Mysuru : ಬೈಕ್ ಸ್ಕಿಡ್ ಆಗಿ ಅಪಘಾತ – 15 ದಿನಗಳ ಹಿಂದಷ್ಟೇ ಮದ್ವೆಯಾಗಿದ್ದ ನವವಿವಾಹಿತೆ ಸಾವು

Mysuru : ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದ ಪರಿಣಾಮ ನವವಿವಾಹಿತೆ ಸಾವನ್ನಪ್ಪಿರುವ ಘಟನೆ ಮೈಸೂರಿನ ಆರ್.ಟಿ.ನಗರದ ಸಮೀಪ ನಡೆದಿದೆ. ಮೈಸೂರು ತಾಲೂಕಿನ ಮಾಕನಹುಂಡಿ ಗ್ರಾಮದ ಮೇಘನಾ (20) ಮೃತ ಯುವತಿ.
ನವವಿವಾಹಿತೆ ದಾರುಣ ಸಾವು
ಗುರುವಾರ ಸಂಜೆ ದಂಪತಿ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಆರ್.ಟಿ.ನಗರ ಸಮೀಪ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದಿದೆ. ಅಪಘಾತದ ವೇಳೆ ಮೇಘನಾ ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದ್ದು, ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನು ಓದಿ : ತುಮಕೂರಿನಲ್ಲಿ ಭೀಕರ ಅಪಘಾತ – ಸ್ಥಳದಲ್ಲೇ ಅಣ್ಣ-ತಂಗಿ ಸಾವು

Mysuru – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಅಪಘಾತದಲ್ಲಿ ಪತಿ ಪುನೀತ್ ಅವರ ತಲೆ, ಕೈ ಹಾಗೂ ಕಾಲಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮೇಘನಾ ಅವರ ಕುಟುಂಬಸ್ಥರು ತೀವ್ರ ದುಃಖದಲ್ಲಿದ್ದಾರೆ.
ಮದುವೆಯಾದ ಕೆಲವೇ ದಿನಗಳಲ್ಲಿ ಮಗಳು ಸಾವನ್ನಪ್ಪಿರುವುದು ಅವರಿಗೆ ತುಂಬಾ ನೋವುಂಟು ಮಾಡಿದೆ. ಬಿದರಗೂಡು ಗ್ರಾಮದಲ್ಲಿ ಈ ಘಟನೆಯು ತೀವ್ರ ಆಘಾತವನ್ನುಂಟು ಮಾಡಿದೆ.

ಇದನ್ನು ನೋಡಿ : ರಾಜ್ಯಾಧ್ಯಕ್ಷರ ಬಗ್ಗೆ ಹೈಕಮಾಂಡ್ಗೆ ಭಯ – ಶೀಘ್ರದಲ್ಲೇ ಅವ್ರಿಗೆ ಸತ್ಯ ತಿಳಿಯುತ್ತೇ




