿವಿಲ್ಲದೆ ಮಾಡುವ ಕೆಲವು ತಪ್ಪುಗಳು ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು.
ATMನಲ್ಲಿ ಹಣ ಡ್ರಾ ಮಾಡಿದರೆ ಏನಾಗುತ್ತದೆ?
ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಅಥವಾ ಡಿಜಿಟಲ್ ಪಾವತಿ ಮಾಡಿದರೆ, ಬಿಲ್ ಪಾವತಿಸಲು ಸುಮಾರು 45 ದಿನಗಳವರೆಗೆ ಬಡ್ಡಿರಹಿತ ಅವಧಿ ದೊರೆಯುತ್ತದೆ. ಆದರೆ, ಅದೇ ಕಾರ್ಡ್ ಬಳಸಿ ATM ನಿಂದ ನಗದು ಹಣ ಡ್ರಾ ಮಾಡಿದರೆ ಈ ಸೌಲಭ್ಯ ಅನ್ವಯಿಸುವುದಿಲ್ಲ.
ನೀವು ಹಣ ಡ್ರಾ ಮಾಡಿದ ದಿನದಿಂದಲೇ ಬಡ್ಡಿ ಲೆಕ್ಕಾಚಾರ ಆರಂಭವಾಗುತ್ತದೆ. ಜೊತೆಗೆ ‘ಕ್ಯಾಶ್ ಅಡ್ವಾನ್ಸ್ ಫೀಸ್’ ಹೆಸರಿನಲ್ಲಿ ಹೆಚ್ಚುವರಿ ಶುಲ್ಕವೂ ವಿಧಿಸಲಾಗುತ್ತದೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಮೂಲಕ ಎಟಿಎಂನಲ್ಲಿ ಹಣ ತೆಗೆಯುವುದು ಆರ್ಥಿಕವಾಗಿ ನಷ್ಟಕಾರಿಯಾಗಬಹುದು.

ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
* ಒಂದು ಕಾರ್ಡ್ ಬಿಲ್ ತೀರಿಸಲು ಮತ್ತೊಂದು ಕಾರ್ಡ್ ಬಳಕೆ
ಒಂದು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಮತ್ತೊಂದು ಕಾರ್ಡ್ ಬಳಸುವುದು ಅಪಾಯಕಾರಿ ಕ್ರಮವಾಗಿದೆ.
ಇದು ತಾತ್ಕಾಲಿಕ ಪರಿಹಾರ ನೀಡಿದರೂ, ಬಳಿಕ ಬಡ್ಡಿಯ ಮೇಲೆ ಬಡ್ಡಿ ಸೇರಿ ಸಾಲದ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ.
* ಆಫರ್ ನೋಡಿ ಅನಗತ್ಯ ಖರೀದಿ
ಆನ್ಲೈನ್ ಶಾಪಿಂಗ್ ತಾಣಗಳಲ್ಲಿ ಸಿಗುವ ಡಿಸ್ಕೌಂಟ್ ಮತ್ತು ಆಫರ್ಗಳಿಗೆ ಮಾರು ಹೋಗಿ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸಬೇಡಿ. ನಂತರ EMI ಹಾಗೂ ಬಿಲ್ ಪಾವತಿ ಒತ್ತಡ ಹೆಚ್ಚಾಗಬಹುದು.
* ಯೋಜನೆ ಇಲ್ಲದ ಖರ್ಚು
ಪ್ಲಾನಿಂಗ್ ಇಲ್ಲದೆ ನಿರಂತರವಾಗಿ ಕಾರ್ಡ್ ಬಳಸಿದರೆ, ತಿಂಗಳ ಕೊನೆಯಲ್ಲಿ ಬಿಲ್ ಪಾವತಿಸಲು ಕಷ್ಟವಾಗಬಹುದು. ಆದ್ದರಿಂದ ಆದಾಯ ಮತ್ತು ಖರ್ಚಿನ ಲೆಕ್ಕಾಚಾರ ಮಾಡಿಕೊಂಡು ಮಾತ್ರ ಕ್ರೆಡಿಟ್ ಕಾರ್ಡ್ ಬಳಸುವುದು ಉತ್ತಮ.
ಇದನ್ನು ಓದಿ : ಆರ್ಬಿಐ ಶಾಕಿಂಗ್ ನಿರ್ಧಾರ – ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕ್!

ಜಾಣ್ಮೆಯಿಂದ ಬಳಸಿ, ಸಾಲದ ಸುಳಿಯಿಂದ ದೂರವಿರಿ
ಸರಿಯಾದ ಯೋಜನೆ ಮತ್ತು ಜವಾಬ್ದಾರಿಯುತ ಬಳಕೆಯ ಮೂಲಕ ಕ್ರೆಡಿಟ್ ಕಾರ್ಡ್ಗಳು ಉಪಯುಕ್ತ ಆರ್ಥಿಕ ಸಾಧನವಾಗಬಹುದು.
ಆದರೆ, ನಿಯಂತ್ರಣವಿಲ್ಲದ ಬಳಕೆ ನಿಮ್ಮನ್ನು ಸಾಲದ ಸುಳಿಗೆ ತಳ್ಳಬಹುದು. ಹೀಗಾಗಿ ಕ್ರೆಡಿಟ್ ಕಾರ್ಡ್ ಹೊಂದಿರುವವರು ಇಂದಿನಿಂದಲೇ ಎಚ್ಚರಿಕೆಯಿಂದ ಬಳಸುವುದು ಅಗತ್ಯ.

ಇದನ್ನು ನೋಡಿ : ಖಾಸಗಿ ಲೇಔಟ್ ನಲ್ಲಿದ್ದ ಶೆಡ್ ಗಳ ಧ್ವಂಸ – ರಾತ್ರೋ ರಾತ್ರಿ ಬೀದಿಗೆ ಬಿದ್ದ ಕುಟುಂಬಗಳು




