
ಎರಡು ಕಾರುಗಳ ನಡುವೆ ಭೀಕರ Accident – ಸ್ಥಳದಲ್ಲೇ ನಾಲ್ವರು ಸಾವು ಐವರಿಗೆ ಗಂಭೀರ ಗಾಯ..!
ಎರಡು ಕಾರುಗಳ ನಡುವೆ ಭೀಕರ ಅಪಘಾತವಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ ದಾರಣ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಬಳಿ ನಡೆದಿದೆ. ಈ ಭೀಕರ ಅಪಘಾತದಲ್ಲಿ 3 ವರ್ಷದ ಕಂದಮ್ಮ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

3 ವರ್ಷದ ಮಗು ಸೇರಿ ನಾಲ್ಕು ಮಂದಿ ಸಾವು!
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗೇಟ್ ಬಳಿಯ ತಿರುವಿನಲ್ಲಿ ಶುಕ್ರವಾರ ರಾತ್ರಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂರು ವರ್ಷದ ಮಗು ಸೇರಿದಂತೆ ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತುರುವೇಕೆರೆಯ ದಾವುದ್ ಪಾಷ (31), ಅವರ ಮಗನಾದ ಆನಮ್ ಪಾಷ (3),ಚಿಕ್ಕನಾಯಕನಹಳ್ಳಿಯ ಅನಿಲ್ (32), ವಿವೇಕ್ (31) ಮೃತಪಟ್ಟವರು ಎನ್ನಲಾಗಿದೆ.
ಕಾರುಗಳ ನಡುವೆ ಡಿಕ್ಕಿಯಾಗಿ ಅಪಘಾತ
ಚಿಕ್ಕನಾಯಕನಹಳ್ಳಿ ಕಡೆಗೆ ಬರುತ್ತಿದ್ದ ಕಿಯಾ ಕಾರಿನಲ್ಲಿ ಐದು ಮಂದಿ ಪ್ರಯಾಣಿಸುತ್ತಿದ್ದರು. ಮೂರು ಜನರಿದ್ದ ವೋಕ್ಸ್ ವ್ಯಾಗನ್ ಕಾರು ಕೆ.ಬಿ.ಕ್ರಾಸ್ ಕಡೆಗೆ ಸಂಚರಿಸುತ್ತಿತ್ತು. ತಿರುವಿನಲ್ಲಿ ಎರಡೂ ಕಾರುಗಳು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
READ THIS : ಕಾನ್ಪುರದಲ್ಲಿ ತರಬೇತಿ ವಿಮಾನ ಪತನ – ಇಬ್ಬರು ದುರ್ಮರಣ

ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಸುರೇಶ್ ಬಾಬು
ಇನ್ನೂ ಡಿಕ್ಕಿ ರಭಸಕ್ಕೆ ಕಾರುಗಳು ಸಂಪೂರ್ಣ ನುಜ್ಜುಗುಜ್ಜಾಗಿದ್ದವು.ಮೃದೇಹಗಳು ರಸ್ತೆ ಬದಿಗೆ ಹಾರಿ ಬಿದ್ದಿದ್ದವು. ಸ್ಥಳೀಯರು ಗಾಯಾಳುಗಳನ್ನ ಕಾರಿನಿಂದ ಹೊರ ತೆಗೆಯಲು ಹರಸಾಹಸ ಪಟ್ಟಿದ್ದಾರೆ.
Accident ನಲ್ಲಿ ತೀವ್ರವಾಗಿ ಗಾಯಗೊಂಡಿರುವ ಸೀಮಾ,ಯಾಸ್ಮಿನ್ ತಾಜ್, ಆಸ್ಮಾ,ಅನಿಲ್ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದ್ದ.
ಇನ್ನೂ ಅಪಘಾತ ವಿಚಾರ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

Accident ನ ತೀವ್ರತೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಕಾರುಗಳ ಮುಖಾಮುಖಿ ಡಿಕ್ಕಿ ರಸ್ತೆ ಬದಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,ಅಪಘಾತದ ತೀವ್ರತೆಯ ದೃಶ್ಯ ಸೆರೆಯಾಗಿದೆ.
ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭೀಕರ ಅಪಘಾತದಿಂದ ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿದೆ. ಜವರಾಯನ ಅಟ್ಟಹಾಸಕ್ಕೆ ಮೂರು ವರ್ಷದ ಕಂದಮ್ಮ ಸೇರಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರೋದು ನಿಜಕ್ಕೂ ದುರಂತವೇ ಸರಿ.

MUST WATCH : ದಲಿತನ ಮೇಲೆ ದಬ್ಬಾಳಿಕೆ ಮಾಡಿದ ಬಿಜೆಪಿ – ಬಿಜೆಪಿಗೆ ಸುಳ್ಳೇ ಮನೆ ದೇವರು-ಸಿಎಂ ಡಿಕೆಶಿ




