ಇಂದು ರಾತ್ರಿಯೇ ಸಚಿವ ಸಂಪುಟ ವಿಸ್ತರಣೆ ವಿಚಾರ ಫೈನಲ್ ಆಗಬಹುದು ಎಂದು ಮಾಜಿ ಸಿಎಂ Siddaramaiah ತಿಳಿಸಿದ್ದಾರೆ.

ಇಂದು ರಾತ್ರಿಯೇ ಸಚಿವ ಸಂಪುಟ ವಿಸ್ತರಣೆ ವಿಚಾರ ಫೈನಲ್ ಆಗಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ Siddaramaiah ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಇಂದು ರಾತ್ರಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ಎಲ್ಲ ತೀರ್ಮಾನಗಳು ಆಗಲಿವೆ. ಇಂದು ರಾತ್ರಿ ಎಲ್ಲವೂ ಫೈನಲ್ ಆಗಬಹುದು” ಎಂದು ಹೇಳಿದರು.
ಇದನ್ನು ಓದಿ : ಸಂಪುಟ ವಿಸ್ತರಣೆಗೆ ಕಸರತ್ತು – ಇಂದು ಹೈಕಮಾಂಡ್ ಜೊತೆ ಸಿಎಂ ಡಿಕೆಶಿ ಸಭೆ

ಸಚಿವ ಸಂಪುಟ ವಿಸ್ತರಣೆ ಯಾವಾಗ ನಡೆಯಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಅದನ್ನು ಮುಖ್ಯಮಂತ್ರಿ ಅವರನ್ನು ಕೇಳಬೇಕು. ವಿಸ್ತರಣೆ ದಿನಾಂಕದ ಬಗ್ಗೆ ಸಿಎಂ ಅವರೇ ಮಾಹಿತಿ ನೀಡುತ್ತಾರೆ” ಎಂದು ಉತ್ತರಿಸಿದರು.

ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ಅಲ್ಲಿಂದ ನೇರವಾಗಿ ಮೈಸೂರಿಗೆ ಆಗಮಿಸಿದರು. ಹಿರಿಯ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮತ್ತೆ ದೆಹಲಿಗೆ ತೆರಳಲಿದ್ದಾರೆ.
ಇದನ್ನು ನೋಡಿ : LOVE ಮಾಡೋದಕ್ಕೆ ಮಾತ್ರ ಆಗುತ್ತೆ ಮದುವೆ ಆಗಲು ಮಾತ್ರ ಆಗಲ್ಲ- ಪ್ರಿಯಕರಿಗೆ ಯುವತಿ ಏನ್ ಮಾಡಿದ್ಳು?




