CM ನಿವಾಸದ ಬಳಿ ಇದೆಂಥಾ ಕೃತ್ಯ! ರಸ್ತೆಯಲ್ಲೇ ಕೋಳಿ ಕೊಯ್ದು ವಾಮಾಚಾರ ಮಾಡಿದ್ರಾ?

DK ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಕೇವಲ 4 ದಿನ ಮಾತ್ರ ಆಗಿದೆ. ನೂತನ ಸಿಎಂ ಆದ ಬೆನ್ನಲ್ಲೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಡಿಕೆಶಿ ಸಂಚಾರ ಮಾಡ್ತಾ ಇದ್ದಾರೆ. ಇತ್ತ ಡಿ.ಕೆ ಶಿವಕುಮಾರ್ ಮನೆಯ ಬಳಿಯ ರಸ್ತೆಯಲ್ಲಿ ಯಾರೋ ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರಾ ಎಂಬ ಶಂಕೆ ವ್ಯಕ್ತವಾಗ್ತಿದೆ. ವಾಮಾಚಾರ ಆಗಿರೋದನ್ನ ಕಂಡು ಸುತ್ತಮುತ್ತಲ ಜನರು ಬೆಚ್ಚಿಬಿದಿದ್ದಾರೆ.
DK ನಿವಾಸದ ಬಳಿ ವಾಮಾಚಾರ.!?
ರಾಜ್ಯದ ನೂತನ ಸಿಎಂ ಡಿ.ಕೆ ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಇರುವ ಜಿಬಿಎ ಮೈದಾನದ ಮುಂಭಾಗದ ರಸ್ತೆಯಲ್ಲಿ ವಾಮಾಚಾರದ ವಸ್ತುಗಳು ಪತ್ತೆಯಾಗಿವೆ.
ಸಿಎಂ ಡಿಕೆ ಶಿವಕುಮಾರ್ ಮನೆ ಹಿಂಭಾಗದ ರಸ್ತೆಯಲ್ಲಿ ಮಾಟ ಮಂತ್ರದ ಶಂಕೆ ವ್ಯಕ್ತವಾಗಿದ್ದು. ಸಾರ್ವಜನಿಕರು ಓಡಾಡಲು ಭಯ ಪಡುತ್ತಿದ್ದಾರೆ. ರಸ್ತೆಯಲ್ಲಿ ಮಧ್ಯೆ ವೃತ್ತಾಕಾರ ಹಾಕಿ ನಾಟಿ ಕೋಳಿಯನ್ನು ಕೊಯ್ದು, ನಿಂಬೆಹಣ್ಣುನ್ನು ತುಳಿಸಲಾಗಿದೆ.
ಇದನ್ನೂ ಓದಿ: ಧಗ ಧಗನೇ ಹೊತ್ತಿ ಉರಿದ ಖಾಸಗಿ ಬಸ್ – 17 ಪ್ರಯಾಣಿಕರು ಬಚಾವ್

ಇನ್ನು ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಈ ಕೃತ್ಯ ಎಸಗಿದ್ದು, ಬೆಳಗ್ಗೆ ಅಷ್ಟರಲ್ಲಿ ಕೋಳಿಯನ್ನು ನಾಯಿಗಳು ಎಳೆದೊಯ್ದಿವೆ.. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಪೊಲೀಸರು ವಾಮಾಚಾರ ಮಾಡಿದ್ದ ಕೋಳಿಯನ್ನ ಎತ್ತಿ ಬಿಸಾಡಿದ್ದಾರೆ.
ಇನ್ನು ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಕಲೆ ಹಾಕುವ ಪ್ರಯತ್ನ ಮಾಡ್ತಾ ಇದ್ದು, ತನಿಖೆ ಬಳಿಕ ನಿಜವಾಗಿಯೂ ವಾಮಾಚಾರ ನಡೆದಿದ್ಯಾ ಇಲ್ವಾ ಅನ್ನೋದು ತಿಳಿಯಲಿದೆ.
MUST WATCH : ಕಾರು ಬಿಟ್ಟು ಮೆಟ್ರೋ ಏರಿದ ನೂತನ ಸಿಎಂ ಡಿಕೆಶಿ ಜೊತೆ ಸೆಲ್ಪಿಗೆ ಮುಗಿಬಿದ್ದ ಜನರು




