Tumkuru ನಲ್ಲಿ ಅನಧಿಕೃತ ನಿರಾಶ್ರಿತರ ಆಶ್ರಮದ ಮೇಲೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಂಬಿಕಾ ನೇತೃತ್ವದ ತಂಡ ದಾಳಿ ನಡೆಸಿದೆ.

Tumkuru ಜಿಲ್ಲೆ ಶಿರಾ ತಾಲ್ಲೂಕಿನ ಗಾಣದಹುಣಸೆ ಗ್ರಾಮದ ಅನಧಿಕೃತ ಭೇದಸ್ಥ ನಿರಾಶ್ರಿತರ ಆಶ್ರಮದ ಮೇಲೆ ಸಾಧನಾ ಮಹಿಳಾ ಸಂಘಟನೆಯ ದೂರಿನ ಹಿನ್ನಲೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಂಬಿಕಾ ನೇತೃತ್ವದ ತಂಡ ದಾಳಿ ನಡೆಸಿದ್ದು, ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಆಶ್ರಮದಲ್ಲಿ ಬಲವಂತವಾಗಿ ಇಟ್ಟುಕೊಂಡಿದ್ದ 64 ಜನರನ್ನ ರಕ್ಷಿಸಿದ್ದಾರೆ.
ಗೀತಾ ಎನ್ನುವವರ ಮಾಲೀಕತ್ವದಲ್ಲಿ ಈ ಆಶ್ರಮ ನಡೆಯುತ್ತಿದ್ದು, ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಈ ಕೇಂದ್ರ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ರಸ್ತೆ ಬದಿ ಇದ್ದವರನ್ನ ಬಲವಂತವಾಗಿ ಕರೆದುಕೊಂಡು ಬಂದು ಯಾವುದೇ ಮೂಲಭೂತ ಸೌಕರ್ಯ ನೀಡದೇ ಅಕ್ರಮವಾಗಿ ಇಟ್ಟುಕೊಂಡಿರೋದು ಬೆಳಕಿಗೆ ಬಂದಿದೆ.

ಮಹಿಳೆಯರು, ಪುರುಷರು ಸೇರಿ ಒಟ್ಟು 64 ಜನರನ್ನ ಒಂದೇ ಸೂರಿನಡಿ ಇಟ್ಟುಕೊಂಡು ಅವರಿಗೆ ಸರಿಯಾದ ಗಾಳಿ, ಬೆಳಕು, ನೀರು, ಊಟ ಒದಗಿಸದೇ ನಿತ್ಯ ನರಕದಲ್ಲಿ ದಿನದೂಡುತ್ತಿರುವ ದೃಶ್ಯ ದಾಳಿ ವೇಳೆ ಅಧಿಕಾರಿಗಳಿಗೆ ಕಂಡುಬಂದಿದೆ.
ಅನೇಕರಿಗೆ ಕುಟುಂಬಸ್ಥರಿದ್ದು, ಯಾರನ್ನು ಹೊರಗಿನ ಸಂಪರ್ಕಕ್ಕೆ ಸಿಗದಂತೆ ಅಕ್ರಮವಾಗಿ ಇರಿಸಲಾಗಿತ್ತು ಎನ್ನಲಾಗಿದೆ. ಕೆಲವರ ಮೇಲೆ ದೈಹಿಕವಾಗಿ ದೌರ್ಜನ್ಯ ನಡೆಸಲಾಗಿದ್ದು, ಕೆಲವರ ಮೈಮೇಲೆ ಗಾಯದ ಗುರುತುಗಳು ಕೂಡ ಪತ್ತೆಯಾಗಿದೆ.
MUST READ : ವಸತಿ ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು..!!

ಈ ವೇಳೆ ಶಿರಾ ತಹಶೀಲ್ದಾರ್ ಆನಂದ್ ಕುಮಾರ್, ನಗರ ಠಾಣೆ ಇನ್ಸ್ಪೆಕ್ಟರ್ ಪ್ರವೀಣ್ ಕುಮಾರ್, ಶಿಶು ಅಭಿವೃದ್ಧಿ ಅಧಿಕಾರಿ ಹರಿಪ್ರಸಾದ್, ಸಮಾಜ ಕಲ್ಯಾಣ ಅಧಿಕಾರಿ ಬ್ಯಾಡಿಗರ್ ಸೇರಿ ಅನೇಕರು ಹಾಜರಿದ್ದು, ಸದ್ಯ ರಕ್ಷಿಸಿರುವ ಜನರನ್ನ ಕೋರಾ ಸರ್ಕಾರಿ ನಿರಾಶ್ರಿತರ ಕೇಂದ್ರಕ್ಕೆ ರವಾನಿಸಲಾಗಿದೆ.
ಅವರ ಪೂರ್ವಪರ ವಿಚಾರಿಸಿ ಅವರನ್ನ ಕುಟುಂಬಸ್ಥರೊಟ್ಟಿಗೆ ಕಳಿಸುವ ಪ್ರಯತ್ನ ಕೂಡ ನಡೆಯುತ್ತಿದೆ. ನಿರಾಶ್ರಿತರ ಕೇಂದ್ರ ನಡೆಸುತ್ತಿದ್ದ ಗೀತಾ ವಿರುದ್ದ ಇದೀಗ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
MUST WATCH : ತುಮಕೂರಿನ ನಿರುದ್ಯೋಗಿಗಳಿಗೆ GOOD NEWS.!




