
ಮಹಾಲಯ ಅಮಾವಾಸ್ಯೆಯಂದೇ PWD ಕಚೇರಿಯಲ್ಲಿ ವಾಮಾಚಾರ! ಹುಣಸೆ ಮರದಲ್ಲಿ ಕಪ್ಪು ಗೊಂಬೆ ಪತ್ತೆ, ಸಿಬ್ಬಂದಿ ಆತಂಕ!
ರಾಯಚೂರಿನ ಸರ್ಕಾರಿ ಕಚೇರಿಯೊಂದರಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದ್ದು, ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿದೆ. ಮಹಾಲಯ ಅಮಾವಾಸ್ಯೆಯ ದಿನವೇ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿರುವ ಹುಣಸೆ ಮರಕ್ಕೆ ಮಾನವ ಆಕೃತಿಯ ಕಪ್ಪು ಗೊಂಬೆಯನ್ನು ನೇತುಹಾಕಿರುವುದು ಪತ್ತೆಯಾಗಿದೆ. ಈ ಘಟನೆ ವಾಮಾಚಾರದ ಶಂಕೆಗೆ ಕಾರಣವಾಗಿದ್ದು, ಸರ್ಕಾರಿ ಕಚೇರಿ ಆವರಣದಲ್ಲಿ ಇಂತಹ ಕೃತ್ಯ ಎಸಗಿದ್ದಾರೆ.
ಹುಣಸೆ ಮರದಲ್ಲಿ ನೇತಾಡುತ್ತಿದ್ದ ಮಾನವಾಕೃತಿಯ ಗೊಂಬೆ
ಹೌದು.. ರಾಯಚೂರಿನ PWD ಕಚೇರಿಯ ಮೇಲ್ಭಾಗದಲ್ಲಿರುವ ಹುಣಸೆ ಮರಕ್ಕೆ ಕಪ್ಪು ಬಣ್ಣದ ಮಾನವಾಕೃತಿಯ ಗೊಂಬೆಯನ್ನು ನೇತುಹಾಕಲಾಗಿತ್ತು. ಕಚೇರಿ ಆವರಣದಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಲು ತೆರಳಿದ್ದ ಸಿಬ್ಬಂದಿಯೊಬ್ಬರಿಗೆ ಮರದಲ್ಲಿ ನೇತಾಡುತ್ತಿದ್ದ ಗೊಂಬೆ ಕಾಣಿಸಿಕೊಂಡಿದೆ. ಕೂಡಲೇ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಮರದಲ್ಲಿದ್ದ ಕಪ್ಪು ಗೊಂಬೆ ತೆಗೆದು ಸುಟ್ಟ ಸಿಬ್ಬಂದಿ
ಇನ್ನು ಮರದಲ್ಲಿ ಕಪ್ಪು ಗೊಂಬೆ ನೇತಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಕಚೇರಿ ಸಿಬ್ಬಂದಿ ಆತಂಕಗೊಂಡಿದ್ದಾರೆ. ಬಳಿಕ ಮರದಲ್ಲಿದ್ದ ಗೊಂಬೆಯನ್ನು ಸುಟ್ಟುಹಾಕಿದ್ದಾರೆ.
ಆದರೆ ಈ ಗೊಂಬೆಯನ್ನು ಯಾರು, ಯಾವ ಉದ್ದೇಶಕ್ಕಾಗಿ ಮರಕ್ಕೆ ನೇತುಹಾಕಿದ್ದರು ಎಂಬುದು ತಿಳಿದುಬಂದಿಲ್ಲ.
READ THIS : CM DK ಶಿವಕುಮಾರ್ ಮನೆ ಬಳಿ ವಾಮಾಚಾರ.!

ಬಾಕಿ ಬಿಲ್ಗಳ ವಿಚಾರಕ್ಕೆ ಕೃತ್ಯ ನಡೆದಿದೆಯಾ..?
ಮತ್ತೊಂದೆಡೆ ಕಚೇರಿಯಲ್ಲಿ ಬಾಕಿ ಉಳಿದಿರುವ ಬಿಲ್ಗಳು ಹಾಗೂ ವಿಲೇವಾರಿಯಾಗದ ಕಡತಗಳ ವಿಚಾರದಲ್ಲಿ ಅಸಮಾಧಾನಗೊಂಡ ಯಾರಾದರೂ ಈ ಕೃತ್ಯ ಎಸಗಿರಬಹುದಾ ಎಂಬ ಅನುಮಾನವೂ ವ್ಯಕ್ತವಾಗಿದೆ.
ಕೃತ್ಯ ಎಸಗಿದವರ ಪತ್ತೆಗೆ ಆಗ್ರಹ
ಇನ್ನು ಸರ್ಕಾರಿ ಕಚೇರಿ ಆವರಣದಲ್ಲೇ ಇಂತಹ ಘಟನೆ ನಡೆದಿದ್ದು, ಸಿಬ್ಬಂದಿಗಳು ಆತಂಕಗೊಂಡಿದ್ದು, ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಚೇರಿ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
PWD ಕಚೇರಿ ಘಟನೆಗೆ ಕಾರಣವೇನು..?
ಒಟ್ಟಿನಲ್ಲಿ ಮಹಾಲಯ ಅಮಾವಾಸ್ಯೆಯ ದಿನವೇ ರಾಯಚೂರಿನ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದ ಹುಣಸೆ ಮರದಲ್ಲಿ ಕಪ್ಪು ಗೊಂಬೆ ಪತ್ತೆಯಾಗಿರುವುದು ಚರ್ಚೆಗೆ ಕಾರಣವಾಗಿದೆ.

MUST WATCH : ಒಳ್ಳೆ ಸುದ್ದಿ ಬೇಕಾ, ಬ್ರೇಕಿಂಗ್ ಬೇಕಾ – ಹೀಗ್ಯಾಕಂದ್ರು ಗೃಹ ಸಚಿವ ಖರ್ಗೆ




