Chikkamagaluru ನಲ್ಲಿ ನಡು ರಸ್ತೆಯಲ್ಲಿ ತಲ್ವಾರ್ನಿಂದ ಬೃಹತ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ವಿಡಿಯೋ ವೈರಲ್ ಆಗಿದೆ.

Chikkamagaluru ನ ವಾಜಪೇಯಿ ಲೇಔಟ್ನಲ್ಲಿ ಯುವಕನೊಬ್ಬ ನಡು ರಸ್ತೆಯಲ್ಲೇ ತಲ್ವಾರ್ನಿಂದ ಬೃಹತ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.
MUST READ : Tumkur ನಲ್ಲಿ ಅನಧಿಕೃತ ಆಶ್ರಮದ ಮೇಲೆ ದಾಳಿ, 64 ಜನರ ರಕ್ಷಣೆ..!
ಮಹಮದ್ ಸಮೀರ್ ಎಂಬಾತ ಮಧ್ಯರಾತ್ರಿ ಸ್ನೇಹಿತರೊಂದಿಗೆ ಸುಮಾರು 5 ಕೆಜಿಗೂ ಅಧಿಕ ತೂಕದ ಕೇಕ್ ಕತ್ತರಿಸಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಹಾಗೂ ಶಾಂತಿ ಭಂಗ ಮಾಡಿದ ಆರೋಪದಡಿ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಯುವಕನ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
MUST WATCH : ಸರ್ಕಾರಿ ಶಾಲೆಗೆ DC ದಿಢೀರ್ VISIT -ಮಕ್ಕಳಿಗೆ ಪೌಷ್ಠಿಕ ಆಹಾರ ನೀಡದ್ದಕ್ಕೆ ಗರಂ.! | MADHUGIRI NEWS |




