ಇದು ಶಾಲೆಯೋ..? ಅಪಾಯದ ಅಡ್ಡೆಯೋ..? ಹಾವಿನಿಂದ ಕೂದಲೆಳೆ ಅಂತರದಲ್ಲಿ ಬಚಾವ್ ಆದ ಮಕ್ಕಳು-ಶಿಕ್ಷಕರು

ತುಮಕೂರು ತಾಲ್ಲೂಕು, ಹೆಬ್ಬೂರು ಹೋಬಳಿ, ಗವಿಯಪ್ಪನ ಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಹಾವು ಕಾಣಿಸಿಕೊಂಡಿದ್ದು, ಕೂದಲೆಳೆಯ ಅಂತರದಲ್ಲಿ ಶಿಕ್ಷಕರು ಹಾಗೂ ಮಕ್ಕಳು ಪಾರಾಗಿದ್ದಾರೆ. ಇನ್ನು ಶಾಲಾ ಆವರಣಕ್ಕೆ ಹಾವು ಮಾತ್ರವಲ್ಲದೆ ಆಗಾಗ ಕಾಡುಪ್ರಾಣಿಗಳು ಕೂಡ ಬರುತ್ತಿವೆ ಎನ್ನಲಾಗಿದ್ದು, ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
READ THIS : ವಸತಿ ಶಾಲೆಯಲ್ಲಿ ಬೆಳಗಿನ ಉಪಹಾರ ಸೇವಿಸಿ 15 ವಿದ್ಯಾರ್ಥಿಗಳು ಅಸ್ವಸ್ಥ!
ಶಾಲೆಯಲ್ಲೇ ಇಂತಹ ಪರಿಸ್ಥಿತಿಯಿರುವುದು ಎಷ್ಟು ಸರಿ?
ಮಕ್ಕಳ ಸುರಕ್ಷತೆಯೇ ಮೊದಲ ಆದ್ಯತೆಯಾಗಬೇಕಾದ ಶಾಲೆಯೊಂದರಲ್ಲಿ ಇಂತಹ ಪರಿಸ್ಥಿತಿಯಿರುವುದು ಎಷ್ಟು ಸರಿ? ವ್ಯವಸ್ಥೆ ಸರಿಪಡಿಸಲು ಸಾಧ್ಯವಿಲ್ಲವೆಂದಾದರೆ ಶಾಲೆ ನಡೆಸುವುದೇಕೆ? ಮಕ್ಕಳನ್ನು ಅಪಾಯದ ನಡುವೆ ಕೂರಿಸಿ ಶಿಕ್ಷಣ ನೀಡುವುದಕ್ಕಿಂತ, ಅವರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಲ್ಲವೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ!
ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲೆಗೆ ಅಗತ್ಯವಿರುವ ಬಾಗಿಲು ಮತ್ತು ಕಾಂಪೌಂಡ್ ನಿರ್ಮಿಸಿ, ಶಿಕ್ಷಕರು ಹಾಗೂ ಮಕ್ಕಳ ಸುರಕ್ಷತೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.
MUST WATCH : ಬರ ಘೋಷಣೆಗೆ ರೈತರ ಆಕ್ರೋಶ – ಸರ್ಕಾರಕ್ಕೆ ಖಡಕ್ ವಾರ್ನಿಂಗ್.!




