ಮಟಮಟ ಮಧ್ಯಾಹ್ನವೇ ಹುಬ್ಬಳ್ಳಿಯಲ್ಲಿ ಭೀಕರ Murder ! ನಡುರಸ್ತೆಯಲ್ಲೇ ಮಾಜಿ ರೌಡಿಶೀಟರ್ ನ ಕೊಚ್ಚಿಕೊಂದ ಕಿರಾತಕರು

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಟಮಟ ಮಧ್ಯಾಹ್ನವೇ ರಕ್ತದೋಕುಳಿ ಹರಿದಿದೆ. ಹಾಡಹಗಲೇ ನಡೆದ ಯುವಕನ ಬರ್ಬರ ಹತ್ಯೆಗೆ ಇಡೀ ಹುಬ್ಬಳ್ಳಿಯೇ ಬೆಚ್ಚಿಬಿದ್ದಿದೆ. ಹಳೆ Murder ಪ್ರಕರಣದ ದ್ವೇಷದ ದಳ್ಳೂರಿಗೆ ದಾದಾಪೀರ್ ಅನ್ನೋ ಮಾಜಿ ರೌಡಿಶೀಟರ್ ನ ಹೆಣ ಉರುಳಿಸಿದ್ದಾರೆ.
ನಡುರಸ್ತೆಯಲ್ಲೇ ಮಾಜಿ ರೌಡಿಶೀಟರ್ನ ಕೊಲೆ!
ಹುಬ್ಬಳ್ಳಿಯಲ್ಲಿ ಮತ್ತೇ ಹಾಡಹಗಲೇ ನೆತ್ತರು ಹರಿದಿದೆ. ಜನನೀಬಿಡ ಪ್ರದೇಶದಲ್ಲಿ ಮಟಮಟ ಮಧ್ಯಾಹ್ನವೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ವ್ಯಕ್ತಿಯನ್ನ ಕೊಚ್ಚಿ ಕೊಲೆ ಮಾಡಲಾಗಿದೆ. ಹತ್ಯೆಯಾದ ಯುವಕನನ್ನು 33 ವರ್ಷದ ದಾದಾಪೀರ್ ಉದಯಕರ್ ಎಂದು ಗುರುತಿಸಲಾಗಿದೆ. ಮೂಲತಃ ಹುಬ್ಬಳ್ಳಿ ನಗರದ ನೇಕಾರನಗರದ ನಿವಾಸಿಯಾಗಿದ್ದ ದಾದಾಪೀರ್, ಕಳೆದ ಕೆಲ ವರ್ಷಗಳಿಂದ ಕಲಘಟಗಿ ತಾಲೂಕಿನ ಬೋಗೇನಾಗರಕೊಪ್ಪ ಗ್ರಾಮದಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದ. ನಿನ್ನೆ ಮಧ್ಯಾಹ್ನ ಏಕಾಏಕಿ ನಡುರಸ್ತೆಯಲ್ಲೇ ಇಬ್ಬರು ಕಿರಾತಕರು ದಾದಾಪೀರ್ ನ ಮಾರಕಾಸ್ತ್ರಗಳಿಂದ ಕೊಚ್ಚಿಕೊಲೆಗೈದು ಪರಾರಿಯಾಗಿದ್ದಾರೆ.
READ THIS : 4 ವರ್ಷದ ಮಗನನ್ನೇ ಜಲಾಶಯಕ್ಕೆ ಬಿಸಾಡಿ ಕೊಂದ ಪಾಪಿ ತಂದೆ!

Murder ಗೆ ಕಾರಣವೇನು?
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಬೋಗೇನಾಗರಕೊಪ್ಪದಲ್ಲಿ ಕಳೆದ ಎಂಟು ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ದಾದಾಪೀರ್, ಹಿಂದೆ 2015ರಲ್ಲಿ ನಡೆದ ಮಾರುತಿ ಎಂಬಾತನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಎನ್ನಲಾಗಿದೆ. ಪ್ರಕರಣದಲ್ಲಿ 2017ರಲ್ಲಿ ದಾದಾಪೀರ್ ಖುಲಾಸೆಗೊಂಡಿದ್ದ.ಇದರ ಬೆನ್ನಲ್ಲೇ, ದಾದಾಪೀರ್ ಮೇಲಿದ್ದ ರೌಡಿ ಶೀಟ್ ಕೂಡ ನಾಲ್ಕು ವರ್ಷಗಳ ಹಿಂದೆ ಕ್ಲೋಸ್ ಆಗಿತ್ತು. ದಾದಾಪೀರ್ ನಿನ್ನೆ ಹುಬ್ಬಳ್ಳಿಗೆ ಯಾಕೆ ಬಂದಿದ್ದ,ಕೊಲೆಗೆ ಕಾರಣ ಏನು ಅನ್ನೋದು ಸದ್ಯ ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.
ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ
ಛೋಟಾ ಮುಂಬಯ್ ಖ್ಯಾತಿಗೆ ಪಾತ್ರವಾದ ಹುಬ್ಬಳ್ಳಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ದಾದಾಪೀರ್ ಕೊಲೆಯಿಂದ ಜನರು ಬೆಚ್ಚಿಬಿದ್ದಿದ್ದಾರೆ. ಕೊಲೆಗೈದು ಪರಾರಿಯಾಗಿರೋ ಆರೋಪಿಗಳ ಬೆನ್ನತ್ತಿರೋ ಪೊಲೀಸರು ವಿಶೇಷ ತಂಡಗಳನ್ನ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

MUST WATCH : ಹೇಳೋದು CM ಅವರ ಕೆಲಸ – ನಾವು ನಮ್ಮ ಕೆಲ್ಸ ಮಾಡಿ ತೋರಿಸ್ತಿವಿ




