
Bengaluru | ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ? ತಮಿಳುನಾಡು ಸಚಿವರ ಮಹತ್ವದ ಮಾಹಿತಿ
ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಊಟದ ಮೆನುವಿನಲ್ಲಿ ಚಿಕನ್ ಬಿರಿಯಾನಿ ಸೇರಿಸುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಮುಂದಿಟ್ಟಿದೆ.
ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ?
ಮಕ್ಕಳಿಗೆ ಹೆಚ್ಚಿನ ಪ್ರೋಟೀನ್ ಹಾಗೂ ಅಗತ್ಯ ಪೌಷ್ಟಿಕಾಂಶ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಚರ್ಚಿಸಲಾಗುತ್ತಿದೆ. ಆದರೆ ಈ ಯೋಜನೆಯನ್ನು ತಕ್ಷಣವೇ ಜಾರಿಗೊಳಿಸುವುದಿಲ್ಲಎಂದು ಶಾಲಾ ಶಿಕ್ಷಣ ಸಚಿವ ಎ. ರಾಜಮೋಹನ್ ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಹೇಳಿದ್ದೇನು?
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಆಶಯದಂತೆ ಸರ್ಕಾರಿ ಶಾಲಾ ಮಕ್ಕಳಿಗೆ ವಿವಿಧ ರೀತಿಯ ಪೌಷ್ಟಿಕ ಆಹಾರ ಒದಗಿಸುವ ಕುರಿತು ವಿಶೇಷ ಸಮಿತಿ ರಚಿಸುವ ಚಿಂತನೆ ನಡೆದಿದೆ. ಚಿಕನ್ ಬಿರಿಯಾನಿ ನೀಡುವ ಮೊದಲು ಪ್ರಾಯೋಗಿಕವಾಗಿ ಪೈಲಟ್ ಯೋಜನೆ ಜಾರಿಗೊಳಿಸಿ, ಆಹಾರ ತಯಾರಿಕೆ, ಸ್ವಚ್ಛತೆ, ಆಹಾರ ಸುರಕ್ಷತೆ ಹಾಗೂ ಪೂರೈಕೆ ವ್ಯವಸ್ಥೆಗಳನ್ನು ಪರಿಶೀಲಿಸಲು ಸರ್ಕಾರ ಮುಂದಾಗಿದೆ.
READ THIS : ರಾಜ್ಯದಲ್ಲಿ 40 ಸಾವಿರ ಸರ್ಕಾರಿ ಶಾಲೆಗಳು ಮುಚ್ಚುವ ಭೀತಿ!

ಯೋಜನೆ ಜಾರಿಯಾದ್ರೆ ವಾರಕ್ಕೆ ಒಂದು ಬಾರಿ ಚಿಕನ್ ಬಿರಿಯಾನಿ
ಈ ಕುರಿತು ಮಾತನಾಡಿದ ಸಚಿವ ರಾಜಮೋಹನ್, ಜೈಲಿನಲ್ಲಿರುವ ಕೈದಿಗಳಿಗೆ ಚಿಕನ್ ಬಿರಿಯಾನಿ ನೀಡಲಾಗುತ್ತದೆ. ಹಾಗಿದ್ದರೆ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೂ ಈ ಆಯ್ಕೆ ಸಿಗಬಾರದೇ ಎಂದು ಪ್ರಶ್ನಿಸಿದ್ದಾರೆ. ಬೆಳೆಯುತ್ತಿರುವ ಮಕ್ಕಳಿಗೆ ಅಗತ್ಯವಿರುವ ಪ್ರೋಟೀನ್ ಮತ್ತು ಪೌಷ್ಟಿಕಾಂಶ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಚಿಕನ್ ಬಿರಿಯಾನಿ ಸೇವಿಸದ ವಿದ್ಯಾರ್ಥಿಗಳಿಗೆ ಸಸ್ಯಾಹಾರಿ ಆಹಾರದ ಆಯ್ಕೆಯನ್ನೂ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಯೋಜನೆ ಜಾರಿಯಾದರೆ ವಾರಕ್ಕೆ ಒಂದು ಬಾರಿ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆ ಪರಿಗಣನೆಯಲ್ಲಿದೆ.

ಈ ಯೋಜನೆ ಯಾವ ಪ್ರಮಾಣದಲ್ಲಿ ಜಾರಿಯಾಗಲಿದೆ?
ಸದ್ಯ ಚಿಕನ್ ಬಿರಿಯಾನಿ ಯೋಜನೆ ಪ್ರಸ್ತಾವನೆ ಹಾಗೂ ಪೈಲಟ್ ಹಂತದಲ್ಲಿದ್ದು, ಅಂತಿಮವಾಗಿ ಯೋಜನೆಯನ್ನು ಯಾವ ರೀತಿಯಲ್ಲಿ ಮತ್ತು ಯಾವ ಪ್ರಮಾಣದಲ್ಲಿ ಜಾರಿಗೊಳಿಸಲಾಗುತ್ತದೆ ಎಂಬುದು ಮುಂದಿನ ನಿರ್ಧಾರಗಳ ಬಳಿಕ ಸ್ಪಷ್ಟವಾಗಲಿದೆ.
MUST WATCH : KASTHURIRANGAN ವರದಿ ಚರ್ಚೆಗೆ ಅಧಿವೇಶನ – ಜನ್ರಿಗೆ ತೊಂದರೆಯಾಗದಂತೆ ಕ್ರಮ ಎಂದ CM




