ಕರ್ನಾಟಕ ವಿಧಾನ ಪರಿಷತ್ ಸಭಾಪತಿ Basavaraj Horatti ಅವರು ತಮ್ಮ ಸ್ಥಾನಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಈ ಸಂಬಂಧ ಅವರು 2026ರ ಆಗಸ್ಟ್ 7ರಂದು ವಿಧಾನ ಪರಿಷತ್ ಉಪ ಸಭಾಪತಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಪೀಠದ ಘನತೆ ಕಾಪಾಡಲು ನಿರ್ಧಾರ
ವಿಧಾನ ಪರಿಷತ್ತಿನಲ್ಲಿ ಇತ್ತೀಚಿನ ಚುನಾವಣೆಗಳ ಬಳಿಕ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಪಡೆದಿದ್ದು, ಸಭಾಪತಿ Basavaraj Horatti ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಕುರಿತು ಚಿಂತನೆ ನಡೆಸಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಪ್ರಮುಖ ನಾಯಕರು ಹೊರಟ್ಟಿ ಅವರನ್ನು ಭೇಟಿಯಾಗಿ, ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷದ ವರಿಷ್ಠರ ನಿರ್ಧಾರವನ್ನು ತಿಳಿಸಿ ಮನವಿ ಮಾಡಿದ್ದರು.
ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗಿ ಮತದಾನ ನಡೆಯುವುದರಿಂದ ಸಭಾಪತಿ ಪೀಠದ ಗೌರವಕ್ಕೆ ಧಕ್ಕೆಯಾಗಬಾರದು ಹಾಗೂ ಅನಗತ್ಯ ಮುಜುಗರ ತಪ್ಪಿಸಬೇಕು ಎಂಬ ಉದ್ದೇಶದಿಂದ ಸ್ವಇಚ್ಛೆಯಿಂದ ಗೌರವಯುತವಾಗಿ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ಹೊರಟ್ಟಿ ತಿಳಿಸಿದ್ದಾರೆ.
ಇದನ್ನು ಓದಿ : SSLC ಪಾಸಿಂಗ್ ಮಾರ್ಕ್ಸ್ ಕಡಿತದ ವಿರೋಧ- ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರ

ಬಸವರಾಜ ಹೊರಟ್ಟಿ ಅವರ ಪ್ರತಿಕ್ರಿಯೆ
“ನಾನು ಸುದೀರ್ಘ 46 ವರ್ಷಗಳ ರಾಜಕೀಯ ಜೀವನದಲ್ಲಿ 18 ಮುಖ್ಯಮಂತ್ರಿಗಳನ್ನು ಹಾಗೂ ಹಲವು ಸಭಾಪತಿಗಳನ್ನು ನೋಡಿದ್ದೇನೆ. ನನ್ನ ಆಡಳಿತಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಸದನವನ್ನು ಪಕ್ಷಾತೀತವಾಗಿ ನಡೆಸಿಕೊಂಡು ಬಂದಿದ್ದೇನೆ. ಸರ್ಕಾರದ ನಿರ್ಧಾರ ಹಾಗೂ ಪೀಠದ ಘನತೆಯನ್ನು ಎತ್ತಿಹಿಡಿಯುವ ಸಲುವಾಗಿ ಈ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದೇನೆ” ಎಂದು ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಮುಂದಿನ ಆಗಸ್ಟ್ 14ರಂದು ನಡೆಯಲಿರುವ ಕಲಾಪದ ವೇಳೆ ಅವರು ಸದನ ಉದ್ದೇಶಿಸಿ ಮಾತುಗಳನ್ನಾಡಿ ಅಧಿಕೃತವಾಗಿ ನಿರ್ಗಮಿಸಲಿದ್ದಾರೆ.
ಇದನ್ನು ನೋಡಿ : LAKSHMI HEBBALKAR ಕೈತಪ್ಪಿದ ಸಚಿವ ಸ್ಥಾನ – HEBBALKAR ಬೆಂಬಲಿಗರಿಂದ ಪಂಜಿನ ಮೆರವಣಿಗೆ





